ಮಂಗಳೂರು: ನಗರದ ಬಿಲ್ಲವ ಬ್ರಿಗೇಡ್ ಮತ್ತು ನಂದಾದೀಪ ಫೌಂಡೇಷನ್ ನಿರ್ಮಿಸಿರುವ 14 ಮತ್ತು 15ನೇ ಮನೆಗಳ ಕೀಲಿ ಕೈ ಹಸ್ತಾಂತರದ ಅಂಗವಾಗಿ ಆಯೋಜಿಸಿರುವ ‘ಸೇವಾ ಸಂಭ್ರಮ್’ ಏ.25ರಂದು ಸಂಜೆ 6 ಗಂಟೆಗೆ ಬಂಟ್ವಾಳದ ಪಂಬದಬೆಟ್ಟು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಬಿಲ್ಲವ ಬ್ರಿಗೇಡ್ ಅಧ್ಯಕ್ಷ ಸದಾನಂದ ಪೂಜಾರಿ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಜೆ 6 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕೀಲಿ ಕೈ ಹಸ್ತಾಂತರ ಮಾಡಿದ ನಂತರ 8 ಗಂಟೆಗೆ ಮ್ಯೂಸಿಕಲ್ ಸ್ಟಾರ್ ನೈಟ್ ಇರುತ್ತದೆ. ಪ್ರಕಾಶ್ ಮಹಾದೇವನ್, ರೂಪಾ ಪ್ರಕಾಶ್, ಶಮೀರ್ ಮುಡಿಪು, ಸುಪ್ರಿಯಾ ರಾಮ್, ಮೈಮ್ ರಾಮ್ದಾಸ್, ಅನೀಶ್ ವೇಣೂರು, ಪಲ್ಲವಿ ಪ್ರಭು, ಅನುರಾಗ್ ಬಂಗೇರ, ಪಲ್ಲವಿ ದೇವಾಡಿಗ, ಶನೀಲ್ ಗೌತಮ್, ಜೆ.ಪಿ ತೂಮಿನಾಡು, ಪುಷ್ಪರಾಜ್ ಬೊಳ್ಳಾರ್, ಪೃಥ್ವಿ ಅಂಬರ್, ಮಂಜು ಮೂಳೂರು, ವಿನೀತಾ ಕುಮಾರ್, ನಿತ್ಯಪ್ರಕಾಶ್, ವಿಜಿತ್ ಕೋಟ್ಯಾನ್, ನಿರೀಕ್ಷಾ ಶೆಟ್ಟಿ, ಸಮತಾ ಅಮೀನ್, ವೆನ್ಸಿಟಾ ಡಯಾಸ್ ಮತ್ತು ಅದ್ವಿತಿ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಂಕಷ್ಟದಲ್ಲಿದ್ದವರಿಗೆ ಈ ವರೆಗೆ ಒಟ್ಟು 13 ಮನೆಗಳನ್ನು ನಿರ್ಮಿಸಿಕೊಡಲಾಗಿದೆ. 14ನೇ ಮನೆ ಮೊಡಂಕಾಪು ಮತ್ತು 15ನೇ ಮನೆಯನ್ನು ಸಜಿಪ ಮೂಡದಲ್ಲಿ ನಿರ್ಮಿಸಲಾಗಿದೆ. ಅರ್ಧಕ್ಕೆ ನಿಂತಿದ್ದ ಅನೇಕ ಮನೆಗಳನ್ನು ಪೂರ್ಣಗೊಳಿಸಲು ನೆರವು ನೀಡಲಾಗಿದೆ ಎಂದು ಅವರು ತಿಳಿಸಿದರು.

ಯಶವಂತ, ಸುಧಾಕರ್ ಕರ್ಕೇರ, ಅಮಿತ್ ಕಟೀಲ್ ಮತ್ತು ಪ್ರಶಾಂತ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-29-1986605170

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.