ಮಂಗಳೂರು: ನಗರದ ಕೊಟ್ಟಾರ ಚಾಕಿಯಲ್ಲಿ ಖಾಸಗಿ ಬಸ್ ಡಿಕ್ಕಿ ಹೊಡೆದು ಪಾದಚಾರಿ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ವಾಹನ ಚಾಲಕನಿಗೆ ಇಲ್ಲಿನ ಜೆಎಂಎಫ್ಸಿ 8ನೇ ನ್ಯಾಯಾಲಯವು 1 ವರ್ಷ 6 ತಿಂಗಳ ಜೈಲು ಶಿಕ್ಷೆ ಹಾಗೂ ₹ 6 ಸಾವಿರ ದಂಡ ವಿಧಿಸಿದೆ.

ಪದವಿನಂಗಡಿಯ ಶರಣ್ ಕುಮಾರ್ (35) ಶಿಕ್ಷೆಗೆ ಒಳಗಾದ ಖಾಸಗಿ ಬಸ್ (ಗೋಲ್ಡನ್) ಚಾಲಕ. 2022ರ ಡಿ 3ರಂದು ಮೇಘಾ ರಂಜಿತ್ ಪೈ (34 ವರ್ಷ) ಅವರು ಕೊಟ್ಟಾರ ಚಾಕಿಯ ಕಲ್ಲುರ್ಟಿ ದೈವಸ್ಥಾನ ಕಡೆಯಿಂದ ಭಂಡಾರಿ ಹಿಲ್ಸ್ ಅಪಾರ್ಟಮೆಂಟ್ ಕಡೆಗೆ ಸಾಗಲು ರಸ್ತೆ ದಾಟುತ್ತಿದ್ದರು. ಈ ವೇಳೆ ಕೊಟ್ಟಾರ ಚೌಕಿ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಅವರಿಗೆ ಡಿಕ್ಕಿ ಹೊಡೆದಿತ್ತು. ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಮೇಘಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಬಸ್ ಚಾಲಕ ಶರಣ್ ಕುಮಾರ್ ವಿರುದ್ಧ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇನ್ಸ್ಪೆಕ್ಟರ್ಗಳಾದ ಜಯಾನಂದ ಹಾಗೂ ಕೃಷ್ಣಾನಂದ ಜಿ ನಾಯಕ ಪ್ರಕರಣದ ತನಿಖೆ ನಡೆಸಿದ್ದರು.

ಜೆ.ಎಂ.ಎಫ್ ಸಿ 8ನೇ ನ್ಯಾಯಾಲಯದ ನ್ಯಾಯಾಧೀಶರಾದ ಫವಾಜ್ ಪಿ.ಎ ಅವರು ಬಸ್ ಚಾಲಕನಿಗೆ 1 ವರ್ಷ 6 ತಿಂಗಳು ಜೈಲು ವಾಸದ ಶಿಕ್ಷೆ ಹಾಗೂ ₹ 6 ಸಾವಿರ ದಂಡ ವಿಧಿಸಿ ಆದೇಶ ಮಾಡಿದ್ದಾರೆ. ಸರ್ಕಾರದ ಪರವಾಗಿ ವಕೀಲರಾದ ಗೀತಾ ರೈ ಹಾಗೂ ಆರನ್ ಡಿಸೋಜ ಸಾಕ್ಷಿಗಳ ವಿಚಾರಣೆ ನಡೆಸಿ, ವಾದಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-29-843706114

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.