ಮಂಗಳೂರು: ಸ್ವಚ್ಛತೆಗೆ ವಿಶೇಷ ಕಾರ್ಯಪಡೆ ರಚನೆ, ತುಳು ಭಾಷೆ– ಸಂಸ್ಕೃತಿ, ಯಕ್ಷಗಾನ, ಕಂಬಳಕ್ಕೆ ಅನುದಾನ, ಮಹಿಳೆಯರ ಅನುಕೂಲಕ್ಕೆ ಸಖಿ ಶೌಚಾಲಯ ನಿರ್ಮಾಣ, ‘ಮಡಿಲು’ ತಾಯಿ– ಮಕ್ಕಳ ಶಿಶುಪಾಲನಾ ಕೇಂದ್ರ ಸ್ಥಾಪನೆ, ಬೊಂಡಂತಿಲದಲ್ಲಿ ಬೀದಿನಾಯಿ ಆಶ್ರಯ ತಾಣ ನಿರ್ಮಾಣ, ಕರಾವಳಿ ರಸ್ತೆ ಸರ್ವೆ ಮತ್ತು ಅಭಿವೃದ್ಧಿ...ಇಂತಹ ಅನೇಕ ಯೋಜನೆ ಒಳಗೊಂಡ ಮಂಗಳೂರು ಮಹಾನಗರ ಪಾಲಿಕೆಯ ಬಜೆಟ್ ಅನ್ನು ಗುರುವಾರ ಮಂಡಿಸಲಾಯಿತು.

ಪಾಲಿಕೆಯ ಜನಪ್ರತಿನಿಧಿಗಳ ಅವಧಿ ಪೂರ್ಣಗೊಂಡಿರುವ ಕಾರಣ, ಪಾಲಿಕೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರು 2026–27ನೇ ಸಾಲಿನ ಬಜೆಟ್ ಮಂಡಿಸಿದರು.

ಪ್ರಸಕ್ತ ಸಾಲಿನಲ್ಲಿ ಪಾಲಿಕೆಯು ವಿವಿಧ ಮೂಲಗಳಿಂದ ₹629.85 ಕೋಟಿ ಆದಾಯ ನಿರೀಕ್ಷಿಸಿದ್ದು, ಆರಂಭಿಕ ಶಿಲ್ಕು ₹307.83 ಕೋಟಿ ಮೊತ್ತ ಪಾಲಿಕೆ ಬಳಿ ಇದೆ. ಒಟ್ಟು ಪಾವತಿ ₹781.51 ಕೋಟಿ ಅಂದಾಜಿಸಲಾಗಿದ್ದು, ₹156.17 ಕೋಟಿ ಉಳಿತಾಯದ ಬಜೆಟ್ ಇದಾಗಿದೆ ಎಂದರು.

ಪಾಲಿಕೆಯ ಸ್ವಂತ ನಿಧಿಯಡಿ ಆಸ್ತಿ ತೆರಿಗೆಯಿಂದ ₹90 ಕೋಟಿ, ನೀರು ಸರಬ ರಾಜು ಶುಲ್ಕ ₹55 ಕೋಟಿ, ಘನತ್ಯಾಜ್ಯ ನಿರ್ವಹಣೆಯಿಂದ ₹26 ಕೋಟಿ, ಬ್ಯಾಂಕ್ ಬಡ್ಡಿ ₹15 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ರಾಜ್ಯ ಸರ್ಕಾರದಿಂದ ವೇತನ, ನೇರ ಪಾವತಿ ಕಾರ್ಮಿಕರ ವೇತನ, ಎಸ್ಎಫ್ಸಿ ವಿದ್ಯುತ್ ಅನುದಾನದ ಸ್ವೀಕೃತಿ ಹಾಗೂ ವಿವಿಧ ಯೋಜನೆಗಳ ಅಡಿಯಲ್ಲಿ ಒಟ್ಟು ₹199.23 ಕೋಟಿ ಅನುದಾನ, ಕೇಂದ್ರ ಸರ್ಕಾರದ ಅಮೃತ್ –2.0, ಸ್ವಚ್ಛ ಭಾರತ್ ಮಿಷನ್ ಹಾಗೂ ಇನ್ನಿತರ ಅನುದಾನಗಳಿಂದ ಒಟ್ಟು ₹629.85 ಕೋಟಿ ಅನುದಾನ ನಿರೀಕ್ಷಿಸಲಾಗಿದೆ ಎಂದು ಹೇಳಿದರು.

ಈ ಬಾರಿ ಆಸ್ತಿ ತೆರಿಗೆ, ಖಾತಾ ವರ್ಗಾವಣೆ ಶುಲ್ಕ, ಜಾಹೀರಾತು ಶುಲ್ಕ ಸೇರಿ ಮಾರ್ಚ್ ಅಂತ್ಯದವರೆಗೆ ₹141.15 ಕೋಟಿ ಸಂಗ್ರಹಿಸಿದ್ದು, ಶೇ 126ರಷ್ಟು ಸಾಧನೆಯಾಗಿದೆ. ಜಲಸಿರಿ ಯೋಜನೆಯಡಿ 82,849 ನಳ ಸಂಪರ್ಕ ನೀಡಲು ಯೋಚಿಸಲಾಗಿದ್ದು, ಈವರೆಗೆ 37,214 ನಳ ಸಂಪರ್ಕ ನೀಡಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳೆಯರ ಶಿಶು ಸುರಕ್ಷತೆ ದೃಷ್ಟಿಯಿಂದ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ತೆರೆದಿರುವ ಶಿಶುಪಾಲನಾ ಕೇಂದ್ರ ವನ್ನು ಪಾಲಿಕೆಗೆ ಬರುವ ತಾಯಂದಿರು– ಮಕ್ಕಳಿಗೂ ಲಭ್ಯವಾಗುವಂತೆ ಮೇಲ್ದರ್ಜೆಗೇರಿಸಲಾಗುವುದು. ಸುರತ್ಕಲ್ ವಲಯ ಕಚೇರಿ ಮತ್ತು ಕದ್ರಿ ವಲಯ ಕಚೇರಿಯಲ್ಲೂ ಇಂತಹ ಕೇಂದ್ರ ಪ್ರಾರಂಭಿಸಲು ₹50 ಲಕ್ಷ ಮೀಸಲಿಡಲಾಗಿದೆ ಎಂದು ಹೇಳಿದರು.

ಪುರಭವನ ಉನ್ನತೀಕರಣ, ರಸ್ತೆ, ಒಳಚರಂಡಿ, ಮಾರುಕಟ್ಟೆ, ರಾಜ ಕಾಲುವೆ, ನೀರು ಸರಬರಾಜು ಮೊದಲಾದ ಮೂಲ ಸೌಕರ್ಯ ಅಭಿವೃದ್ಧಿಗೂ ಬಜೆಟ್ನಲ್ಲಿ ಅನುದಾನ ಮೀಸಲಿಡಲಾಗಿದೆ.

ಪಾಲಿಕೆಯ ಆಯುಕ್ತ ರವಿಚಂದ್ರ ನಾಯಕ್, ಹಣಕಾಸು ಅಧಿಕಾರಿ ಅಕ್ಷತಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-29-381714414

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.