ಈ ಬಾರಿ ಯುವ ಆಪತ್ ಮಿತ್ರ
ಪ್ರಕೃತಿ ವಿಕೋಪದಲ್ಲಿ ಸ್ವಯಂ ಸೇವಕರಾಗಿ ದುಡಿಯಲು ಯುವ ಆಪತ್ ಮಿತ್ರ ತಂಡ ರಚನೆಗೆ ಸರ್ಕಾರ ಸೂಚನೆ ನೀಡಿದೆ. ಇದರ ಹೆಸರೇ ಸೂಚಿಸುವಂತೆ ಯುವಜನರಿಗೆ ಆದ್ಯತೆ ನೀಡಿ, ಗೃಹ ರಕ್ಷಕ ದಳ, ಅಗ್ನಿಶಾಮಕ ದಳ, ಜಿಲ್ಲಾಡಳಿತದಿಂದ ತರಬೇತಿ ನೀಡಲಾಗುತ್ತದೆ. ತರಬೇತಿಯ ಮಾರ್ಗಸೂಚಿ ಪ್ರಕಟಗೊಂಡ ತಕ್ಷಣ ತರಬೇತಿ ಪ್ರಾರಂಭಿಸುತ್ತೇವೆ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.