ಮಂಗಳೂರು: ಉಳ್ಳಾಲ ಠಾಣೆ ವ್ಯಾಪ್ತಿಯ ತೊಕ್ಕೊಟ್ಟಿನಲ್ಲಿ ಈಚೆಗೆ ನಡೆದ ರೌಡಿಶೀಟರ್ ಆರಿಫ್ ಹುಸೇನ್ ಹತ್ಯೆ ಪ್ರಕರಣದ ಸಂಬಂಧ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಅರ್ಷದ್, ಪುಚ್ಚೆ ನಿಸಾಕ್ ಹಾಗೂ ಜುನೈದ್ ಬಂಧಿತರು. ಆರೋಪಿ ಅರ್ಷದ್ ಆರಿಫ್ ಕೊಲೆಯ ಸಂಚಿನಲ್ಲಿ ಮುಖ್ಯ ಆರೋಪಿಗಳಿಗೆ ಪೊಲೀಸ್ ಚಲನ ವಲನದ ಮಾಹಿತಿ, ಹಣಕಾಸಿನ ನೆರವು ಒದಗಿಸಿದ್ದ. ಆರಿಫ್ ಕೊಲೆಗೆ ಫೆಬ್ರುವರಿಯಲ್ಲೂ ಯತ್ನ ನಡೆದಿದ್ದು, ಅದರಲ್ಲಿ ಆರೋಪಿ ಪುಚ್ಚೆ ನಿಸಾಕ್ ಭಾಗಿಯಾಗಿದ್ದ. 2022ರಲ್ಲೂ ಆರಿಫ್ ಮೇಲೆ ನಡೆದ ಹಲ್ಲೆಯಲ್ಲೂ ಭಾಗಿಯಾಗಿದ್ದ. ಆರೋಪಿ ಜುನೈದ್ ಪ್ರಕರಣದ ಮುಖ್ಯ ಆರೋಪಿಗಳು ತಪ್ಪಿಸಿಕೊಳ್ಳಲು ವಾಹನ ಒದಗಿಸಿದ್ದ. ಫೆಬ್ರುವರಿಯಲ್ಲಿ ನಡೆದ ಕೊಲೆ ಯತ್ನದಲ್ಲೂ ಆತ ಭಾಗಿಯಾಗಿದ್ದ’ ಎಂದು ನಗರದ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಪ್ರಕರಣದ ಮುಖ್ಯ ಆರೋಪಿಗಳಾದ ರಿಫತ್, ಜುಟ್ಟು ಅಷ್ಪಾಕ್, ಖಲೀಲ್, ಶಾಕೀರ್, ಇರ್ಫಾನ್, ರಿಜ್ವಾನ್, ಸಹಕರಿ ಸಿದ್ದ ಆರೋಪಿ ಇರ್ಷಾದ್ ಎಂಬುವರನ್ನು ಪೊಲೀಸರು ಈಚೆಗೆ ಬಂಧಿಸಿದ್ದರು.

ತೊಕ್ಕೊಟ್ಟು ಮೇಲ್ಸೇತುವೆ ಮೇಲೆ ಆರಿಫ್ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದಾಗ ಮಾರ್ಚ್ 27ರಂದು ಇನೋವಾ ಕಾರಿನಲ್ಲಿ ಹಿಂಬಾಲಿಸಿದ್ದ ತಂಡ ಆತನ ಹತ್ಯೆ ನಡೆಸಿತ್ತು.

ಅಪಘಾತ ಗಾಯಾಳು ಸಾವು: ನಗರದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇದೇ 12ರಂದು (ಶನಿವಾರ) ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೋಹನಚಂದ್ರ ಮಂಗಳವಾರ ನಿಧನರಾದರು. ಛಾಯಾಗ್ರಾಹಕರಾಗಿದ್ದ ಅವರು ಸ್ಕೂಟರ್ನಲ್ಲಿ ಸಾಗುವಾಗ ಬೈಕಕ್ ಡಿಕ್ಕಿ ಹೊಡೆದಿತ್ತು. ಬೈಕ್ ಸವಾರ ಗೋಪಾಲಕೃಷ್ಣ ಡಿ ಅಪಘಾತ ನಡೆದ ದಿನವೇ ಮೃತಪಟ್ಟಿದ್ದರು. ಮೋಹನಚಂದ್ರ ಅವರ ಪುತ್ರಿಯ ವಿವಾಹ ನಿಗದಿಯಾಗಿತ್ತು. ಈ ಖುಷಿಯಲ್ಲಿದ್ದ ಕುಟುಂಬವು ಅವರ ಸಾವಿನಿಂದಾಗಿ ಶೋಕತಪ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-29-429869734

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.