ಮಂಗಳೂರು: ವಾರಾಂತ್ಯ ಮತ್ತು ವಿಶೇಷ ದಿನಗಳಲ್ಲಿ ರಾತ್ರಿ ಮಂಗಳೂರು ನಗರದಿಂದ ಪಂಪ್ವೆಲ್ನ ಮಹಾವೀರ ವೃತ್ತವನ್ನು ದಾಟಿ ಬೆಂಗಳೂರು ಅಥವಾ ತಲಪಾಡಿ ಕಡೆಗೆ ಹೋಗುವವರು ವೃತ್ತದಲ್ಲಿ ಸಿಲುಕಿ ಹಾಕಿಕೊಳ್ಳುವುದು ಖಚಿತ. ಇದು ಹೆಚ್ಚು ಕಾಡುವುದು ಬೆಂಗಳೂರು ಕಡೆಗೆ ಹೋಗುವವರನ್ನು, ವಿಶೇಷವಾಗಿ ರಾತ್ರಿ 9ರಿಂದ 11 ಗಂಟೆಯ ಅವಧಿಯಲ್ಲಿ. ಇದಕ್ಕೆ ಕಾರಣ, ದೂರ ಪ್ರಯಾಣದ ಬಸ್ಗಳು ರಸ್ತೆಯಲ್ಲೇ ನಿಂತು ಜನರನ್ನು ಹತ್ತಿಸುವುದು.

ಮಹಾವೀರ ವೃತ್ತದ ಸಮಸ್ಯೆಯನ್ನು ನಾಲ್ಕೈದು ತಿಂಗಳ ಹಿಂದೆ ಸಾರ್ವಜನಿಕರು ಪೊಲೀಸರ ಗಮನಕ್ಕೆ ತಂದ ನಂತರ ಅಲ್ಲಿ ಸಿಬ್ಬಂದಿಯನ್ನು ನಿಲ್ಲಿಸಿ ವಾಹನ ಸಂಚಾರ ಸುಗಮಗೊಳಿಸುವ ಕಾರ್ಯ ನಡೆಯಿತು. ಸ್ವಲ್ಪ ದಿನ ಇದು ಸಸೂತ್ರವಾಗಿ ನಡೆಯಿತು. ಈಗ ಸಿಬ್ಬಂದಿ ಇರುತ್ತಾರೆ. ಆದರೆ ಬಸ್ಗಳು ಮತ್ತೂ ರಸ್ತೆಯಲ್ಲೇ ನಿಲ್ಲುತ್ತವೆ. ಇಂಥ ಸಮಸ್ಯೆಗಳು ನಗರದ ಹಲವು ಕಡೆ ಕಂಡಬರುತ್ತವೆ. ಇವು ರಾತ್ರಿ ವೇಳೆ ಅನುಭವಿಸುವ ತೊಂದರೆಯಾಗಿದ್ದರೆ, ಹಗಲಲ್ಲಿ ನಗರದೊಳಗಿನ ಬಹುತೇಕ ಕಡೆ ಇದು ಸರ್ವೇಸಾಮಾನ್ಯ ಎಂಬಂತಾಗಿದೆ. ಇದೆಲ್ಲದಕ್ಕೂ ಕಾರಣ, ಬಸ್ ಬೇಗಳು ಇಲ್ಲದೇ ಇರುವುದು.

ಸ್ಮಾರ್ಟ್ ಆದ ನಂತರ ಮಂಗಳೂರು ನಗರದಲ್ಲಿ ರಸ್ತೆಗಳು ಕಾಂಕ್ರಿಟ್ನಿಂದ ಮಿನುಗತೊಡಗಿದವು. ಬಸ್ ತಂಗುದಾಣಗಳು ಹೈಟೆಕ್ ಆದವು. ಈಜುಕೊಳಗಳು, ಕ್ರೀಡಾಂಗಣಗಳು, ಮೋಜಿನ ತಾಣಗಳು ಹೆಚ್ಚಿದವು. ಆದರೆ, ವಾಹನಗಳ ಸುಗಮ ಸಂಚಾರಕ್ಕೆ ಆಗುತ್ತಿರುವ ಅಡಚಣೆ ನೀಗಿಸಲು ಸಾಧ್ಯವಾಗಲಿಲ್ಲ. ಲಾಲ್ಬಾಗ್ ಸೇರಿದಂತೆ ಕೆಲವೆಡೆ ಬೇಗಳು ಇದ್ದರೂ ವ್ಯವಸ್ಥಿತವಾಗಿ ಮಾಡದೇ ಇರುವುದರಿಂದ ಮತ್ತು ಶಿಸ್ತು ಪಾಲಿಸದೇ ಇರುವುದರಿಂದ ಬಸ್ಗಳು ನಿಲ್ಲುವುದು ರಸ್ತೆಯಲ್ಲೇ. ಇದರಿಂದ ಬಸ್ ಪ್ರಯಾಣಿಕರು ಮತ್ತು ಬಸ್ನ ಹಿಂದಿನಿಂದ ಸಾಗುವ ವಾಹನ ಚಾಲಕರು ಅನುಭವಿಸುವ ಪಡಿಪಾಟಲು ಕಡಿಮೆಯೇನಲ್ಲ.

ಲಾಲ್ಬಾಗ್ನಲ್ಲಿ ಉಡುಪಿ ಕಡೆಗೆ ಹೋಗುವ ಬಸ್ಗಳು ಮತ್ತು ಕೆಲವೊಮ್ಮೆ ಸಿಟಿ ಬಸ್ಗಳು ಬೇ ಒಳಗೆ ಪ್ರವೇಶಿಸದೆ ಮುಖ್ಯರಸ್ತೆಯಲ್ಲೇ ನಿಲ್ಲುವುದರಿಂದ ಪ್ರಯಾಣಿಕರು ಅಲ್ಲಿಗೆ ಓಡಬೇಕಾಗುತ್ದೆ . ಅಷ್ಟರಲ್ಲಿ ಹಿಂದಿನಿಂದ ಬರುವ ಬಸ್ ಹಾರನ್ ಮಾಡುತ್ತವೆ. ಆಗ ಕೆಲವರು ಜೀವ ಕೈಯಲ್ಲಿ ಹಿಡಿದುಕೊಂಡವರಂತೆ ಹೆದರುತ್ತ ತಮ್ಮ ಗಮ್ಯದತ್ತ ಹೋಗುವ ಬಸ್ ಹಿಡಿಯಬೇಕಾಗುತ್ತದೆ.

ಸಮಸ್ಯೆಗಳು ಕಣ್ಣೆದುರೇ ಇದ್ದರೂ ಬೇಗಳನ್ನು ನಿರ್ಮಿಸುವ ಕಾರ್ಯ ನಡೆಯುತ್ತಿಲ್ಲ. ನಿರ್ಮಾಣಕ್ಕೆ ಸಂಬಂಧಿಸಿ ನಡೆದಿರುವ ಪ್ರಕ್ರಿಯೆಗಳೆಲ್ಲವೂ ಕಾಗದಗಳಲ್ಲೇ ಉಳಿದುಕೊಂಡಿವೆ ಎಂಬುದು ನಾಗರಿಕರ ದೂರು.

ಅನುಮೋದನೆ ಆಗಿದ್ದರೂ ಆರಂಭ ಇಲ್ಲ?: ಮಂಗಳೂರಿನಲ್ಲಿ ಬಸ್ ಬೇಗಳಿಗಾಗಿ ಅನೇಕ ವರ್ಷಗಳಿಂದ ಬೇಡಿಕೆ ಇದೆ. ಖಾಸಗಿ ಬಸ್ ಮಾಲೀಕರ ಸಂಘದವರು ನಿರಂತರವಾಗಿ ಬೇಗಳಿಗಾಗಿ ಒತ್ತಾಯಿಸುತ್ತಿದ್ದಾರೆ. ಸುಧೀರ್ ಶೆಟ್ಟಿ ಕಣ್ಣೂರು ಅವರು ಮೇಯರ್ ಆದ ಸಂದರ್ಭದಲ್ಲಿ ಈ ವಿಷಯದಲ್ಲಿ ಒಂದಿಷ್ಟು ಆಶಾಭಾವನೆ ಮೂಡಿತ್ತು. ಅವರು ಅಧಿಕಾರ ಸ್ವೀಕರಿಸಿದ ಕೂಡಲೇ ಇದರ ಪ್ರಸ್ತಾಪ ಮಾಡಿದ್ದರು. ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ, ಲೇಡಿ ಹಿಲ್, ಕಂಕನಾಡಿ ಜಂಕ್ಷನ್, ಬಂಟ್ಸ್ ಹಾಸ್ಟೆಲ್ ಸೇರಿದಂತೆ 8 ಕಡೆ ಬೇ ನಿರ್ಮಿಸುವುದಾಗಿ ಹೇಳಿದ್ದರು. ಆದರೆ ಅದರಲ್ಲಿ ಕಾರ್ಯಗತ ಆದದ್ದು ಸುರತ್ಕಲ್ ಗೋವಿಂದದಾಸ ಕಾಲೇಜು ಮುಂಭಾಗದಲ್ಲಿ ಮಾತ್ರ.

‘ಎಲ್ಲ 8 ಬೇಗಳ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು. ಆಗಿರುವುದು ಒಂದು ಮಾತ್ರ. ನನ್ನ ಅವಧಿ ಮುಗಿದ ಕೂಡಲೇ ಎಲ್ಲ ಕಡತಗಳನ್ನು ತಡೆಹಿಡಿಯಲಾಗಿದೆ. ಈ ವಿಷಯದಲ್ಲಿ ರಾಜಕೀಯ ಮಾಡದೇ ಇದ್ದಿದ್ದರೆ ಈಗ ಹಲವು ಕಡೆಗಳಲ್ಲಿ ಬಸ್ ಬೇ ಮತ್ತು ಹೈಟೆಕ್ ಬಸ್ ತಂಗುದಾಣಗಳು ನಿರ್ಮಾಣ ಆಗಿರುತ್ತಿದ್ದವು’ ಎಂದು ಸುಧೀರ್ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪೊಲೀಸರಿಗೂ ತಲೆಬೇನೆ: ಬಸ್ ಬೇಗಳು ಇಲ್ಲದೇ ಇರುವುದು ಟ್ರಾಫಿಕ್ ಪೊಲೀಸರಿಗೂ ತಲೆಬೇನೆ ಉಂಟುಮಾಡುತ್ತಿದೆ. ಬಸ್ಗಳು ರಸ್ತೆಯಲ್ಲಿ ನಿಲ್ಲುವುದರಿಂದಲೇ ಹಲವು ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ.

‘ಮಂಗಳೂರಿನಲ್ಲಿ ಬಸ್ ಬೇ ಮತ್ತು ಮೇಲ್ಸೇತುವೆಗಳ ಬೇಡಿಕೆ ಹಿಂದಿನಿಂದಲೇ ಇದೆ. 53 ಕಡೆ ಬೇಗಳನ್ನು ನಿರ್ಮಿಸುವಂತೆ ಪೊಲೀಸ್ ಇಲಾಖೆಯಿಂದ ಬೇಡಿಕೆ ಸಲ್ಲಿಸಲಾಗಿದೆ. ಇದನ್ನು ಮಹಾನಗರ ಪಾಲಿಕೆಯವರು ಗಂಭೀರವಾಗಿ ತೆಗೆದುಕೊಳ್ಳಬೇಕು. ಬೇ ನಿರ್ಮಾಣವಾದರೆ ನಗರದ ವಾಹನ ದಟ್ಟಣೆಗೆ ದೊಡ್ಡ ಪರಿಹಾರ ಸಿಕ್ಕಿದಂತಾಗುತ್ತದೆ’ ಎಂದು ಟ್ರಾಫಿಕ್ ವಿಭಾಗದ ಉಪ ಪೊಲೀಸ್ ಆಯುಕ್ತ ಕೆ. ರವಿಶಂಕರ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-29-1499825495

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.