ಮಂಗಳೂರು: ಒಗರು ತೆಗೆದ ತಾಜಾ ಜ್ಯೂಸ್, ಐಸ್ ಕ್ರೀಂ, ಬೆಲ್ಲ, ಬರ್ಫಿ, ಸ್ಕ್ವಾಷ್, ಪಾಯಸ, ಉಪ್ಪಿನಕಾಯಿ ಹೀಗೆ ಹಲವಾರು ಮೌಲ್ಯವರ್ಧಿತ ಉತ್ಪನ್ನಗಳು, ಗೇರು ಹಣ್ಣನ್ನು ಆದಾಯದ ಮೂಲವಾಗಿ ಪರಿವರ್ತಿಸಿಕೊಳ್ಳಹುದಾದ ಸಾಧ್ಯತೆಯನ್ನು ಅನಾವರಣಗೊಳಿಸಿದವು.

ರೈತ ಕುಡ್ಲ ಪ್ರತಿಷ್ಠಾನದ ನೇತೃತ್ವದಲ್ಲಿ ಸಿರಿ ತೋಟಗಾರಿಕಾ ಸಂಘ ಮತ್ತು ಸಾವಯವ ಕೃಷಿಕ ಗ್ರಾಹಕ ಬಳಗದ ಸಹಯೋಗದಲ್ಲಿ ನಗರದ ಕದ್ರಿ ಪಾರ್ಕ್ನಲ್ಲಿ ಶುಕ್ರವಾರದಿಂದ ಮೂರು ದಿನ ನಡೆಯಲಿರುವ ಗೇರು, ಮಾವು, ಹಲಸು ಮೇಳವು ರೈತರು ಬೆಳೆದ ಉತ್ಪನ್ನಗಳ ನೇರ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ.

ಗೇರು ಹಣ್ಣಿನ ಮೌಲ್ಯವರ್ಧನೆಯ ರೂವಾರಿ ಶ್ರೀ ಪಡ್ರೆ ಮೇಳ ಉದ್ಘಾಟಿಸಿದರು. ಗೇರು ಮತ್ತು ಹಲಸು ನಿರ್ಲಕ್ಷಿತ ಗುಂಪಿಗೆ ಸೇರಿಕೊಂಡಿದ್ದು, ಅವುಗಳ ಮಹತ್ವ ಈಗ ಅರಿವಿಗೆ ಬರುತ್ತಿದೆ. ಪೋಷಕಾಂಶವುಳ್ಳ ಗೇರು ಹಣ್ಣಿನ ಶರಬತ್ತು ಭವಿಷ್ಯದಲ್ಲಿ ಶಕ್ತಿವರ್ಧಕ ಪಾನೀಯವಾಗಿ ಜನಮನ ಗೆಲ್ಲುವುದರಲ್ಲಿ ಅನುಮಾನವಿಲ್ಲ. ಗೇರು ಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿವೆ. ಮಲಬದ್ಧತೆ ನಿವಾರಣೆಗೆ ಇದು ದಿವ್ಯ ಔಷಧವಾಗಿದೆ. ಆಯುರ್ವೇದ ಔಷಧದಲ್ಲಿ ಗೇರು ಹಣ್ಣಿನ ಬಳಕೆ ಇದೆ ಎಂದು ಶ್ರೀ ಪಡ್ರೆ ಹೇಳಿದರು.

ಸಾವಯವ ಕೃಷಿಕ ಗ್ರಾಹಕ ಬಳಗದ ಕಾರ್ಯದರ್ಶಿ ರತ್ನಾಕರ ಕುಳಾಯಿ, ಸಿರಿ ತೋಟಗಾರಿಕಾ ಸಂಘದ ಖಜಾಂಚಿ ಹರೀಶ್ಚಂದ್ರ ಅಡ್ಕ, ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಸದಸ್ಯರಾದ ಜಿ.ಕೆ. ಭಟ್, ಜಗನ್ನಾಥ್ ಗಾಂಭೀರ್, ರಾಮ ಮೊಗರೋಡಿ ಉಪಸ್ಥಿತರಿದ್ದರು. ರೈತ ಕುಡ್ಲ ಪ್ರತಿಷ್ಠಾನದ ಕಾರ್ಯದರ್ಶಿ ಭರತ್ ರಾಜ್ ಸೊರಕೆ ಸ್ವಾಗತಿಸಿದರು.

ಜಪಾನ್ನ ಮಿಯಾಜಾಕಿ ಮಾವು ಮೇಳದಲ್ಲಿದೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಗಣೇಶ ಗುನಗಾ ಈ ಮಾವನ್ನು ತಂದಿದ್ದು, ಒಂದು ಕೆ.ಜಿ.ಗೆ ಸರಾಸರಿ ನಾಲ್ಕು ಹಣ್ಣುಗಳು ಬರುತ್ತವೆ. ಇದಕ್ಕೆ ₹13 ಸಾವಿರ ಬೆಲೆ ಇದೆ. ವಿವಿಧ ಬಗೆಯ ಹಲಸಿನ ಹಣ್ಣು, ನೇರಳೆ ಹಣ್ಣು, ಮಾವು, ವಿವಿಧ ಜಾತಿಯ ಗಿಡಗಳು ಮೇಳದಲ್ಲಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-28-1795951150

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.