ಮಂಗಳೂರು: ಅಡಿಕೆ ಬೆಳೆಗೆ ಬರುವ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಬೆಳಗಾರರು ಹೆಚ್ಚಾಗಿ ಬಳಸುವುದು ಮೈಲುತುತ್ತ ಮತ್ತು ಸುಣ್ಣ ಸೇರಿಸಿದ ಬೋರ್ಡೊ ಮಿಶ್ರಣ. ಅಡಿಕೆ ಬೆಳೆಗಾರರ ಪಾಲಿಗೆ ಸಂಜೀವಿನಿಯಾಗಿರುವ ಮೈಲುತುತ್ತದ ದರ ಒಂದೂವರೆ ಪಟ್ಟು ಹೆಚ್ಚಳವಾಗಿದೆ.

ಕಳೆದ ವರ್ಷ ಮೈಲುತುತ್ತದ ದರ ಕೆ.ಜಿ.ಯೊಂದಕ್ಕೆ ಕನಿಷ್ಠ ₹270ರಿಂದ ಗರಿಷ್ಠ ₹350ರ ಇತ್ತು. ಪ್ರಸ್ತುತ ಕನಿಷ್ಠ ₹450ರಿಂದ ಗರಿಷ್ಠ ₹550ಕ್ಕೆ ಏರಿಕೆಯಾಗಿದೆ. ಅಲ್ಲದೆ, ಅಗತ್ಯಕ್ಕೆ ತಕ್ಕಷ್ಟು ಪೂರೈಕೆಯೂ ಇಲ್ಲದಿರುವುದು ಅಡಿಕೆ ಬೆಳೆಗಾರರನ್ನು ಕಂಗೆಡಿಸಿದೆ.

ಮಳೆಗಾಲದಲ್ಲಿ ಅಡಿಕೆಗೆ ಕೊಳೆ ರೋಗ ಬಾಧಿಸುವುದರಿಂದ ಬೆಳೆಗಾರರು ಪೂರ್ವಭಾವಿಯಾಗಿ ಮೇ ತಿಂಗಳ ಅಂತ್ಯದಲ್ಲಿ ಬೋರ್ಡೊ ಮಿಶ್ರಣ ಸಿಂಪಡಣೆ ಮಾಡುತ್ತಾರೆ. ಹೀಗಾಗಿ, ಮೇ ಮೊದಲ ವಾರದಿಂದಲೇ ಕೃಷಿಕರ ಮನೆಗಳಲ್ಲಿ ಮೈಲುತುತ್ತ ದಾಸ್ತಾನು ಶುರುವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಸೊಸೈಟಿಗಳು, ಅನುಮತಿ ಪಡೆದ ಅಧಿಕೃತ ಮಾರಾಟಗಾರರ ಅಂಗಡಿಗಳಲ್ಲಿ ಮಾತ್ರ ಮೈಲುತುತ್ತ ಸಿಗುತ್ತದೆ. ಆದರೆ, ಈ ಬಾರಿ ಹೆಚ್ಚಿನ ಅಂಗಡಿಗಳಲ್ಲಿ ಬೇಡಿಕೆಯಷ್ಟು ತುತ್ತ ಲಭ್ಯವಾಗುತ್ತಿಲ್ಲ.

‘ತಾಮ್ರದ ದರ ಏರಿಕೆಯಾಗಿರುವ ಕಾರಣ ಮೈಲುತುತ್ತದ ದರ ಏರುಮುಖವಾಗಿ ಸಾಗಿದೆ. 25ಕ್ಕೂ ಹೆಚ್ಚು ಕಂಪನಿಗಳು ಮೈಲುತುತ್ತ ತಯಾರಿಸುತ್ತವೆ, ಅವುಗಳಲ್ಲಿ 10ರಷ್ಟು ಕಂಪನಿಗಳ ಮೈಲುತುತ್ತಕ್ಕೆ ಇಲ್ಲಿ ಬೇಡಿಕೆ ಇದ್ದು, ಮುಂಗಾರು ಪೂರ್ವದಲ್ಲಿ ಅಂದಾಜು 500 ಟನ್ ಜಿಲ್ಲೆಯಲ್ಲಿ ಮಾರಾಟವಾಗುತ್ತದೆ. ದರ ಇನ್ನೂ ಹೆಚ್ಚಾಗಬಹುದೆಂಬ ಆತಂಕ ಹಾಗೂ ಪೂರೈಕೆಯಲ್ಲಿ ವ್ಯತ್ಯಯ ಆಗಬಹುದೆಂಬ ಭಯದಲ್ಲಿ ರೈತರು ಈಗಲೇ ದಾಸ್ತಾನು ಮಾಡಲು ಪ್ರಾರಂಭಿಸಿದ್ದಾರೆ. ಆದರೆ, ನಮ್ಮ ಬಳಿ ಸಂಗ್ರಹ ಇಲ್ಲ’ ಎನ್ನುತ್ತಾರೆ ವ್ಯಾಪಾರಸ್ಥರೊಬ್ಬರು.

‘ಏಪ್ರಿಲ್ನಲ್ಲಿ ಬೇಡಿಕೆ ಪಟ್ಟಿ ಸಲ್ಲಿಸಿದ್ದು, ಈವರೆಗೂ ಪೂರೈಕೆಯಾಗಿಲ್ಲ. ಪ್ರತಿನಿತ್ಯ ಹತ್ತಾರು ರೈತರು ಬಂದು ಬರಿಗೈಯಲ್ಲಿ ಮರಳುತ್ತಾರೆ. ಮಾರುಕಟ್ಟೆಯಲ್ಲಿ ಶೇ 80ರಷ್ಟು ಕೊರತೆ ಇದೆ’ ಎಂದು ಅವರು ತಿಳಿಸಿದರು.

ಕೊಳೆರೋಗಕ್ಕೆ ಮುಂಜಾಗ್ರತಾ ಕ್ರಮವಾಗಿ ಹಾಗೂ ಎಲೆಚುಕ್ಕಿ ರೋಗದ ನಿಯಂತ್ರಣಕ್ಕಾಗಿ, ಅಡಿಕೆ ಗೊನೆಗಳ ಜೊತೆಗೆ ಮರದ ಸೋಗೆಗಳಿಗೂ (ಗರಿ) ಮೂರು ಬಾರಿ ಬೋರ್ಡೋ ದ್ರಾವಣ ಸಿಂಪಡಿಸುವುದು ಅನಿವಾರ್ಯವೆಂದು ಸಿಪಿಸಿಆರ್ಐ ಶಿಫಾರಸು ಮಾಡಿದೆ. ಹೀಗಾಗಿ, ಮೈಲುತುತ್ತದ ಬಳಕೆ ಹೆಚ್ಚಾಗಿದ್ದು, ಸಿಂಪಡಣೆಗಾಗಿ ಪ್ರತಿ ಎಕರೆಗೆ ಅಂದಾಜು ₹10 ಸಾವಿರದಿಂದ ₹20 ಸಾವಿರದಷ್ಟು ಹೆಚ್ಚುವರಿ ವೆಚ್ಚವಾಗುತ್ತದೆ ಎನ್ನುತ್ತಾರೆ ಅಡಿಕೆ ಬೆಳೆಗಾರ ಸುಳ್ಯ ತಾಲ್ಲೂಕಿನ ಅರುಣ್ ಕುಮಾರ್ ಕಾಂಚೋಡು.

ಒಂದು ಎಕರೆ ಅಡಿಕೆ ತೋಟಕ್ಕೆ ಬೋರ್ಡೊ ಸಿಂಪಡಣೆಗೆ 6ರಿಂದ 10 ಕೆ.ಜಿ. ಮೈಲುತುತ್ತ ಬೇಕಾಗುತ್ತದೆ. ಸೋಗೆಗೂ ಸಿಂಪಡಣೆ ಮಾಡಲು 15 ಕೆ.ಜಿ.ಯಷ್ಟು ತುತ್ತ ಬಳಕೆಯಾಗುತ್ತದೆ. ಜೂನ್ನಿಂದ ಸೆಪ್ಟೆಂಬರ್ವರೆಗೆ ಮೂರು ಬಾರಿ, ರೋಗ ಉಲ್ಬಣಿಸಿದರೆ, ಕೆಲವರು ನಾಲ್ಕನೇ ಬಾರಿ ಔಷಧ ಸಿಂಪಡಣೆ ಮಾಡುತ್ತಾರೆ. ಇಳುವರಿ ಕುಸಿತ, ರಸಗೊಬ್ಬರ ದರ ಹೆಚ್ಚಳ ಹಾಗೂ ಮೈಲುತುತ್ತದ ದರ ದುಪ್ಪಟ್ಟಾಗಿರುವುದು ಬೆಳೆಗಾರರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಸರ್ಕಾರ ಅಡಿಕೆ ಬೆಳೆಗಾರರ ನೆರವಿಗೆ ಬರಬೇಕಿದೆ ಎನ್ನುತ್ತಾರೆ ಅವರು.

ಕ್ಯಾಂಪ್ಕೊ ಸಂಸ್ಥೆಯು ತನ್ನ ಸದಸ್ಯರಿಗೆ ಸಹಾಯಧನದಲ್ಲಿ ಮೈಲುತುತ್ತ ನೀಡುತ್ತದೆ. ಮಾರುಕಟ್ಟೆಗಿಂತ ₹50ರಷ್ಟು ಕಡಿಮೆ ದರಕ್ಕೆ ಇಲ್ಲಿ ದೊರೆಯುತ್ತದೆ ಎಂದು ಬೆಳೆಗಾರರೊಬ್ಬರು ತಿಳಿಸಿದರು.

ಈ ವರ್ಷ ಒಳ್ಳೆಯ ಬೆಳೆ ಬಂದಿದ್ದು, ಉತ್ತಮ ಫಸಲಿನ ನಿರೀಕ್ಷೆ ಇತ್ತು. ಆದರೆ, ಅತಿಯಾದ ತಾಪಮಾನಕ್ಕೆ ಅಡಿಕೆ ಕಾಯಿಗಳು ವ್ಯಾಪಕವಾಗಿ ಉದುರಲಾರಂಭಿಸಿವೆ.

–ಅರುಣ್ ಕುಮಾರ್ ಕಾಂಚೋಡು, ಅಡಿಕೆ ಬೆಳೆಗಾರ

‘ಮೈಲುತುತ್ತ ಪ್ರಮಾಣ ಹೆಚ್ಚಿಸಬೇಕು’

ಮೈಲುತುತ್ತಕ್ಕೆ ಪ್ರಸ್ತುತ ಶೇ 18 ಜಿಎಸ್ಟಿ ಇದ್ದು, ಇದನ್ನು ಕೃಷಿ ಉದ್ದೇಶದ ವ್ಯಾಪ್ತಿಗೆ ತಂದರೆ ರೈತರಿಗೆ ಅನುಕೂಲವಾಗುತ್ತದೆ. ತೋಟಗಾರಿಕಾ ಇಲಾಖೆಯಿಂದ ಎಕರೆಗೆ ₹600 ಸಹಾಯಧನ ಸಿಗುತ್ತಿದ್ದು, ಗರಿಷ್ಠ 2 ಹೆಕ್ಟೇರ್ಗೆ ಪಡೆದುಕೊಳ್ಳಬಹುದು. ಸಹಾಯಧನದ ಹಣ ಆಗಸ್ಟ್ ಕಳೆದರೂ ಕೈ ಸೇರುವುದಿಲ್ಲ. ಸಹಾಯಧನದ ಮೊತ್ತ ಬೇಗ ಸಿಗುವಂತಾಗಬೇಕು. ಇಲಾಖೆಯೇ ಕನಿಷ್ಠ ಮೂರು ಬಾರಿ ಬೋರ್ಡೊ ಸಿಂಪಡಣೆ ಮಾಡಲು ಸೂಚಿಸುವುದರಿಂದ, ಮೈಲುತುತ್ತ ವಿತರಣೆ ಪ್ರಮಾಣ ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.