ಮಂಗಳೂರು: ನಗರದ ಆರ್ಟ್ ಕೆನರಾ ಟ್ರಸ್ಟ್ ಮತ್ತು ಪಶ್ಚಿಮ ಬಂಗಾಳ ಸೋನಾರ್ಪುರದ ದೀಕ್ಷಾ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ಸಾಂಪ್ರದಾಯಿಕ ಪಾಟ್ ಚಿತ್ರ, ಜಾನಪದ ಹಾಡುಗಳು ಮತ್ತು ಮುಖವಾಡದ ಪ್ರಸ್ತುತಿಯೊಂದಿಗೆ ಆಯೋಜಿಸಿದ್ದ ‘ವೇರ್ ಈಸ್ ಮೈ ನಾನಿ’ ನಾಟಕ ಪ್ರದರ್ಶನ ಕೊಡಿಯಾಲ್ಗುತ್ತು ಕಲಾ ಕೇಂದ್ರದಲ್ಲಿ ನಡೆಯಿತು.

ಪಶ್ಚಿಮ ಬಂಗಾಳದಿಂದ ಬಂದಿದ್ದ ಮಕ್ಕಳಿಗಾಗಿ ಎರಡು ದಿನಗಳ ಕಾರ್ಯಾಗಾರವೂ ನಡೆಯಿತು. ರಿತದೀಪ್ ನಿರ್ದೇಶನದ ‘ವೇರ್ ಈಸ್ ಮೈ ನಾನಿ’ ನಾಟಕ ಬಂಗಾಳದ ಜನಪದ ಕಥನ ಪರಂಪರೆಯ ಸೊಬಗನ್ನು ಪರಿಚಯಿಸಿತು. ಅನು ಮಂಡಲ್, ಸೋನಾಲಿ ಪೈಕ್, ರಿಮಾ ಖಾನ್, ಸಂತನು ಮಂಡಲ್, ಸುರೋಜಿತ್ ಮಂಡಲ್ ಮತ್ತು ಸುದೀಪ್ತ ನಸ್ಕರ್ ಪ್ರದರ್ಶನ ನೀಡಿದರು. ಆರ್ಟ್ ಕೆನರಾ ಟ್ರಸ್ಟ್ ಅಧ್ಯಕ್ಷ ಸುಭಾಸ್ ಚಂದ್ರ ಬಸು ಪಾಲ್ಗೊಂಡಿದ್ದರು.

ಅಕ್ಕಿಹಿಟ್ಟು ಬಳಸಿ ನೆಲದ ಮೇಲೆ ಚಿತ್ತಾರ ಬಿಡಿಸುವ ‘ಅಲ್ಪೋನಾ' ಕಲೆಯನ್ನು ಕಾಂಚನ್ ಪ್ರದರ್ಶಿಸಿದರು. ಕಾಂತ ಸ್ಟಿಚ್ ಕಲೆಯೂ ಪ್ರದರ್ಶನಗೊಂಡಿತು. ನೈಸರ್ಗಿಕ ಬಣ್ಣಗಳ ಕುರಿತು ರೇಷ್ಮಾ ಶೆಟ್ಟಿ ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-29-1683912077

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.