ಮಂಗಳೂರು: ನಟ್–ಬೋಲ್ಟ್ನಿಂದ ಹಿಡಿದು ವಾಹನಗಳ ಬಿಡಿಭಾಗಗಳು, ಕೃಷಿ–ತೋಟಗಾರಿಕೆಯಲ್ಲಿ ಬಳಕೆಯಾಗುವ ಉತ್ಪನ್ನಗಳು, ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳಲ್ಲಿ ತಯಾರಾಗುವ ಸಾಮಗ್ರಿಗಳ ನಡುವೆ ಕೈಗಾರಿಕೆಗಳು ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿಗಳು ನಗರದಲ್ಲಿ ಶುಕ್ರವಾರ ಆರಂಭಗೊಂಡ ಕೆನರಾ ಎಂಜಿನಿಯರಿಂಗ್, ಕೈಗಾರಿಕೆ ಮತ್ತು ತಾಂತ್ರಿಕ ವಸ್ತುಪ್ರದರ್ಶನದಲ್ಲಿ ಗಮನ ಸೆಳೆಯುತ್ತಿವೆ.

ಕೆನರಾ ಕೈಗಾರಿಕಾ ಸಂಘ ಕರಾವಳಿ ಉತ್ಸವ ಮೈದಾನದಲ್ಲಿ ಹಮ್ಮಿಕೊಂಡಿರುವ ಪ್ರದರ್ಶನ ಇದೇ 3ರ ವರೆಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯ ತನಕ ನಡೆಯಲಿದೆ.

ದಕ್ಷಿಣ ಕನ್ನಡ–ಉಡುಪಿಯ ಕೈಗಾರಿಕೆಗಳೇ ಅಧಿಕ ಸಂಖ್ಯೆಯಲ್ಲಿರುವ ಪ್ರದರ್ಶನದಲ್ಲಿ ಕರ್ನಾಟಕದ ಇತರ ಭಾಗಗಳ ಮಳಿಗೆಗಳೂ ಇವೆ. ಕೇರಳ ಮತ್ತು ತಮಿಳುನಾಡಿನಿಂದ ಬಂದವರೂ ಇದ್ದಾರೆ. ಎಂಆರ್ಪಿಲ್, ಎನ್ಎಂಪಿಎ, ಪಾರಾದೀಪ್ (ಎಂಸಿಎಫ್), ಕೆಎಂಎಫ್, ಕ್ಯಾಂಪ್ಕೊ ಕೂಡ ಇದ್ದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ), ಮಾಲಿನ್ಯ ನಿಯಂತ್ರಣ ಮುಂತಾದ ಸಂಸ್ಥೆಗಳನ್ನು ಒಳಗೊಂಡ ಸ್ಟ್ಯಾಟುಟರಿ ಪೆವಿಲಿಯನ್ ಎಂಬ ಪ್ರತ್ಯೇಕ ವಿಭಾಗವೂ ಇದೆ.

ಸ್ಟೇನ್ಲೆಸ್ ಸ್ಟೀಲ್ನಿಂದ ತಯಾರಿಸಿದ ಕಟ್ಟಿಗೆ ಬಳಸಬಹುದಾದ ಒಲೆ, ಮಲಿನ ನೀರನ್ನು ಎತ್ತಬಹುದಾದ ಸಬ್ ಮರ್ಸಿಬಲ್ ಸೀವೇಜ್ ಪಂಪ್ ಮುಂತಾದ ಹೊಸ ತಂತ್ರಜ್ಞಾನದ ಅನೇಕ ಸಾಮಗ್ರಿಗಳು ಒಂದೆಡೆ ಇದ್ದರೆ ಏಣಿ, ಬೇಲಿ, ಫೈಬರ್ ದೋಟಿ, ಹೊಸ ಮಾದರಿಯ ಬಾಗಿಲು, ಕಿಟಕಿ ಮತ್ತಿತರ ವಸ್ತುಗಳು ಕೂಡ ಇವೆ.

‘ಕೈಗಾರಿಕೆ–ಶಿಕ್ಷಣ ಸಂಸ್ಥೆಗಳು ನೀತಿ ರೂಪಿಸಲಿ’: ಪ್ರದರ್ಶನವನ್ನು ಉದ್ಘಾಟಿಸಿದ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ತಾಂತ್ರಿಕ ಕೋರ್ಸ್ ಸೇರಿದಂತೆ ಉನ್ನತ ಶಿಕ್ಷಣ ಪಡೆದವರು ಉದ್ಯೋಗದಿಂದ ವಂಚಿತರಾಗಿದ್ದಾರೆ. ಇದನ್ನು ತಪ್ಪಿಸಲು ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕೆಗಳು ಚರ್ಚಿಸಿ ನೀತಿ ರೂಪಿಸಬೇಕು ಎಂದು ಹೇಳಿದರು.

ಎಂಜಿನಿಯರಿಂಗ್ ಕಲಿತವರ ಪೈಕಿ ಶೇಕಡ 35ರಷ್ಟು ಮಂದಿ ಉದ್ಯೋಗವಿಲ್ಲದೆ ತೊಂದರೆಯಲ್ಲಿದ್ದಾರೆ. ಆದರೆ ಪಾಲಿಟೆಕ್ನಿಕ್ನಂಥ ಕೋರ್ಸ್ ಮಾಡಿದವರ ಪೈಕಿ ನಿರುದ್ಯೋಗಿಗಳು ಶೇಕಡ 8ರಷ್ಟು ಮಾತ್ರ. ಇಂಥ ಪರಿಸ್ಥಿತಿಯನ್ನು ತಪ್ಪಿಸಲು ಕೌಶಲ ಕಲಿಸುವ ಕಾರ್ಯ ಶಿಕ್ಷಣ ಸಂಸ್ಥೆಗಳಲ್ಲಿ ಆಗಬೇಕು. ಭಾಷೆಗಳನ್ನು ಕಲಿಯಲು ವಿದ್ಯಾರ್ಥಿಗಳು ಆಸಕ್ತಿ ವಹಿಸಿದರೆ ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಉದ್ಯೋಗ ಮಾಡಿ ಬದುಕಬಹುದು ಎಂದರು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ ದೇಶದಲ್ಲಿ ಎಂಎಸ್ಎಂಇ ವಲಯ 32 ಕೋಟಿ ಮಂದಿಗೆ ಉದ್ಯೋಗ ನೀಡಿದೆ. ಈ ನಿಟ್ಟಿನಲ್ಲಿ ಕೌಶಲವನ್ನು ಕೆಲವು ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿರಿಸದೆ ವಿಸ್ತಾರ ಪಡೆದುಕೊಳ್ಳಬೇಕು. ಸ್ಥಳೀಯ ಮಟ್ಟದಲ್ಲಿ ತಯಾರಾದ ವಸ್ತುಗಳು ಜಾಗತಿಕ ಗುಣಮಟ್ಟ ಹೊಂದಿರಬೇಕು ಎಂದರು.

ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಮಂಜುನಾಥ್ ಸಿಂಗಾಯ್, ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಎಲ್.ಆರ್ ನಾರಾಯಣ, ಉದ್ಯಮಿ ಮನೋಜ್ ಸರಿಪಳ್ಳ, ಎನ್ಎಂಪಿಎಯ ಉಪ ಟ್ರಾಫಿಕ್ ವ್ಯವಸ್ಥಾಪಕ ಚಂದ್ರಶೇಖರ್ ಮಾಲೇಕರ್, ಎಂಆರ್ಪಿಎಲ್ ಗ್ರೂಪ್ ಪ್ರಧಾನ ವ್ಯವಸ್ಥಾಪಕ ಪ್ರಶಾಂತ್ ಶಂಕರ್ ಪೊದುವಾಳ್, ಕೆನರಾ ಕೈಗಾರಿಕಾ ಸಂಘದ ಅಧ್ಯಕ್ಷ ಎಂ.ಡಿ ಪೂಜಾರಿ, ಉಪಾಧ್ಯಕ್ಷ ಬಿ.ಎ ಇಕ್ಬಾಲ್ ಮತ್ತು ಪ್ರದರ್ಶನ ಸಮಿತಿಯ ಅಧ್ಯಕ್ಷ ಅರುಣ್ ಪಡಿಯಾರ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-29-1325824565

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.