ಸೋಮವಾರ, ಮೇ 17, 2021
22 °C
ಶಾಸಕ ವೇದವ್ಯಾಸ್ ಕಾಮತ್ ಪ್ರಸ್ತಾವಕ್ಕೆ ಸಮ್ಮತಿ

ಡಿಸಿಸಿ ಬ್ಯಾಂಕ್‌ನಿಂದ ಕೋವಿಡ್ ಸೆಂಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿದ್ದು, ರೋಗಿಗಳ ಚಿಕಿತ್ಸೆಗೆ ನೆರವಾಗಲು ಎಸ್‌ಸಿಡಿಸಿಸಿ ಬ್ಯಾಂಕ್‌ ಮುಂದೆ ಬಂದಿದೆ.

ರೋಗಿಗಳ ಚಿಕಿತ್ಸೆ ಹಾಗೂ ಆಮ್ಲಜನಕದ ಕೊರತೆ ನೀಗಿಸಲು ಸಹಕಾರಿಯಾಗುವಂತೆ ಎಸ್‌ಸಿಡಿಸಿಸಿ ಬ್ಯಾಂಕ್ ವತಿಯಿಂದ ನಗರದಲ್ಲಿ ಸಜ್ಜಿತ ಕೋವಿಡ್ ಸೆಂಟರ್‌ ತೆರೆಯುವಂತೆ ಶಾಸಕ ಡಿ. ವೇದವ್ಯಾಸ ಕಾಮತ್ ಪ್ರಸ್ತಾಪಿಸಿದ್ದರು. ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್‌ ವಾರದಲ್ಲಿ ಉಳ್ಳಾಲ ಸರ್ಸಿಂಗ್‌ ಹೋಂ ಅನ್ನು 50 ಹಾಸಿಗೆಯ ಕೋವಿಡ್‌ ಸೆಂಟರ್‌ ಆಗಿ ಪರಿವರ್ತಿಸುವ ಭರವಸೆ ನೀಡಿದ್ದಾರೆ.

ಮಾದರಿ ಕಾರ್ಯ: ಬ್ಯಾಂಕಿನಲ್ಲಿ ಸೋಮವಾರ ಶಾಸಕ ಡಿ. ವೇದವ್ಯಾಸ ಕಾಮತ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಶಾಸಕರು ನೀಡಿದ ಈ ಪ್ರಸ್ತಾವದ ಬಗ್ಗೆ ಮಾತನಾಡಿದ ಎಂ.ಎನ್ ರಾಜೇಂದ್ರಕುಮಾರ್, ‘ನನ್ನ ಖಾಸಗಿ ಸಂಸ್ಥೆ ವತಿಯಿಂದ ಮಂಗಳೂರಿನ ಉಳ್ಳಾಲ ನರ್ಸಿಂಗ್ ಹೋಂ ಆಸ್ಪತ್ರೆಯನ್ನು ವಾರದೊಳಗೆ ಖರೀದಿಸಿ, 50 ಬೆಡ್‍ಗಳ ಕೋವಿಡ್ ಕೇರ್‌ ಸೆಂಟರ ಅನ್ನು 3 ತಿಂಗಳ ಅವಧಿಗಳಿಗೆ ಬಿಟ್ಟು ಕೊಡುವ ಯೋಜನೆ ರೂಪಿಸುತ್ತೇನೆ’ ಎಂದರು.

ಈ ಕಾರ್ಯ ದೇಶದಲ್ಲಿಯೇ ಮಾದರಿ ಎನಿಸಲಿದೆ. ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಜನರಿಗೆ ಆರೋಗ್ಯ ಸೇವೆ ನೀಡಬೇಕೆಂದು ವೇದವ್ಯಾಸ ಕಾಮತ್‍ ಮನವಿ ಮಾಡಿದ್ದು, ಬ್ಯಾಂಕ್ ವತಿಯಿಂದ ಆಂಬುಲೆನ್ಸ್ ನೀಡಲಾಗುವುದು ಎಂದು ತಿಳಿಸಿದರು.

ಮೇಯರ್ ಪ್ರೇಮಾನಂದ ಶೆಟ್ಟಿ, ಸ್ಮಾರ್ಟ್ ಸಿಟಿ ನಿರ್ದೇಶಕ ಸುಧೀರ್ ಶೆಟ್ಟಿ ಕಣ್ಣೂರು, ಬ್ಯಾಂಕಿನ ನಿರ್ದೇಶಕರಾದ ರಾಜಾರಾಂ ಭಟ್, ದೇವಿ ಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ ಬಾಲ್ಯೊಟ್ಟು, ಸದಾಶಿವ ಉಳ್ಳಾಲ್, ಜೈರಾಜ್ ಬಿ. ರೈ, ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್, ಉಳ್ಳಾಲ ನರ್ಸಿಂಗ್ ಹೋಂ ಆಸ್ಪತ್ರೆಯ ಮಹೇಂದ್ರ ಉಳ್ಳಾಲ್, ವೈದ್ಯಾಧಿಕಾರಿ ಡಾ.ಸಚ್ಚಿದಾನಂದ ರೈ ಮತ್ತು ವಿಜಯ ಕುಮಾರ್ ಶೆಟ್ಟಿ, ನರೇಶ್ ಶೆಣೈ, ಹರಿಕೃಷ್ಣ, ಸೂರಜ್ ಶೆಟ್ಟಿ ಹಾಗೂ ಬ್ಯಾಂಕಿನ ಸಿಇಒ ರವೀಂದ್ರ ಬಿ., ಮಹಾಪ್ರಬಂಧಕ ಗೋಪಿನಾಥ್ ಭಟ್ ಇದ್ದರು. ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಸ್ಮಾರ್ಟ್ ಸಿಟಿ ನಿರ್ದೇಶಕ ಸುಧೀರ್ ಶೆಟ್ಟಿ ಕಣ್ಣೂರು ಅವರನ್ನು ಸನ್ಮಾನಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು