ಮಂಗಳೂರು: ರಸ್ತೆಯಲ್ಲೇ ಮಳೆ ನೀರು ಸಂಗ್ರಹ, ಸಂಚಾರ ಸಂಕಷ್ಟ

7

ಮಂಗಳೂರು: ರಸ್ತೆಯಲ್ಲೇ ಮಳೆ ನೀರು ಸಂಗ್ರಹ, ಸಂಚಾರ ಸಂಕಷ್ಟ

Published:
Updated:
Deccan Herald

ಮಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ ನಿಲ್ಧಾಣದ ಮುಂಭಾಗದ ಬಿಜೈ, ದೇರೆಬೈಲು ಕಡೆಗಿನ ರಸ್ತೆಯ ತಿರುವಿನಲ್ಲಿ ಮಳೆ ನೀರು ಸಂಗ್ರಹಗೊಳ್ಳುತ್ತಿದ್ದು, ವಾಹನಗಳಿಗೆ, ರಸ್ತೆ ದಾಟುವವರಿಗೆ ಸಮಸ್ಯೆಯಾಗಿದೆ.

ರಸ್ತೆ ತಿರುವು ಅಧಿಕ ಪ್ರಮಾಣದಲ್ಲಿ ತಗ್ಗಿರುವುದರಿಂದ ಮಳೆ ನೀರು ಹರಿಯಲು ಪರ್ಯಾಯ ವ್ಯವಸ್ಥೆಯಿಲ್ಲದೆ ಪೂರ್ತಿ ರಸ್ತೆಯಲ್ಲೇ ಕಟ್ಟಿ ನಿಲ್ಲುತ್ತದೆ. ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ರಸ್ತೆಯ ತಿರುವನ್ನು ಸ್ವಲ್ಪ ಎತ್ತರಗೊಳಿಸಿದರೆ ಅಥವಾ ಮಳೆ ನೀರು ಹರಿಯಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದರೆ ಈ ಸಮಸ್ಯೆ ಪರಿಹಾರವಾಗಬಹುದು. ಆದರೆ ಮಂಗಳೂರು ಮಹಾನಗರ ಪಾಲಿಕೆ ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದು, ಜನರಲ್ಲಿ ಅಸಮಾಧಾನ ಉಂಟು ಮಾಡಿದೆ.

ಈ ಪ್ರದೇಶದಲ್ಲಿ ಖಾಸಗಿ ಒಡೆತನದ ಕಟ್ಟಡಗಳಿಗೆ ಅನುಕೂಲವಾಗುವಂತೆ, ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಮಾತ್ರ ಕಲ್ಪಿಸಲಾಗುತ್ತಿದ್ದು, ಬಹುಪಾಲು ಪ್ರದೇಶ ಖಾಸಗಿಯವರ ಹಿಡಿತದಲ್ಲಿದೆ.

ಇದೇ ತಿರುವಿನಲ್ಲಿ ಸಂಚಾರಕ್ಕೆ ಸಂಬಂಧಿಸಿದ ಸೂಚನಾ ಫಲಕವನ್ನೂ ಇರಿಸಲಾಗಿದ್ದು, ಇನ್ನಷ್ಟು ಅಪಾಯಕಾರಿ ಸ್ಥಿತಿಯನ್ನೇ ತಂದೊಡ್ಡಿದೆ.

ಎ.ಜೆ. ಆಸ್ಪತ್ರೆ ಸಮೀಪದಲ್ಲಿರುವ ಮೇಲ್ಸೇತುವೆಯ ಕೆಳಭಾಗದಲ್ಲೂ ಚರಂಡಿ ವ್ಯವಸ್ಥೆಯಿಲ್ಲದೆ ಇದೇ ರೀತಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಈ ರಸ್ತೆಗೆ ಸಮೀಪದಲ್ಲಿಯೇ ರಾಜ್ಯ ರಸ್ತೆ ಸಾರಿಗೆ ನಿಗಮದ 2ನೇ ಡಿಪೋ ಕೂಡಾ ಇದೆ.

ಮಳೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ರಸ್ತೆ, ಚರಂಡಿ ಸಮಸ್ಯೆಗಳನ್ನು ನಿರ್ಲಕ್ಷಿಸುವಂತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !