ಮಂಗಳೂರು: ‘ನಗರದ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಜೂನ್ 1ರಿಂದ ಇಸ್ಕಾನ್ ಮೂಲಕ ಪೌಷ್ಟಿಕ ಆಹಾರ ಪೂರೈಕೆಯಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಶುಕ್ರವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ₹35 ಕೋಟಿ ವೆಚ್ಚದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಮೊದಲನೇ ಹಂತದ ಹೊರರೋಗಿ ವಿಭಾಗದ ಕಾಮಗಾರಿ, ₹2 ಕೋಟಿ ವೆಚ್ಚದ 500 ಕೆಎಲ್ಡಿ ಸಾಮರ್ಥ್ಯದ ಎಸ್ಟಿಪಿ ಘಟಕ ನಿರ್ಮಾಣ ಕಾಮಗಾರಿ, ಎಂಆರ್ಪಿಎಲ್ನ ಸಿಎಸ್ಆರ್ ಅನುದಾನದಲ್ಲಿ ₹10 ಕೋಟಿ ವೆಚ್ಚದಲ್ಲಿ ಮೆಡಿಸಿನ್ ಬ್ಲಾಕ್ 4ನೇ ಮಹಡಿ ಮತ್ತು 5ನೇ ಮಹಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಈಗಾಗಲೇ ಬೆಂಗಳೂರು, ಮೈಸೂರು ಮೊದಲಾದ ಕಡೆ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಇಸ್ಕಾನ್ ಮೂಲಕ ಊಟ, ತಿಂಡಿ ಪೂರೈಕೆಯಾಗುತ್ತಿದೆ. ಬಾಣಂತಿಯರು, ಬೇರೆ ಬೇರೆ ಕಾಯಿಲೆಯವರಿಗೆ ಅಗತ್ಯವಿರುವ ವಿಶೇಷ ಪಥ್ಯಾಹಾರ (ಡಯಟ್ ಫುಡ್), ಪೌಷ್ಟಿಕ ಆಹಾರವನ್ನು ಇಸ್ಕಾನ್ ಶಿಸ್ತುಬದ್ಧವಾಗಿ ಪೂರೈಕೆ ಮಾಡುತ್ತದೆ ಎಂದರು.

ಹೊರ ಜಿಲ್ಲೆಗಳ ರೋಗಿಗಳು ಬರುವ ವೆನ್ಲಾಕ್ ಆಸ್ಪತ್ರೆ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಿದೆ. ಒಪಿಡಿ ಬ್ಲಾಕ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಒಟ್ಟು ₹70 ಕೋಟಿ ಮಂಜೂರು ಮಾಡಿದ್ದು, ಮೊದಲ ಹಂತದ ಕಾಮಗಾರಿ ₹35 ಕೋಟಿ ವೆಚ್ಚದಲ್ಲಿ ನಡೆಯಲಿದೆ. ಹೆಚ್ಚಿನ ಸೇವೆಗಾಗಿ ಕೆಎಂಸಿಯೊಂದಿಗೆ ಒಡಂಬಡಿಕೆ ಇರುವ ಕಾರಣ ಕೆಎಂಸಿಯು ಅಂದಾಜು ₹96 ಕೋಟಿ ಮೊತ್ತವನ್ನು ವೆನ್ಲಾಕ್ ಅಭಿವೃದ್ಧಿಗೆ ವಿನಿಯೋಗಿಸುತ್ತಿದೆ ಎಂದರು.

15ನೇ ಹಣಕಾಸು ಆಯೋಗದ ಅನುದಾನ ಹಾಗೂ ಕೇಂದ್ರ ಸರ್ಕಾರದ ಪಾಲಿನಲ್ಲಿ ₹68 ಕೋಟಿ ವೆಚ್ಚದಲ್ಲಿ ಒಟ್ಟು 99 ಆಯುಷ್ಮಾನ್ ಆರೋಗ್ಯ ಕೇಂದ್ರ ನಿರ್ಮಾಣವಾಗಲಿವೆ. ಇವು ನಿರ್ಮಾಣವಾದರೆ, ಜಿಲ್ಲೆಯ ಒಟ್ಟು ಆಯುಷ್ಮಾನ್ ಕೇಂದ್ರಗಳ ಸಂಖ್ಯೆ 143ಕ್ಕೆ ತಲುಪುತ್ತದೆ ಎಂದು ಹೇಳಿದರು.

ನಾಲ್ಕು ಪಾಲನಾ ಕೇಂದ್ರ: ಎಂಡೊಸಲ್ಫಾನ್ ಸಂತ್ರಸ್ತರ ಸೇವೆಗೆ ಜಿಲ್ಲೆಯಲ್ಲಿ ಎರಡು ಪಾಲನಾ ಕೇಂದ್ರಗಳಿವೆ. ಇನ್ನೂ ಹೆಚ್ಚುವರಿ ನಾಲ್ಕು ಕೇಂದ್ರಗಳನ್ನು ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಸುಳ್ಯ ತಾಲ್ಲೂಕುಗಳಲ್ಲಿ ಜೂನ್ 1ರಿಂದ ಪ್ರಾರಂಭಿಸಲಾಗುವುದು. ಇದಕ್ಕೆ ₹2.26 ಕೋಟಿ ಮೀಸಲಿಡಲಾಗಿದೆ. ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಂದು ಡಯಾಲಿಸಿಸ್ ಕೇಂದ್ರ ನೀಡಲಾಗುವುದು ಎಂದು ಹೇಳಿದರು.

ಪ್ರಾದೇಶಿಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರ ಘೋಷಣೆ: ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಮತ್ತು ಲೇಡಿಗೋಶನ್ ಆಸ್ಪತ್ರೆಗಳನ್ನು ಪ್ರಾದೇಶಿಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಎಂದು ಘೋಷಿಸುವ ಸಂಬಂಧ, ಸರ್ಕಾರ ಮಟ್ಟದಲ್ಲಿ ಈ ಹಿಂದೆಯೇ ಪ್ರಸ್ತಾವ ಸಲ್ಲಿಕೆಯಾಗಿದೆ. ಈ ಬಗ್ಗೆ ಅಗತ್ಯ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಸದ್ಯದಲ್ಲಿ ಘೋಷಣೆಯಾಗಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಕೆ., ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರಾದ ಶಾಲೆಟ್ ಪಿಂಟೊ, ಮಮತಾ ಗಟ್ಟಿ, ಟಿ.ಎಂ. ಶಾಹಿದ್ ತೆಕಿಲ್, ಲಾವಣ್ಯ ಬಲ್ಲಾಳ್, ವಿಶ್ವಾಸ್ ಕುಮಾರ್ ದಾಸ್, ಜೋಕಿಂ ಸ್ಟ್ಯಾನಿ ಅಲ್ವಾರಿಸ್, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಕೆಎಂಸಿ ಆಸ್ಪತ್ರೆಯ ಡೀನ್ ಉನ್ನಿಕೃಷ್ಣನ್, ಎಂಆರ್ಪಿಎಲ್ ಅಧಿಕಾರಿಗಳಾದ ಪ್ರಸಾದ್ ಶಂಕರ್, ಪ್ರಶಾಂತ್ ಪೊದುವಾಳ್, ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಸ್ವಾಗತಿಸಿದರು. ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಿವಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾ ಶೆಟ್ಟಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-29-660310544

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.