ಮಂಗಳೂರು: ‘ಕ್ರೈಸ್ತ ವಂಶಾವಳಿ ತಿಳಿಯಲು ಚರ್ಚ್ ದಾಖಲೆ ನೋಡಿದರೆ ಸಾಕು. ಇದೊಂದು ಕುತೂಹಲ ತಣಿಸುವ ಕಾರ್ಯ ಹೊರತು, ಇದರಿಂದ ಹೆಚ್ಚಿನ ಉಪಯೋಗವೇನೂ ಕಾಣಿಸದು’ ಎಂದು ವಂಶಾವಳಿ ತಜ್ಞ ಮೈಕಲ್ ಲೋಬೊ ಹೇಳಿದರು.

ಕರ್ನಾಟಕ ಕೊಂಕಣಿ ಭಾಷಾ ಮಂಡಲದ 52ನೇ ವರ್ಷದ ಸ್ಥಾಪನಾ ದಿನದ ಪ್ರಯುಕ್ತ ನಗರದ ರಥಬೀದಿಯ ಬಿಇಎಮ್ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಜ್ರ ಉದ್ಯಮಿ ಎಸ್.ಎಲ್ ಪ್ರಶಾಂತ್ ಶೇಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ರೇಮಂಡ್ ಡಿಕುನ್ಹ ತಾಕೊಡೆ ಅಧ್ಯಕ್ಷತೆ ವಹಿಸಿದ್ದರು. ಜೋನ್ ಎ ತಾವ್ರೊ ಶುಭಹಾರೈಸಿದರು
ತಾವ್ರೊ ವಂಶಾವಳಿ ಬಗ್ಗೆ ಸಂಶೋಧನೆ ಮಾಡಿದ ನೊಯೆಲ್ ತಾವ್ರೊ ಈ ಅಧ್ಯಯನದ ಬಗ್ಗೆ ವಿವರಿಸಿದರು.
ಅನೇಕರು ತಮ್ಮ ವಂಶಾವಳಿ ಬಗ್ಗೆ ಮಾಹಿತಿ ಹಂಚಿಕೊಂಡರು.

ಸಂಸ್ಥೆಯ ಖಜಾಂಜಿ ವಸಂತ ರಾವ್ ಮತ್ತು ಗೀತಾ ಸಿ ಕಿಣಿ, ಜೂಲಿಯೆಟ್ ಫರ್ನಾಂಡಿಸ್ ಪ್ರಶ್ನೋತ್ತರ ನಡೆಸಿಕೊಟ್ಟರು. ಸಂಸ್ಥೆಯ ಉಪಾಧ್ಯಕ್ಷರಾದ ಮೀನಾಕ್ಷಿ ಎನ್ ಪೈ ಮತ್ತು ರಾಜ್ಯ ಶಿಕ್ಷಕರ ಸಂಘದ ಉಪಾಧ್ಯಕ್ಷ ಸ್ಟ್ಯಾನಿ ತಾವ್ರೊ ಭಾಗವಹಿಸಿದ್ದರು. ಕಾರ್ಯಕಾರಿ ಸಮಿತಿ ಸದಸ್ಯ ರಾಬರ್ಟ್ ಮೆನೆಜಸ್ ಸ್ವಾಗತಿಸಿದರು. ಕಾರ್ಯದರ್ಶಿ ಲಿಸ್ಟನ್ ಡಿಸೋಜ ವಂದಿಸಿದರು. ಜೊಸ್ಸಿ ಪಿಂಟೊ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.