ಮಂಗಳೂರು: ‘ನಾರಿ ಶಕ್ತಿ ವಂದನ್ ಕಾಯ್ದೆಯ ತಿದ್ದುಪಡಿ ಮಸೂದೆ ಅಂಗೀಕಾರಗೊಳ್ಳುತ್ತಿದ್ದರೆ, ಅದು ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಾಗುತ್ತಿತ್ತು. ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಜಾರಿಗೊಳಿಸುವುದು ವಿರೋಧ ಪಕ್ಷಗಳಿಗೆ ಇಷ್ಟವಿಲ್ಲ. ಹಾಗಾಗಿ ಅದಕ್ಕೆ ಲೋಕಸಭೆಯಲ್ಲಿ ಸೋಲಾಗುವಂತೆ ಮಾಡಿದ್ದಾರೆ. ಈ ಮಸೂದೆಯ ಸೋಲು ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ದಾಖಲಾಗಿದೆ’ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಮಹಿಳಾ ಮೀಸಲಾತಿಯನ್ನು ನಾವು ವಿರೋಧಿಸುವುದಿಲ್ಲ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಆದರೆ ಅದನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ. ಇದು ಅವರ ಮಹಿಳಾ ವಿರೋಧಿ ಧೋರಣೆಗೆ ಸಾಕ್ಷಿ. ಲೋಕಸಭೆಯಲ್ಲಿ ಈ ಮಸೂದೆಗೆ ಸೋಲಾದಾಗ ವಿರೋಧ ಪಕ್ಷದ ಸದಸ್ಯರು ತೋರಿದ ವರ್ತನೆಯೇ ಇದಕ್ಕೆ ಉದಾಹರಣೆ’ ಎಂದರು.

‘ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳ ಪ್ರಾತಿನಿಧ್ಯ ಕಡಿಮೆ ಆಗಲಿದೆ ಎಂಬುದು ವಿರೋಧ ಪಕ್ಷಗಳು ಸೃಷ್ಟಿಸಿರುವ ಮಿಥ್ಯೆ. ಮರುವಿಂಗಡಣೆ ಬಳಿಕ ಲೋಕಸಭಾ ಕ್ಷೇತ್ರಗಳ ಸಂಖ್ಯೆ 543ರಿಂದ 816ಕ್ಕೆ ಹೆಚ್ಚಳವಾಗಲಿದ್ದು, ಕರ್ನಾಟಕವು 28 ಸ್ಥಾನಗಳ ಬದಲು 42 ಸ್ಥಾನಗಳನ್ನು ಪಡೆಯಲಿದೆ. ಸಂಸತ್ತಿನಲ್ಲಿ ರಾಜ್ಯದ ಪಾಲು ಶೇ 5.14ರಷ್ಟೇ ಮುಂದುವರಿಯಲಿದೆ. ಆಂಧ್ರ ಪ್ರದೇಶದ ಲೋಕಸಭಾ ಸ್ಥಾನಗಳ ಸಂಖ್ಯೆ 25ರಿಂದ 38ಕ್ಕೆ ಹೆಚ್ಚಲಿದ್ದು, ಅವರ ಪಾಲು ಶೇ 4.60ಯಿಂದ 4.65ಕ್ಕೆ ಹೆಚ್ಚಳವಾಗಲಿದೆ. ತೆಲಂಗಾಣದ ಸ್ಥಾನಗಳ ಸಂಖ್ಯೆ 17ರಿಂದ 26ಕ್ಕೆ ಹೆಚ್ಚಲಿದ್ದು, ಆ ರಾಜ್ಯದ ಪಾಲು ಶೇ 3.13ರಿಂದ ಶೇ 3.18ಕ್ಕೆ ಹೆಚ್ಚಲಿದೆ. ತಮಿಳುನಾಡಿನ ಸ್ಥಾನಗಳ ಸಂಖ್ಯೆ 39ರಿಂದ 59ಕ್ಕೆ ಹೆಚ್ಚಲಿದ್ದು ಆ ರಾಜ್ಯದ ಪಾಲು ಶೇ 7.18ರಿಂದ ಶೇ 7.23ಕ್ಕೆ ಹೆಚ್ಚಲಿದೆ. ಕೇರಳದ ಸ್ಥಾನಗಳ ಸಂಖ್ಯೆ 20ರಿಂದ 30ಕ್ಕೆ ಹೆಚ್ಚಲಿದ್ದು, ಆ ರಾಜ್ಯದ ಪಾಲು ಈಗಿನಷ್ಟೇ ಇರಲಿದೆ’ ಎಂದು ಅವರು ವಿವರಿಸಿದರು.

‘ಜನಸಂಖ್ಯೆ ಆಧಾರದಲ್ಲಿ ಎಲ್ಲರಿಗೂ ಸಂಸತ್ತಿನಲ್ಲಿ ಯೋಗ್ಯ ಪ್ರಾತಿನಿಧ್ಯ ಕೊಡಿಸಲು ಹಾಗೂ ಮಹಿಳಾ ಮೀಸಲಾತಿ ಜಾರಿಗೊಳಿಸಲು ಬಿಜೆಪಿ ಬದ್ಧವಾಗಿದೆ. ಇದರ ಜಾರಿಗೆ ಸಂಬಂಧಿಸಿ ಸೂಕ್ತ ಕಾರ್ಯತಂತ್ರವನ್ನು ಪಕ್ಷದ ನಾಯಕರು ರೂಪಿಸಲಿದ್ದಾರೆ ’ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಮಂಜುಳಾ ರಾವ್, ಯತೀಶ್ ಆರ್ವರ್, ಜಯಂತ್ ಕೋಟ್ಯಾನ್, ಶಾಂತಿ ಪ್ರಸಾದ್ ಹೆಗ್ಡೆ, ಸಂಜಯ ಪ್ರಭು, ನಂದನ್ ಮಲ್ಯ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-29-465251799

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.