ಮಂಗಳೂರು: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ)ದ ದಕ್ಷಿಣ ಭಾರತ ಚಾರ್ಟರ್ಡ್ ಅಕೌಂಟೆಂಟ್ಸ್ ಸ್ಪೂಡೆಂಟ್ಸ್ ಅಸೋಸಿಯೇಷನ್ (ಎಸ್ಐಸಿಎಎಸ್ಎ)ನ ಮಂಗಳೂರು ಶಾಖೆಯು ಇದೇ 5 ಮತ್ತು 6ರಂದು ಪುರಭವನದಲ್ಲಿ ಸಿ.ಎ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ‘ಉದ್ಗಮ್’ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿದ ಐಸಿಎಐ ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿ (ಎಸ್ಐಆರ್ಸಿ) ಮಂಗಳೂರು ಶಾಖೆ ಅಧ್ಯಕ್ಷ ಡೇನಿಯಲ್ ಮಾರ್ಷ್ ಪೆರೇರಾ, ‘ಐಸಿಎಐ ಶೈಕ್ಷಣಿಕ ಮಂಡಳಿ (ಕಾರ್ಯಾಚರಣೆ) ವಿಭಾಗದ ಆಶ್ರಯದಲ್ಲಿ ಆಯೋಜಿಸಿರುವ ಈ ಸಮ್ಮೇಳನವು ಸಿ.ಎ ವೃತ್ತಿಯಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಹೊಸ ವಾತಾವರಣದ ಕುರಿತು ತಿಳಿಯಲು ಉತ್ತಮ ಅವಕಾಶ. ಶ್ರೇಷ್ಠ ವೃತ್ತಿಪರರ ಗೋಷ್ಠಿಗಳನ್ನು ಒಳಗೊಂಡ ‘ಉತ್ಕೃಷ್ಟತೆಯ ಮೂಲಗಳು’ ವಿಷಯ ಪರಿಕಲ್ಪನೆಯು ವಿದ್ಯಾರ್ಥಿಗಳು ಸ್ಪಷ್ಟತೆ ಮತ್ತು ಖಚಿತ ದೃಷ್ಟಿಕೋನ ರೂಪಿಸಲು ನೆರವಾಗಲಿದೆ’ ಎಂದರು.

‘ಜ್ಞಾನವೃದ್ಧಿಗೆ ಸಂಬಂಧಿಸಿದ ನಾಲ್ಕು ಹಾಗೂ ಕೌಶಲ ವೃದ್ಧಿಗೆ ಸಂಬಂಧಿಸಿದ ಆರು ಗೋಷ್ಠಿಗಳಿವೆ. ಲೆಕ್ಕ ಪರಿಶೋಧನೆ ಮತ್ತು ತೆರಿಗೆಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ, ತೆರಿಗೆಗೆ ಸಂಬಂಧಿಸಿದ ಈಚಿನ ಕಾನೂನುಗಳು, ಜಿಎಸ್ಟಿಯ ಈಚಿನ ಮಾರ್ಪಾಡುಗಳು, ನವೋದ್ಯಮ ಪರಿಸರ ವ್ಯವಸ್ಥೆಗಳು ಮತ್ತು ಬಂಡವಾಳ ಮಾರುಕಟ್ಟೆಗಳು, ಮಾನಸಿಕ ಸ್ವಾಸ್ಥ್ಯ, ಪರೀಕ್ಷಾ ತಂತ್ರ ಮತ್ತು ವೃತ್ತಿಪರ ಬ್ರ್ಯಾಂಡಿಂಗ್ ಕುರಿತ ಗೋಷ್ಠಿಗಳು ನಡೆಯಲಿವೆ. ಐಸಿಎಐ ಶೈಕ್ಷಣಿಕ ಮಂಡಳಿ (ಕಾರ್ಯಾಚರಣೆ) ಅಧ್ಯಕ್ಷ ರಾಜೇಶ್ ಶರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಮಧುಕರ್ ಎನ್.ಹಿರೇಗಂಗೆ, ತರುಣ್ ಜಗದೀಶ್, ಭನ್ವರ್ ಬೊರಾನ, ಗಜಾನನ ಕಾಮತ್, ರಣಕಾರ್ಸ್ ಪನೇಲ್, ಜಯಲಕ್ಷ್ಮೀ ಹೆಗ್ಡೆ, ಧೀರಜ್ ಶೆಟ್ಟಿ ಮಿಜಾರ್ ಪಾಲ್ಗೊಳ್ಳಲಿದ್ದಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಎಸ್ಐಆರ್ಸಿ ಮಂಗಳೂರು ಶಾಖೆಯ ಉಪಾಧ್ಯಕ್ಷೆ ಮಮತಾ ರಾವ್, ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಎನ್, ಎಸ್ಐಸಿಎಎಸ್ಎ ಅಧ್ಯಕ್ಷ ಗೌರವ್ ರಾಮಚಂದ್ರ ಹೆಗ್ಡೆ, ಬಿ.ಕೃಷ್ಣಾನಂದ ಪೈ, ಸೌಪರ್ಣಿಕಾ ಭಕ್ತ, ಅಭಿಶ್ಯಾಂ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-29-1958404780

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.