ಮಂಗಳೂರು: ಕಟ್ಟಡ ನಿರ್ಮಾಣ ಸಾಮಗ್ರಿಗಳ ಕೊರತೆಯಿಂದ ತತ್ತರಿಸುತ್ತಿರುವ ನಿರ್ಮಾಣ ಕ್ಷೇತ್ರ ಚುನಾವಣೆ ಮತ್ತು ಎಸ್ಐಆರ್ ಪ್ರಕ್ರಿಯೆಗಳಿಂದಾಗಿ ಹೊಡೆತ ಅನುಭವಿಸುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಂಪುಕಲ್ಲು, ಮರಳು, ಎಂ.ಸ್ಯಾಂಡ್ ಮುಂತಾದ ವಸ್ತುಗಳು ಇನ್ನೂ ಸಮರ್ಪಕವಾಗಿ ಸಿಗುತ್ತಿಲ್ಲ. ಈಗ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಮತ ಚಲಾಯಿಸಲು ಮತ್ತು ಎಸ್ಐಆರ್ ಪ್ರಕ್ರಿಯೆಗಾಗಿ ಹೊರರಾಜ್ಯಗಳ ಕಾರ್ಮಿಕರು ಊರಿಗೆ ತೆರಳುತ್ತಿದ್ದಾರೆ ಎಂದರು.

ಜಿಲ್ಲೆಯ ಕಾರ್ಮಿಕರ ಪೈಕಿ ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ಉತ್ತರ ಭಾರತದವರಾಗಿದ್ದು ವಿವಿಧ ಕಾರಣಗಳಿಂದ ಊರಿಗೆ ಹೋಗಿದ್ದ ಶೇಕಡ 90ರಷ್ಟು ಕಾರ್ಮಿಕರು ವಾಪಸಾಗಲಿಲ್ಲ. ಪ್ಲಾಸ್ಟರಿಂಗ್, ಬಾರ್ ಬೆಂಡಿಂಗ್ನಂಥ ಕೆಲಸಗಳಿಗೆ ಉತ್ತರ ಭಾರತ ಕಾರ್ಮಿಕರನ್ನೇ ಅವಲಂಬಿಸಲಾಗಿದೆ. ಅವರಿಲ್ಲದೆ ಕೆಲಸ ನಿಂತಿದೆ. ಸರ್ಕಾರದ ಕ್ರಮಗಳಿಂದಾಗಿ ಬೇಡಿಕೆಗೆ ಅನುಗುಣವಾಗಿ ಕೆಂಪುಕಲ್ಲು ಪೂರೈಕೆಯಾಗುತ್ತಿಲ್ಲ. ಎಂ ಸ್ಯಾಂಡ್ ಕೂಡ ಬೇಕಾದಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ. ಗುತ್ತಿಗೆದಾರರು ವಹಿಸಿಕೊಂಡ ಕಾಮಗಾರಿ ಸಮಯಕ್ಕೆ ಪೂರ್ತಿಗೊಳಿಸಲಾಗದೆ ಸಂಘರ್ಷ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.

ಎಂಜಿನಿಯರ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಉಜ್ವಲ್ ಡಿಸೋಜ, ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ದಿನಕರ್, ಸತೀಶ್ ಕುಮಾರ್, ಕಾರ್ಯದರ್ಶಿ ಅಶೋಕ್ ಕುಳಾಯಿ, ಕೆನರಾ ಬಿಲ್ಡರ್ಸ್ ಅಸೋಸಿಯೇಷನ್ನ ವಿನಾಯಕ ಪೈ, ಕನ್ಸಲ್ಟಿಂಗ್ ಸಿವಿಎಲ್ ಎಂಜಿನಿಯರ್ಸ್ ಅಸೋಸಿಯೇಶನ್ನ ಅರುಣ್ ರಾಜ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-29-1644670244

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.