ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ವಾರಗಳಿಂದೀಚೆಗೆ ಅಲ್ಲಿಲ್ಲಿ ಸಂಜೆ ಹಾಗೂ ರಾತ್ರಿ ವೇಳೆ ಧಾರಾಕಾರ ಮಳೆಯಾಗುತ್ತಿದೆ. ಆದರೂ ಜಿಲ್ಲೆಯ ಸರಾಸರಿ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ಗಿಂತ ಜಾಸ್ತಿಯೇ ಇದೆ. ಜಿಲ್ಲೆಯಲ್ಲಿ ಉಷ್ಣಾಂಶ ವಾಡಿಕೆಗಿಂತ 1.3 ಡಿಗ್ರಿಗಳಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜಿಲ್ಲೆಯ ವಿವಿಧ ಕಡೆ ಶನಿವಾರ ರಾತ್ರಿ ಬಿರುಸಿನ ಮಳೆಯಾಗಿತ್ತು. ಆದರೂ ಜಿಲ್ಲೆಯಲ್ಲಿ ಭಾನುವಾರ ಸರಾಸರಿ ಗರಿಷ್ಠ ಉಷ್ಣಾಂಶ 35.5 ಡಿಗ್ರಿ ಸೆಲ್ಸಿಯಸ್ ಇತ್ತು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (ಕೆಎಸ್ ಎನ್ಎಂಡಿಸಿ) ಮಾಹಿತಿ ಪ್ರಕಾರ ಜಿಲ್ಲೆಯ ಕಡಬ ಹೋಬಳಿಯಲ್ಲಿಯಲ್ಲಿ ಭಾನುವಾರ ಗರಿಷ್ಠ 37.7 ಡಿಗ್ರಿ ಉಷ್ಣಾಂಶ ದಾಖಲಾಗಿದ್ದರೆ, ಸುಳ್ಯ ಹಾಗೂ ಪಾಣಾಜೆ ಹೋಬಳಿಗಳಲ್ಲಿ ಗರಿಷ್ಠ ಉಷ್ಣಾಂಶ 35.9 ಡಿಗ್ರಿವರೆಗೆ ತಲುಪಿತ್ತು.

2026ರ ಫೆಬ್ರುವರಿ ಅಂತ್ಯದಲ್ಲಿ ಜಿಲ್ಲೆಯ ಕೆಲವರು ಕಡೆ ಗರಿಷ್ಠ ಉಷ್ಣಾಂಶ 40 ಡಿಗ್ರಿ ತಲುಪಿತ್ತು. ಆ ಬಳಿಕ ಅಲ್ಲಲ್ಲಿ ಮಳೆಯಾಗಿದ್ದರಿಂದ ತಾಪಮಾನ ತುಸು ಇಳಿಕೆ ಕಂಡಿತ್ತು. ಆದರೂ ನಮ್ಮ ಜಿಲ್ಲೆಯಲ್ಲೂ ಬಿಸಿಲಿನ ಆಘಾತದ ಮುನ್ಸೂಚನೆ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಭಾರತೀಯ ಹವಾಮಾನ ಇಲಾಖೆ ಈ ವರ್ಷದ ಬೇಸಿಗೆಯಲ್ಲಿ ಪದೇ ಪದೇ ಬಿಸಿಲಿನ ಆಘಾತದ ಮುನ್ಸೂಚನೆ ನೀಡಿದ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡವೂ ಸೇರಿತ್ತು.

‘15 ವರ್ಷ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 40 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶ ದಾಖಲಾಗಿದ್ದೇ ಇಲ್ಲ. ಎಲ್ಲೋ ರಾಜಸ್ಥಾನದಲ್ಲಿ ಉಷ್ಣಾಂಶ 40 ಡಿಗ್ರಿ ದಾಡಿದಾಗ ನಾವು ಅಚ್ಚರಿ ಪಡುತ್ತಿದ್ದೆವು. ಈಗ ನಮ್ಮ ಜಿಲ್ಲೆಯಲ್ಲೂ ಜನವರಿ– ಫೆಬ್ರುವರಿ ತಿಂಗಳಲ್ಲಿ ಉಷ್ಣಾಂಶ 40 ಡಿಗ್ರಿ ದಾಡುತ್ತಿದೆ. ಭೂಮಿ ಕಾದ ಕಾವಲಿಯಂತಾದರೂ ಜನರಿಗೆ ಅದರ ಬಿಸಿ ಇನ್ನೂ ತಟ್ಟಿಲ್ಲ. ಪರಿಸರ ಸಂರಕ್ಷಣೆಯ ಮಹತ್ವವನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಪರಿಸರ ಕಾರ್ಯಕರ್ತ ದಿನೇಶ್ ಹೊಳ್ಳ.

‘ಇತ್ತೀಚಿನ ವರ್ಷಗಳವರೆಗೂ ನಮ್ಮ ಜಿಲ್ಲೆ ಪ್ರಾಕೃತಿಕವಾಗಿ ಸಮೃದ್ಧವಾಗಿಯೇ ಇತ್ತು. ನಾವಾಗಿಯೇ ಜಿಲ್ಲೆಗೆ ಬರಗಾಲವನ್ನು ಆಹ್ವಾನಿಸಿದ್ದೇವೆ. ಪೂರ್ವದಲ್ಲಿ ನಿತ್ಯಹರಿದ್ವರ್ಣದ ಪಶ್ಚಿಮ ಘಟ್ಟದ ಸಾಲು ಹಾಗೂ ಪಶ್ಚಿಮದ ಅರಬ್ಬೀ ಸಮುದ್ರದ ನಡುವೆ ಹಸಿರಿನಿಂದ ಕಂಗೊಳಿಸುತ್ತಿದ್ದ ಕರಾವಳಿ ಈಗ ಬೆಂಗಾಡಾಗಿದೆ. ಕಾಡು ಕಡಿಯುವುದನ್ನೇ, ಗಗನಚುಂಬಿ ಕಟ್ಟಡ ಕಟ್ಟುವುದನ್ನೇ ಅಭಿವೃದ್ಧಿ ಎಂದು ಜನಪ್ರತಿನಿಧಿಗಳು ಭಾವಿಸಿದ್ದಾರೆ. ಪಶ್ಚಿಮ ಘಟ್ಟಕ್ಕೆ ಹಾನಿ ಮಾಡುವ ಜಲವಿದ್ಯುತ್ ಯೋಜನೆ, ಎತ್ತಿನಹೊಳೆಯಂತಹ ಯೋಜನೆಗಳು ಜಾರಿಯಾಗುತ್ತಲೇ ಇವೆ’ ಎಂದರು.

‘ಕಳೆದ ವರ್ಷ ಮೇ ತಿಂಗಳಿನಿಂದ ಡಿಸೆಂಬರ್ ಅಂತ್ಯದವರೆಗೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಆದರೂ 2026ರ ಜನವರಿ ತಿಂಗಳಲ್ಲೇ ಚಾರ್ಮಾಡಿ ಪರಿಸರದ ನದಿ ತೊರೆಗಳಲ್ಲಿ ನೀರಿನ ಹರಿವು ನಿಂತಿತ್ತು. ನಿತ್ಯಹರಿದ್ವರ್ಣ ಕಾಡುಗಳಲ್ಲಿ ಹಿಂದೆಲ್ಲ ಸೂರ್ಯನ ಕಿರಣ ನೆಲವನ್ನು ಸೊಂಕುತ್ತಿರಲಿಲ್ಲ. ಈಗ ಅಂತಹ ಸ್ಥಿತಿ ಉಳಿದಿಲ್ಲ. ಪಶ್ಚಿಮ ಘಟ್ಟಕ್ಕೆ ಬಂದೊದಗಿದ ದುಃಸ್ಥಿತಿ ಪರಿಣಾಮವಾಗಿ ಮಂಗಳೂರಿನಲ್ಲಿ ಕುಡಿಯುವ ನೀರಿಗೆ ರೇಷನಿಂಗ್ ಮೊರೆಹೋಗಬೇಕಾಗಿದೆ. ನಾವು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ’ ಎಂದು ಎಚ್ಚರಿಸಿದರು.

‘ಬಿಸಿಲಿನ ಆಘಾತ ಮುನ್ನೆಚ್ಚರಿಗೆ ವಹಿಸಿ’

ಬಿಸಿಲಿನ ಆಘಾತವೂ ಜೀವಕ್ಕೆ ಅಪಾಯಕಾರಿಯೂ ಆಗಬಲ್ಲುದು.
ದೇಹದಲ್ಲಿ ಉಷ್ಣ ಹೆಚ್ಚಾಗುವುದು, ಗೊಂದಲ, ಪ್ರಜ್ಞೆ ತಪ್ಪುವುದು ಮುಂತಾದವು ಶಾಖಾಘಾತದ ಲಕ್ಷಣಗಳು. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಆಘಾತಕ್ಕೆ ಒಳಗಾದ ವ್ಯಕ್ತಿಯನ್ನು ನೆರಳಿಗೆ, ತಂಪಾದ ಸ್ಥಳಕ್ಕೆ ಅಥವಾ ಹವಾನಿಯಂತ್ರಿತ ಕೊಠಡಿಗೆ ಕರೆದೊಯ್ಯಬೇಕು. ದೇಹವನ್ನು ಸಾಧ್ಯವಾದಷ್ಟು ಬೇಗ ತಂಪು ಮಾಡಬೇಕು.
ತಕ್ಷಣ ತುರ್ತು ಸೇವೆಗಾಗಿ 108 ಸಂಖ್ಯೆಗೆ ಕರೆ ಮಾಡಬಹುದು. ಅನಾರೋಗ್ಯ ಉಲ್ಬಣಗೊಂಡರೆ ವೈದ್ಯರ ಸಹಾಯ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಸಲಹೆ ನೀಡಿದರು.

ದೇಹದ ಮೇಲೆ ನೀರು ಸಿಂಪಡಿಸಿ ಅಥವಾ ತಣ್ಣೀರಿನಲ್ಲಿ ಒದ್ದೆ ಮಾಡಿದ ಟವೆಲ್ ಹೊದಿಸಬೇಕು. ಕಂಕುಳು, ಕುತ್ತಿಗೆ, ಬೆನ್ನು ಮತ್ತು ತೊಡೆಸಂದು ಭಾಗಕ್ಕೆ ಐಸ್ ಪ್ಯಾಕ್ ಅಥವಾ ತಣ್ಣನೆಯ ಒದ್ದೆ ಬಟ್ಟೆ ಇಡಬಹುದು. ಒದ್ದೆಯಾದ ಚರ್ಮದಿಂದ ನೀರು ಆವಿಯಾಗಲು ಫ್ಯಾನ್ ಬಳಸಬೇಕು. ವ್ಯಕ್ತಿ ಎಚ್ಚರವಾಗಿದ್ದರೆ ತಣ್ಣೀರು ಅಥವಾ ಎಲೆಕ್ಟ್ರೋಲೈಟ್ ಪಾನೀಯ ನೀಡಬೇಕು. ಮದ್ಯ ಅಥವಾ ಕೆಫೀನ್ ನೀಡಬಾರದು. ಬಿಗಿಯಾದ, ದಪ್ಪದ ಬಟ್ಟೆಗಳನ್ನು ಧರಿಸಿದ್ದರೆ ಸಡಿಲಗೊಳಿಸುವುದು ಬಿಸಿಲಿನ ಆಘಾತದಿಂದ ಹೊರಬರಲು ನೆರವಾಗಲಿದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಬಿಸಿಲಿನಿಂದ ಬಳಲಿಕೆಗೆ ಒಳಗಾದವರನ್ನು ತಂಪಾದ ಸ್ಥಳಕ್ಕೆ ಕರೆದೊಯ್ದು ನೀರು ಕುಡಿಸಿ ವಿಶ್ರಾಂತಿ ಕೊಡಬೇಕು. ಗೊಂದಲ ಮತ್ತು ಜ್ವರದೊಂದಿಗೆ ಯಾರಾದರೂ
ಬಿಸಿಲಿನಲ್ಲಿ ಕುಸಿದು ಬಿದ್ದರೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಬೇಕು.

ಬಿಸಿಲಿನಿಂದ ಆಘಾತಕ್ಕೆ ಒಳಗಾಗುವವರಿಗೆ ಚಿಕಿತ್ಸೆ
ನೀಡಲೆಂದೇ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ಹೊಸ
ಶಸ್ತ್ರಚಿಕಿತ್ಸಾ ಬ್ಲಾಕ್ನ 5ನೇ ಮಹಡಿಯಲ್ಲಿ 10 ಹಾಸಿಗೆಗಳ ವಿಶೇಷ ಘಟಕವನ್ನು ವ್ಯವಸ್ಥೆ ಮಾಡಲಾಗಿದೆ.

ಸಹಾಯವಾಣಿ: 7483035127, 8217662885, 9945927253, 9167607879.

ಬಿಸಿಲಿನ ಆಘಾತ: ವಹಿಸಬೇಕಾದ ಕ್ರಮ

lಬಾಯಾರಿಕೆ ಇಲ್ಲದಿದ್ದರೂ ದಿನವಿಡೀ ದ್ರವಾಹಾರ
(ನೀರು, ಎಳನೀರು, ಒಆರ್ಎಸ್) ಕುಡಿಯಬೇಕು.

lಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಹೊರಾಂಗಣ ಚಟುವಟಿಕೆ ಮಿತಿಗೊಳಿಸಬೇಕು
ಅಥವಾ ತಪ್ಪಿಸಬೇಕು.

lಹಗುರವಾದ, ಸಡಿಲವಾದ, ತಿಳಿ ಬಣ್ಣದ ಹತ್ತಿ ಬಟ್ಟೆ ಧರಿಸಬೇಕು.

lಹೊರಾಂಗಣದಲ್ಲಿ ಕೆಲಸ ಮಾಡುವಾಗ ಆಗಾಗ ನೆರಳಿನಲ್ಲಿ ವಿಶ್ರಾಂತಿ ಪಡೆಯಸಬೇಕು.

lವೃದ್ಧರು ಮತ್ತು ದೀರ್ಘಕಾಲದ ಕಾಯಿಲೆಪೀಡಿತರ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು

lಕಾರ್ಬೋನೇಟೆಡ್ ಪಾನೀಯಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ

lಹೊರಾಂಗಣಕ್ಕೆ ಹೋಗುವಾಗ ಕೊಡೆ, ತಂಪು ಕನ್ನಡಕ, ಟೋಪಿ ಧರಿಸಬೇಕು

ಬಿಸಿಲಿನ ಆಘಾತದ ಬಳಲಿಕೆಯ ಲಕ್ಷಣಗಳು

ದೇಹದ ಉಷ್ಣತೆ ಕಡಿಮೆಯಾಗುವುದು, ಗೊಂದಲ, ತೊದಲು ಮಾತು, ಪ್ರಜ್ಞೆ ತಪ್ಪುವುದು, ಬಿಸಿ ಅಥವಾ ಒಣಚರ್ಮ ಇಲ್ಲವೇ ವಿಪರೀತ ಬೆವರು, ವೇಗದ ಹೃದಯ ಬಡಿತ ತಣ್ಣನೆಯ ಇಲ್ಲವೇ ಜಿಗುಟಾದ ಚರ್ಮ ಕಂಡುಬರುವುದು, ತಲೆಸುತ್ತು, ಮೂರ್ಚೆ, ದುರ್ಬಲ ನಾಡಿ, ಸ್ನಾಯು ಸೆಳೆತ, ವಾಕರಿಕೆ...

ಜಿಲ್ಲೆಯಲ್ಲಿ ಇಂತಹ ಪರಿಸ್ಥಿತಿ ಎದುರಾಗಿದ್ದಕ್ಕೆ ಪರಿಸರ ಸಂರಕ್ಷಣೆ ಮರೆತ ಜನರು ಹಾಗೂ ಜನಪ್ರತಿನಿಧಿಗಳೇ ಕಾರಣ. ಈಗಲೇ ಎಚ್ಚೆತ್ತು ಹಸಿರು ಸಂವರ್ಧನೆಗೆ ಎಲ್ಲರೂ ಕೈಜೋಡಿಸಬೇಕು. ಇಲ್ಲಿದ್ದರೆ ಭವಿಷ್ಯ ಇನ್ನಷ್ಟು ಭೀಕರವಾಗಲಿದೆ
ದಿನೇಶ್ ಹೊಳ್ಳ, ಪರಿಸರ ಕಾರ್ಯಕರ್ತ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-29-1100997599

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.