ಮಂಗಳೂರು: ಬೋಬಿ ಚೆಮ್ಮನೂರು ಇಂಟರ್ನ್ಯಾಷನಲ್ ಜ್ಯುವೆಲ್ಲರ್ಸ್ ಮಂಗಳೂರಿನ ಹಂಪನಕಟ್ಟೆಯ ಕ್ಲಾಕ್ ಟವರ್ ಬಳಿ ತನ್ನ ಹೊಸ ಷೋ ರೂಂ ಆರಂಭಿಸಿದೆ.

ಬಾಲಿವುಡ್ ನಟ ಇಮ್ರಾನ್ ಹಾಶ್ಮಿ, ನಟ ಉಪೇಂದ್ರ ರಾವ್ ಅವರು ಭಾನು ವಾರ ಷೋ ರೂಂ ಉದ್ಘಾಟಿಸಿದರು.

ಶಾಸಕ ವೇದವ್ಯಾಸ ಕಾಮತ್ ಮುಖ್ಯ ಅತಿಥಿಯಾಗಿದ್ದರು. 812 ಕಿ.ಮೀ. ಓಟದ ವಿಶಿಷ್ಟ ವಿಶ್ವ ದಾಖಲೆ ಮತ್ತು ವಿಶ್ವ ಶಾಂತಿಗಾಗಿ ಗಿನ್ನೆಸ್ ದಾಖಲೆ ಹೊಂದಿರುವ ಬೊಚೆ, ಮಾಜಿ ಮೇಯರ್ ಮನೋಜ್ ಕುಮಾರ್, ಮಾಜಿ ಉಪ ಮೇಯರ್ ಪೂರ್ಣಿಮಾ ಉಪಸ್ಥಿತರಿದ್ದರು.

ಬೋಬಿ ಚೆಮ್ಮನೂರು ಇಂಟರ್ನ್ಯಾಷನಲ್ ಗ್ರೂಪ್ನ ಮಾರ್ಕೆಟಿಂಗ್ ಜನರಲ್ ಮ್ಯಾನೇಜರ್ ಅನಿಲ್ ಸಿ.ಪಿ. ಸ್ವಾಗತಿಸಿದರು.

ಆಯ್ದ ಬಡ ರೋಗಿಗಳಿಗೆ ಬೊಚೆ ಫ್ಯಾನ್ಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆರ್ಥಿಕ ಸಹಾಯವನ್ನು ಬೊಚೆ ವಿತರಿಸಿದರು.

‘ಐಎಸ್ಒ ಪ್ರಮಾಣೀಕರಣ ಮತ್ತು 163 ವರ್ಷಗಳ ವಿಶ್ವಾಸಾರ್ಹ ಸಂಪ್ರದಾಯ ಹೊಂದಿರುವ ಆಭರಣ ಸಮೂಹ ಇದಾಗಿದೆ. ಷೋ ರೂಂನಲ್ಲಿ ಎಚ್ಯುಐಡಿ 916 ಚಿನ್ನ ಮತ್ತು ವಿಶ್ವ ದರ್ಜೆಯ ವಜ್ರಗಳು ಮತ್ತು ಬೆರಗುಗೊಳಿಸುವ ಬೆಳ್ಳಿ ಆಭರಣಗಳ ವ್ಯಾಪಕ ಸಂಗ್ರಹವಿದೆ. ಗ್ರಾಹಕರು ಎಚ್ಯುಐಡಿ 916 ಚಿನ್ನದ ಆಭರಣಗಳನ್ನು ಸಗಟು ದರದಲ್ಲಿ ಖರೀದಿಸಬಹುದು. ಕತ್ತರಿಸದ ಮತ್ತು ಅಮೂಲ್ಯ ಆಭರಣಗಳ ಮೇಕಿಂಗ್ ಚಾರ್ಜ್ನಲ್ಲಿ ಶೇ 50 ವರೆಗೆ ರಿಯಾಯಿತಿ. ಎರಡು ಲಕ್ಷ ರೂಪಾಯಿಗಿಂತ ಹೆಚ್ಚಿನ ಕತ್ತರಿಸದ ವಜ್ರದ ಪ್ರತಿ ಖರೀದಿಯೊಂದಿಗೆ ಚಿನ್ನದ ನಾಣ್ಯವನ್ನು ಉಚಿತವಾಗಿ ಪಡೆಯಬಹುದು. ಗ್ರಾಹಕರು ಮುಂಗಡ ಬುಕಿಂಗ್ ಮೂಲಕ ಶುಲ್ಕವಿಲ್ಲದೆ ಚಿನ್ನದ ಆಭರಣಗಳನ್ನು ಖರೀದಿಸಬಹುದು’ ಎಂದು ಸಂಸ್ಥೆಯವರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-29-3781246

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.