ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮನೆ ಗಣತಿ ಕಾರ್ಯ ಏ. 16ರಿಂದ ಆರಂಭವಾಗಿದೆ. ಕಳೆದ ಎರಡು ದಿನಗಳಿಂದ ಚುರುಕು ಪಡೆದಿದೆ.

‘ಜಿಲ್ಲೆಯಲ್ಲಿ ಸುಮಾರು 5.47 ಲಕ್ಷ ಕಟ್ಟಡಗಳನ್ನು ಗಣತಿಗಾಗಿ ಗುರುತಿಸಲಾಗಿದ್ದು, ಬುಧವಾರದವರೆಗೆ 1 ಲಕ್ಷಕ್ಕೂ ಅಧಿಕ ಕಟ್ಟಡಗಳ ಗಣತಿ ನಡೆದಿದೆ’ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ನಮಗೆ ದಿನಕ್ಕೆ ಇಂತಿಷ್ಟು ಮನೆಗಳ ಗಣತಿಯನ್ನು ಪೂರ್ಣಗೊಳಿಸಬೇಕು ಎಂದು ಹಿರಿಯ ಅಧಿಕಾರಿಗಳು ಗುರಿ ನಿಗದಿಪಡಿಸುತ್ತಾರೆ. ಬೆಳಿಗ್ಗೆ 10 ಗಂಟೆಗೇ ಸುಡು ಬಿಸಿಲಿರುತ್ತದೆ. ಬಿಸಿಲಿನ ಝಳದಿಂದಾಗಿ ಹೊರಗೆ ಹೋಗಲು ಸಾಧ್ಯವಿಲ್ಲದ ಸ್ಥಿತಿ ಇದೆ. ಆಯಾ ದಿನದಲ್ಲಿ ನಿಗದಿ ಪಡಿಸಿದಷ್ಟು ಮನೆಗಳ ಗಣತಿ ಪೂರ್ಣಗೊಳಿಸಲು ಕಷ್ಟವಾಗುತ್ತಿದೆ. ನಾವು ಮನೆಯಿಂದ ಆದಷ್ಟು ಬೇಗ ಹೊರಟು, ಹೊತ್ತೇರುವ ಮುನ್ನವೇ ಸಾಧ್ಯವಾದಷ್ಟು ಮನೆಗಳ ಗಣತಿ ನಡೆಸುತ್ತಿದ್ದೇವೆ’ ಎಂದು ಗಣತಿದಾರರಾಗಿ ನಿಯೋಜನೆಗೊಂಡ ಆಶಾ ಕಾರ್ಯಕರ್ತೆಯೊಬ್ಬರು ಅಳಲು ತೋಡಿಕೊಂಡರು.

‘ಕೆಲವರು ನಾವು ಕೇಳಿದ ಮಾಹಿತಿ ಸರಿಯಾಗಿ ನೀಡುತ್ತಾರೆ. ಇನ್ನು ಕೆಲವರು ಬೇಕೆಂದೇ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಾವು ವಿಧಿ ಇಲ್ಲದೇ ಅವರು ಹೇಳಿದ್ದ ವಿವರಗಳನ್ನಷ್ಟೇ ನಮೂದಿಸಬೇಕಾಗಿದೆ. ನಾವು ಭೇಟಿ ನೀಡಿದ ಕಟ್ಟಡಗಳಿಗೆ ಸಂಖ್ಯೆ ನೀಡಬೇಕು. ಅದನ್ನು ಅಲ್ಲಿನ ಗೋಡೆಯಲ್ಲಿ ಬರೆಯಬೇಕು. ಕೆಲವರು ಕಟ್ಟಡದಲ್ಲಿ ಯಾವುದೇ ಸಂಖ್ಯೆ ನಮೂದಿಸಲು ಬಿಡುತ್ತಿಲ್ಲ’ ಎಂದು ಗಣತಿ ಕಾರ್ಯಕ್ಕೆ ನಿಯೋಜನೆಗೊಂಡ ಅಂಗನವಾಡಿ ಕಾರ್ಯಕರ್ತೆಯೊಬ್ಬರು ದೂರಿದರು.

ಗಣತಿಯ ಪ್ರದೇಶದ ವ್ಯಾಪ್ತಿ ಹಂಚಿಕೆಗೆ ಸಂಬಂಧಿಸಿ ಕೆಲವು ಗೊಂದಲಗಳಿದ್ದವು. ಅವುಗಳಲ್ಲಿ ಬಹುತೇಕವು ಬಗೆಹರಿದಿವೆ ಎಂದರು.

ಬೈಗುಳಗಳ ಸುರಿಮಳೆ: ‘ಕಳೆದ ವರ್ಷ ಜಾತಿ ಸಮೀಕ್ಷೆ ನಡೆದಾಗ ನಾವು ಎಲ್ಲ ಮಾಹಿತಿ ನೀಡಿದ್ದೇವೆ. ಈಗ ಮತ್ತೆ ನಿಮಗೆ ಏಕೆ ಮಾಹಿತಿ ನೀಡಬೇಕು ಎಂದು ಕೆಲವರು ತಕರಾರು ತೆಗೆಯುತ್ತಿದ್ದಾರೆ. ನಾವು ಸರ್ಕಾರದ ಸೂಚನೆ ಮೇರೆಗೆ ಈ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದರೂ ಅರ್ಥಮಾಡಿಕೊಳ್ಳುತ್ತಿಲ್ಲ. ನಮ್ಮದಲ್ಲದ ತಪ್ಪಿಗೆ ನಾವು ಬೈಗುಳ ಕೇಳಬೇಕಾಗಿದೆ’ ಎಂದು ಅವರು ತಿಳಿಸಿದರು.

ಕೈಕೊಡುತ್ತಿರುವ ಆ್ಯಪ್: ‘ಗಣತಿ ನಡುವೆ ಕೆಲವರಿಗೆ ಆ್ಯಪ್ ಕೈಕೊಡುತ್ತಿದೆ. 5ಜಿ ತಂತ್ರಜ್ಞಾನಕ್ಕೆ ಹೊಂದಿಕೆಯಾಗುವ ಮೊಬೈಲ್ನಲ್ಲಿ ಆ್ಯಪ್ ಸರಿಯಾಗಿ ಕೆಲಸ ಮಾಡುತ್ತಿದೆ. ಕೆಲವು ಆಶಾ ಕಾರ್ಯಕರ್ತೆಯರ, ಅಂಗನವಾಡಿ ಕಾರ್ಯಕರ್ತೆಯರ ಬಳಿ ಹಳೆ ಮಾದರಿಯ ಸ್ಮಾರ್ಟ್ಫೋನ್ಗಳಿದ್ದು, ಅವುಗಳಿಗೆ ಮನೆ ಗಣತಿಯ ಆ್ಯಪ್ ಹೊಂದಾಣಿಕೆ ಆಗುತ್ತಿಲ್ಲ. ಕೆಲವು ಮೊಬೈಲ್ಗಳಿಗೆ ಆ್ಯಪ್ ಡೌನ್ಲೋಡ್ ಆಗಿದ್ದರೂ, ಅದರಲ್ಲಿ ನಮೂದಿಸಿ ಮಾಹಿತಿ ಏಕಾಏಕಿ ಅಳಿಸಿಹೋಗುತ್ತಿದೆ. ಇಂತಹ ತಾಂತ್ರಿಕ ಸಮಸ್ಯೆಯಿಂದಾಗಿ ಗಣತಿ ಕಾರ್ಯವನ್ನು ನಿರೀಕ್ಷಿಸಿದಷ್ಟು ವೇಗದಲ್ಲಿ ನಡೆಸಲು ಸಾಧ್ಯವಾಗುತ್ತಿಲ್ಲ. ಕೆಲವರು ತಮ್ಮಲ್ಲಿ ದುಡ್ಡಿಲ್ಲದಿದ್ದರೂ ಸಾಲ ಮಾಡಿ ಗಣತಿ ಕಾರ್ಯಕ್ಕಾಗಿ ಹೊಸ ಮೊಬೈಲ್ ಖರೀದಿಸಿದ್ದಾರೆ’ ಎಂದು ಗಣತಿ ಸಿಬ್ಬಂದಿಯೊಬ್ಬರು ತಿಳಿಸಿದರು.

‘ಕೆಲವು ಮನೆಗಳಿಗೆ ಸಂಪರ್ಕ ರಸ್ತೆಯೇ ಇಲ್ಲ. ಕೆಲವೆಡೆ ಕಾಡಿನ ನಡುವೆ ಒಂದೋ ಎರಡೋ ಮನೆಗಳಿರುತ್ತವೆ. ಅರ್ಧ ದಾರಿವರೆಗೆ ರಿಕ್ಷಾದಲ್ಲಿ ಕ್ರಮಿಸಿ ಬಳಿಕ ನಡೆದೇ ತಲುಪ ಬೇಕಾದ ಮನೆಗಳೂ ಇವೆ. ಗಣತಿ ಕಾರ್ಯಕ್ಕೆ ನಮಗೆ ಎಷ್ಟು ಗೌರವಧನ ಕೊಡುತ್ತಾರೋ ಗೊತ್ತಿಲ್ಲ. ಒಮ್ಮೆ ಗಣತಿ ಮುಗಿದರೆ ಸಾಕು ಎಂದೆನಿಸಿದೆ. ಈ ಸಾರಿಗೆ ವೆಚ್ಚವನ್ನು ಸ್ವಂತ ದುಡ್ಡಿನಿಂದ ಭರಿಸುತ್ತಿದ್ದೇವೆ’ ಎಂದರು.

‘ಗಣತಿ ಕಾರ್ಯಕ್ಕೆ ನಿಯೋಜನೆ ಗೊಂಡ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಗೆ ಸಂಬಂಧಿಸಿದ ಕೆಲಸವನ್ನೂ ಜೊತೆಯಲ್ಲೇ ನಿರ್ವಹಿಸ ಬೇಕು. ಬೂತ್ ಮಟ್ಟದ ಅಧಿಕಾರಿಗಳಾಗಿ (ಬಿಎಲ್ಒ) ನಿಯೋಜನೆಗೊಂಡ ಶಿಕ್ಷಕರಿಗೆ ಗಣತಿ ಕಾರ್ಯವನ್ನೂ ವಹಿಸಲಾಗಿದೆ. ಎರಡೆರಡು ಕರ್ತವ್ಯಗಳನ್ನೂ ಒಟ್ಟೊಟ್ಟಿಗೆ ನಿಭಾಯಿಸಬೇಕಾದ ಸ್ಥಿತಿ ಇದೆ’ ಎಂದು ಗಣತಿಗೆ ನಿಯೋಜನೆ ಗೊಂಡ ಶಿಕ್ಷಕರೊಬ್ಬರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-29-2075762531

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.