ಬುಧವಾರ, ಅಕ್ಟೋಬರ್ 28, 2020
20 °C
ಇನ್ನೂ ಸ್ಮಾರ್ಟ್‌ ಸಿಟಿಯಾಗಿ ಪರಿವರ್ತನೆಯಾಗದ ಮಂಗಳೂರು

ರಾಜಕೀಯ ಮೇಲಾಟ: ಯೋಜನೆಗಳು ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ಕರಾವಳಿಯ ಈ ನಗರದಲ್ಲಿ ನಾಲ್ಕು ವರ್ಷಗಳಲ್ಲಿ ₹10.62 ಕೋಟಿ ಮೊತ್ತದ ಏಳು ಕಾಮಗಾರಿಗಳು ಮಾತ್ರ ಪೂರ್ಣವಾಗಿವೆ.

ಸ್ಮಾರ್ಟ್‌ ಸಿಟಿಗೆ ₹ 301 ಕೋಟಿ ಬಿಡುಗಡೆಯಾಗಿದ್ದರೂ, ಖರ್ಚಾಗಿರುವುದು ₹ 41.43 ಕೋಟಿ ಮಾತ್ರ. ಒಟ್ಟು 47 ಕಾಮಗಾ ರಿಗಳಲ್ಲಿ ಏಳು ಕಾಮಗಾರಿಗಳು ಪೂರ್ಣವಾಗಿವೆ. ₹ 558.78 ಕೋಟಿ ವೆಚ್ಚದ 26 ಕಾಮಗಾರಿಗಳು ಪ್ರಗತಿಯಲ್ಲಿವೆ. ಸುಮಾರು ₹81 ಕೋಟಿ ವೆಚ್ಚದ ನಾಲ್ಕು ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. ₹259.54 ಕೋಟಿ ವೆಚ್ಚದ ಐದು ಕಾಮಗಾರಿಗಳು ಸಮಗ್ರ ಯೋಜನಾ ವರದಿಯ ಹಂತದಲ್ಲಿವೆ.

ರಾಜಕೀಯ ಮೇಲಾಟಕ್ಕೆ ಬಲಿ: ರಾಜ್ಯದಲ್ಲಿ ಸರ್ಕಾರಗಳು ಬದಲಾದಂತೆ ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳೂ ಬದಲಾಗುತ್ತಲೇ ಹೋಗುತ್ತಿವೆ. 2018ರಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕುದ್ರೋಳಿ ಕಸಾಯಿಖಾನೆ ಅಭಿವೃದ್ಧಿಯನ್ನು ಸ್ಮಾರ್ಟ್‌ ಸಿಟಿ ಅಡಿ ಸೇರಿಸಲಾಯಿತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ಯೋಜನೆಯನ್ನು ಕೈಬಿಟ್ಟು, ಪಡೀಲ್‌ ರಸ್ತೆ ಅಭಿವೃದ್ಧಿಯನ್ನು ಸೇರಿಸಲಾಯಿತು. ಪಾಲಿಕೆಯಲ್ಲೂ ಅಧಿಕಾರ ಬದಲಾಗಿದ್ದು, ಕಾಮಗಾರಿಯ ಪಟ್ಟಿಯೂ ಬೆಳೆಯುತ್ತಲೇ ಹೋಗುತ್ತಿದೆ.ವೃದ್ಧಿಗೆ ಪೂರಕ ಯೋಜನೆ’: ‘ನಗರದ ಅಭಿವೃದ್ಧಿಗೆ ಪೂರಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದರ ಜತೆಗೆ ದೇರೆಬೈಲ್‌ನಲ್ಲಿ 2 ಲಕ್ಷ ಚದರ ಅಡಿಯಲ್ಲಿ ₹ 60 ಕೋಟಿ ವೆಚ್ಚದ ಮಾಹಿತಿ ತಂತ್ರಜ್ಞಾನ ಪಾರ್ಕ್‌ಗೆ ಪ್ರಸ್ತಾವ ಮಂಡಿಸಿದ್ದು, ಇದಕ್ಕೆ ತಾತ್ವಿಕ ಒಪ್ಪಿಗೆ ಸಿಕ್ಕಿದೆ’ ಎಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಐಸಾಕ್‌ ವಾಸ್‌ ಹೇಳುತ್ತಾರೆ.

ಎಂ.ಡಿ.ಗೆ ಬ್ಯಾಂಕ್‌ನಿಂದ ಕಾರು: ಸ್ಮಾರ್ಟ್ ಸಿಟಿ ಯೋಜನೆಯ ₹ 200 ಕೋಟಿಯನ್ನು ರಾಷ್ಟ್ರೀಕೃತ ಬ್ಯಾಂಕ್‌ವೊಂದರಲ್ಲಿ ಠೇವಣಿ ಇರಿಸಲಾಗಿದೆ. ಇದಕ್ಕಾಗಿ ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಬ್ಯಾಂಕ್‌ನಿಂದ ಕಾರನ್ನು ಉಡುಗೊರೆಯಾಗಿ ನೀಡಿದ್ದು ಚರ್ಚೆಗೆ ಗ್ರಾಸವಾಗಿತ್ತು.

ಇದನ್ನೂ ಓದಿ...ಭಾನುವಾರದ ವಿಶೇಷ: ‘ಸ್ಮಾರ್ಟ್‌ ಸಿಟಿ’ಗೆ ಗ್ರಹಣ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು