ಮಂಗಳೂರು: ಮುಂಬರುವ ಪವಿತ್ರ ವಾರದ ಆಚರಣೆಗಳಿಗೆ ಮುನ್ನುಡಿಯಾಗಿ, ಮಂಗಳೂರು ಧರ್ಮಕ್ಷೇತ್ರದ ವಾರ್ಷಿಕ ‘ಕ್ರಿಸಮ್ ಬಲಿಪೂಜೆ’ಯು (ತೈಲ ಪವಿತ್ರೀಕರಿಸುವ ಪೂಜೆ) ಗುರುವಾರ ಇಲ್ಲಿನ ರೊಸಾರಿಯೊ ಕ್ಯಾಥೆಡ್ರಲ್ನಲ್ಲಿ ನಡೆಯಿತು.

ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ ಬಲಿಪೂಜೆಯ ನೇತೃತ್ವ ವಹಿಸಿದ್ದರು.

ನಂತರ ಮಾತನಾಡಿದ ಅವರು, ‘ಯೇಸುಕ್ರಿಸ್ತರ ಕಷ್ಟದ ಅನುಭವ, ಮರಣ ಮತ್ತು ಪುನರುತ್ಥಾನದ ರಹಸ್ಯಗಳನ್ನು ಧ್ಯಾನಿಸುವ ಪವಿತ್ರ ದಿನಗಳನ್ನು ಪ್ರವೇಶಿಸಲು ಯಾಜಕರು ಮತ್ತು ವಿಶ್ವಾಸಿಗಳನ್ನು ಆಧ್ಯಾತ್ಮಿಕವಾಗಿ ಸಿದ್ಧಗೊಳಿಸುವ ಮಹತ್ವದ ಘಟ್ಟ ಇದಾಗಿದೆ. ಸುಗಂಧ ಭರಿತವಾದ ಪವಿತ್ರ ಕ್ರಿಸಮ್ ತೈಲವನ್ನು ವಿಶೇಷವಾಗಿ ಪವಿತ್ರೀಕರಿಸಲಾಗುತ್ತದೆ. ಕ್ರಿಶ್ಚಿಯನ್ ಎಂಬ ಪದವು ಕ್ರಿಸಮ್ ಮತ್ತು ಕ್ರಿಸ್ಟೋಸ್ ಎಂಬ ಪದಗಳಿಂದ ಹುಟ್ಟಿಕೊಂಡಿದೆ ಎಂದು ಹೇಳಿದರು.

ಧರ್ಮಪ್ರಾಂತ್ಯದಾದ್ಯಂತ ಎಲ್ಲ ಚರ್ಚ್ಗಳಲ್ಲಿ ವಿವಿಧ ಸಂಸ್ಕಾರ ನೀಡಲು ಬಳಸುವ ಪವಿತ್ರ ತೈಲವನ್ನು ಬಿಷಪ್ ಆಶೀರ್ವದಿಸಿದರು. ಇದೇ ಧರ್ಮಕ್ಷೇತ್ರದ ಎಲ್ಲ ಯಾಜಕರು ಬಲಿಪೀಠದ ಸುತ್ತ ಸೇರಿ, ತಮ್ಮ ಯಾಜಕ ದೀಕ್ಷೆಯ ವಾಗ್ದಾನ ನವೀಕರಿಸಿಕೊಂಡರು.

ಮೊನ್ಸಿಜ್ಞೋರ್ ಮ್ಯಾಕ್ಸಿಂ ಎಲ್. ನೊರೊನ್ಹಾ, ಫಾದರ್ಗಳಾದ ವಿಕ್ಟರ್ ಜಾರ್ಜ್ ಡಿಸೋಜ, ಜಗದೀಶ್ ಪಿಂಟೊ, ಡೇನಿಯಲ್ ವೇಗಾಸ್ ಒ.ಪಿ., ನವೀನ್ ಪಿಂಟೊ, ರೊಸಾರಿಯೊ ಕ್ಯಾಥೆಡ್ರಲ್ನ ಪ್ರಧಾನ ಯಾಜಕ ವಲೇರಿಯನ್ ಡಿಸೋಜ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-29-2124194923

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.