ಮಂಗಳೂರು: ನಗರದ ಚಾಮರ ಫೌಂಡೇಶನ್ ಮತ್ತು ಆದರ್ಶ ಫ್ರೆಂಡ್ಸ್ ಅಸೋಸಿಯೇಶನ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ಏಳು ದಿನಗಳ ‘ಮಕ್ಕಳ ರಂಗ ಶಿಬಿರ 2026’ಕ್ಕೆ ಭಾನುವಾರ ಆದರ್ಶನಗರ, ಚಿಲಿಂಬಿ ಗುಡ್ಡೆಯಲ್ಲಿ ಚಾಲನೆ ನೀಡಲಾಯಿತು.

ದಿ.ಯತೀಶ್ ವೈ ಶೆಟ್ಟಿಯವರ ಸ್ಮರಣಾರ್ಥ ಹಮ್ಮಿಕೊಂಡಿರುವ ಈ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ರಂಗ ನಿರ್ದೇಶಕ ಜಗನ್ ಪವಾರ್, ‘ಮಕ್ಕಳ ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ ಮತ್ತು ಸೃಜನಶೀಲತೆ ಬೆಳವಣಿಗೆಯಲ್ಲಿ ರಂಗಭೂಮಿಯ ಪಾತ್ರ ಮಹತ್ವದ್ದು’ ಎಂದರು. ಬಳಿಕ ಅವರೇ ಮಕ್ಕಳಿಗೆ ಮೊದಲ ತರಬೇತಿ ನಡೆಸಿಕೊಟ್ಟರು.

ಆದರ್ಶ ಫ್ರೆಂಡ್ಸ್ ಅಸೋಸಿಯೇಶನ್ ಅಧ್ಯಕ್ಷ ಅಶೋಕ್ ಕೋಟ್ಯಾನ್, ಕದ್ರಿ ಮಂಜುನಾಥ ದೇವಸ್ಥಾನದ ಮೊಕ್ತೇಸರ ರಾಜೇಂದ್ರ ಚಿಲಿಂಬಿ ಹಾಗೂ ಚಾಮರ ಫೌಂಡೇಶನ್ನ ವ್ಯವಸ್ಥಾಪಕ ಟ್ರಸ್ಟಿ ರಚನಾ ಉಪಸ್ಥಿತರಿದ್ದರು.

ಚಾಮರ ಫೌಂಡೇಶನ್ನ ಟ್ರಸ್ಟಿ ಮನೀಶ್ ಕೆ. ಸಾಲ್ಯಾನ್ ಅವರು ಪ್ರಾಸ್ತಾವಿಕ ಮಾತನಾಡುತ್ತಾ, ‘ಯುವ ಪೀಳಿಗೆಯಲ್ಲಿ ಕಲಾ ಮತ್ತು ಸಾಂಸ್ಕೃತಿಕ ಪ್ರಜ್ಞೆ ಬೆಳೆಸುವ ಉದ್ದೇಶದಿಂದ ಯತೀಶ್ ವೈ ಶೆಟ್ಟಿ ಅವರ ನೆನಪಿನಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ’ ಎಂದರು.

ರಂಗ ಕಲಾವಿದೆ ಹಾಗೂ ಚಾಮರ ಫೌಂಡೇಶನ್ ಟ್ರಸ್ಟಿ ತ್ರಿಶಾ ಶೆಟ್ಟಿ ಅವರು ಶಿಬಿರವನ್ನು ನಿರ್ದೇಶಿಸಲಿದ್ದಾರೆ. ಚಾಮರ ಫೌಂಡೇಶನ್ ಟ್ರಸ್ಟಿ ಪ್ರಶಾಂತ್ ಕುಮಾರ್ ಶಿಬಿರದ ಸಮನ್ವಯಕಾರರಾಗಿರುತ್ತಾರೆ. ಮೇ 23ರವರೆಗೆ ಪ್ರತಿದಿನ ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಶಿಬಿರ ನಡೆಯಲಿದೆ. ಶಿಬಿರದ ಕೊನೆಯ ದಿನ ಶಿಬಿರಾರ್ಥಿಗಳಿಂದ ರಂಗ ಪ್ರಯೋಗ ನಡೆಯಲಿದೆ.

ಕೃತಿ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಶಾಂತ್ ಕುಮಾರ್ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-29-632234108

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.