ಮಂಗಳೂರು: ರಾಜ್ಯದಲ್ಲಿ ಗೋಹತ್ಯೆ ಪ್ರತಿಬಂಧಕ ಕಾಯ್ದೆ ಜಾರಿಯಲ್ಲಿದ್ದರೂ ದನ, ಹೋರಿ, ಕರು 13 ವರ್ಷದೊಳಗಿನ ಎಮ್ಮೆ ಹಾಗೂ ಕೋಣಗಳ ಬಲಿ ಇನ್ನೂ ನಿಂತಿಲ್ಲ. ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಹಾಗೂ ಬಜರಂಗದಳ ಒತ್ತಾಯಿಸಿವೆ.

ಈ ಕುರಿತು ಇಲ್ಲಿ ಮಂಗಳವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ವಿಎಚ್ಪಿ ದಕ್ಷಿಣ ಪ್ರಾಂತ ಸಹಕಾರ್ಯವಾಹ ಶರಣ್ ಪಂಪ್ವೆಲ್, ‘ರಾಜ್ಯದಲ್ಲಿ ಬೆಂಗಳೂರು, ಹುಬ್ಬಳ್ಳಿ ಮತ್ತು ಮಂಗಳೂರಿನಲ್ಲಿ ಮಾತ್ರ ಕಸಾಯಿಕಾನೆಗಳಿದ್ದವು. ಅದರಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿಯ ಕಸಾಯಿಕಾನೆಗಳು ಕಾನೂನು ಪ್ರಕಾರ ನಡೆಯುತ್ತಿಲ್ಲ. ಮಂಗಳೂರಿನ ಕಸಾಯಿಕಾನೆ ಬಂದ್ ಆಗಿದೆ. ಆದರೂ ಮಳಿಗೆಗಳಲ್ಲಿ ಅವ್ಯಾಹತವಾಗಿ ಗೋಮಾಂಸ ಲಭ್ಯ ಇರುವುದು ಹೇಗೆ’ ಎಂದು ಪ್ರಶ್ನೆ ಮಾಡಿದರು.

‘ಗೋವುಗಳ ಅಕ್ರಮ ಸಾಗಾಟ ಸಂಬಂಧ ಮೇ ತಿಂಗಳಿನಲ್ಲಿ 20 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಕುದ್ರೋಳಿ, ಜೋಕಟ್ಟೆ, ಕಾಟಿಪಳ್ಳ, ಚೊಕ್ಕ ಬೆಟ್ಟು, ಮುಕ್ಕಚ್ಚೇರಿಗಳಲ್ಲಿರುವ ಅಕ್ರಮ ಕಸಾಯಿಕಾನೆಗಳಿಂದ ಗೋಮಾಂಸ ಪೂರೈಕೆ ಆಗುತ್ತಿದೆ. ಡ್ರಗ್ಸ್ ಜಾಲವನ್ನು ಮಟ್ಟಹಾಕಿದ ರೀತಿಯಲ್ಲೇ ವಿಶೇಷ ತಂಡ ರಚಿಸಿ ಗೋಮಾಂಸ ಪೂರೈಕೆ ಜಾಲವನ್ನೂ ಮಟ್ಟಹಾಕಬೇಕು’ ಎಂದು ಒತ್ತಾಯಿಸಿದರು.

ಬಕ್ರೀದ್ ಸಂದರ್ಭದಲ್ಲಿ ಯಾವುದೇ ಗೋಹತ್ಯೆ ನಡೆಸಬಾರದು ಎಂದು ಮುಸ್ಲಿಂ ಮುಖಂಡರು ಕರೆ ನೀಡುವ ಮೂಲಕ ಸಾಮರಸ್ಯದ ಸಂದೇಶ ಸಾರಲಿ ಎಂದರು.

ವಿಎಚ್ಪಿ ಕಾರ್ಯಕಾರಿಣಿ ಸದಸ್ಯ ಕಟೀಲ್ ದಿನೇಶ್ ಪೈ,‘ಗೋಹತ್ಯೆ ಪ್ರತಿಬಂಧಕ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪೊಲೀಸರಿಗೆ ಸಂಪೂರ್ಣ ಅಧಿಕಾರ ಇದೆ. ಅವರು ಗೋಕಳ್ಳಸಾಗಣೆ ತಡೆಯದ ಕಾರಣ ಸಾರ್ವಜನಿಕರು ತಡೆಯಬೇಕಾಗಿ ಬಂದಿದೆ. ಗೋವುಗಳ ವಧೆ ತಡೆಯುವ ಅಧಿಕಾರ ಜನರಿಗೂ ಇದೆ’ ಎಂದರು.

ಸಂಘಟನೆಯ ಸಹಸಂಯೋಜಕ ಭುಜಂಗ ಕುಲಾಲ್, ಜಿಲ್ಲಾ ಗೋರಕ್ಷ ಪ್ರಮುಖ್ ಹರೀಶ್ ಶೇಟ್, ಪ್ರಮುಖ ರಾದ ಪ್ರದೀಪ್ ಸರಿಪಲ್ಲ, ರವಿ ಅಸೈಗೋಳಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-29-1286167704

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.