ಮಂಗಳೂರು: ಬಜರಂಗ ದಳವು ಹಿಂದೂ ಸಮಾಜದ ರಕ್ಷಣೆಗಾಗಿ ಇರುವ ಸಂಘಟನೆ. ಸಮಾಜ ಸೇವೆಯೊಂದಿಗೆ ಹಿಂದೂ ಯುವಕರಿಗೆ ಸಂಸ್ಕಾರ ನೀಡುವ ಕೆಲಸ ಮಾಡುತ್ತಿದೆ. ಇದು ಐಎಸ್ಐಯಂತಹ ಭಯೋತ್ಪಾದಕ ಸಂಘಟನೆ ಅಲ್ಲ ಎಂದು ಬಜರಂಗ ದಳ ರಾಷ್ಟ್ರೀಯ ಸಂಯೋಜಕ ಕಿಶನ್ ಪ್ರಜಾಪತ್ ಹೇಳಿದರು.

ನಗರದ ಮಣ್ಣಗುಡ್ಡದ ಸಂಘ ನಿಕೇತನದಲ್ಲಿ ಶನಿವಾರದಿಂದ ಎರಡು ದಿನ ಆಯೋಜಿಸಿರುವ ಬಜರಂಗ ದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕರ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಮ ಮಂದಿರ ನಿರ್ಮಾಣ ದೊಂದಿಗೆ, ರಾಮ ರಾಜ್ಯ ನಿರ್ಮಾಣವಾಗಬೇಕೆಂಬ ಉದ್ದೇಶದೊಂದಿಗೆ ಸಂಘರ್ಷದಲ್ಲಿ ಹುಟ್ಟಿದ ಸಂಘಟನೆ ಸಂಘರ್ಷದ ಮೂಲಕವೇ ಕೆಲಸ ಮಾಡುತ್ತಿದೆ. ಪ್ರತಿಯೊಬ್ಬ ಬಜರಂಗಿಯ ಹೃದಯಲ್ಲಿ ರಾಮನಿದ್ದಾನೆ ಎಂದರು.

ಸನಾತನ ಧರ್ಮ ರಕ್ಷಣೆ, ಗೋ ಮಾತೆ ರಕ್ಷಣೆ, ಹಿಂದೂ ಹೆಣ್ಣು ಮಕ್ಕಳ ರಕ್ಷಣೆ, ನಶೆ ಮುಕ್ತ ಭಾರತ ನಿರ್ಮಾಣ ಮಾಡುವ ಉದ್ದೇಶದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಬಜರಂಗ ದಳವು, ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಿ, ಭಗವಾಧ್ವಜ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ರಾಮಮಂದಿಕ್ಕಾಗಿ, ಹಿಂದುತ್ವಕ್ಕಾಗಿ ಬಜರಂಗ ದಳದ ಅದೆಷ್ಟೋ ಕಾರ್ಯಕರ್ತರ ಬಲಿದಾನಗಳಾಗಿವೆ ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್ ಗೌರವ ಸಲಹೆಗಾರ ಪ್ರೊ. ಎಂ.ಬಿ.ಪುರಾಣಿಕ್ ಮಾತನಾಡಿ, ‘ಮಾದಕ ವಸ್ತು ಸೇವನೆಯಂತಹ ಕೆಟ್ಟ ವ್ಯಸನ ಸಮಾಜವನ್ನು ಕಾಡುತ್ತಿದೆ. ಅನ್ಯ ಮತೀಯರ ಜೊತೆ ನಮ್ಮವರೂ ಕೆಲವರು ಸೇರಿಕೊಂಡಿದ್ದಾರೆ. ಡ್ರಗ್ಸ್ನಂತಹ ಪಿಡುಗು ಸಮಾಜದ ಆರ್ಥಿಕತೆಯನ್ನು ಹಾಳು ಮಾಡುತ್ತಿದೆ, ಯುವಜನರು ಇದಕ್ಕೆ ಬಲಿಯಾಗುತ್ತಿದ್ದು, ಇದನ್ನು ತಡೆಗಟ್ಟಬೇಕಾದದ್ದು ನಮ್ಮ ಜವಾಬ್ದಾರಿಯಾಗಿದೆ’ ಎಂದರು.

ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಸ್ಥಾಣು ಮಾಲಯನ್ ಧ್ವಜಾರೋಹಣ ನೆರ ವೇರಿಸಿ, ಗೋಪೂಜೆ ಮಾಡುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು.

ಪ್ರಾಂತ ಕಾರ್ಯದರ್ಶಿ ಸುರೇಶ್ ಬಿ.ಈ, ವಿಶ್ವ ಹಿಂದೂ ಪರಿಷತ್ ಮಂಗಳೂರು ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ್, ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್, ಸ್ವಯಂ ಸೇವಕ ದಿನೇಶ್ ಪೈ, ಬಜರಂಗದಳ ಕ್ಷೇತ್ರೀಯ ಸಂಯೋಜಕ ಕುಮಾರ ಸ್ವಾಮಿ ಉಪಸ್ಥಿತರಿದ್ದರು.

ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಬಜರಂಗ ದಳದ ಪ್ರಾಂತ ಸಂಯೋಜಕರು ಸಮಾವೇಶದಲ್ಲಿ ಭಾಗವಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-29-971024630

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.