ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿಈ ಹಿಂದೆ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಿರುವ ಪ್ರಕರಣದ ತನಿಖೆ ವೇಳೆ ನೆಲ ಅಗೆಯುವುದಕ್ಕೆ ಬಳಸಿದ ಜೆಸಿಬಿಯ ಬಿಲ್ ಹಾಗೂ ಈ ಕಾರ್ಯಕ್ಕೆ ನೆರವಾಗಿದ್ದ ಕಾರ್ಮಿಕರ ಸಂಬಳ ಇನ್ನೂ ಪಾವತಿಯಾಗಿಲ್ಲ.

ಈ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿತ್ತು. 2025ರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಧರ್ಮಸ್ಥಳ ಗ್ರಾಮದ ಕಾಡು ಸೇರಿದಂತೆ ಹಲವು ಪ್ರದೇಶಗಳಲ್ಲಿ ನೆಲವನ್ನು ಅಗೆದು, ಶವಗಳ ಅವಶೇಷಗಳಿಗಾಗಿ ಶೋಧ ನಡೆಸಲಾಗಿತ್ತು. ಕಾಡುಗಳಲ್ಲಿ ಗಿಡಗಂಟಿಗಳನ್ನು ಕತ್ತರಿಸಿ ದಾರಿ ಮಾಡುವುದಕ್ಕೆ ಹಾಗೂ ನೆಲ ಅಗೆಯಲು ಕೂಲಿಯಾಳುಗಳನ್ನು, ಜೆಸಿಬಿ ಯಂತ್ರಗಳನ್ನು ಮತ್ತಿತರ ಸಾಮಗ್ರಿಗಳನ್ನು ಎಸ್ಐಟಿ ಕೋರಿಕೆಯ ಮೇರೆಗೆ ಧರ್ಮಸ್ಥಳ ಗ್ರಾಮ ಪಂಚಾಯಿತಿ ಒದಗಿಸಿತ್ತು.

‘ಗುಂಡಿ ಅಗೆದ ಕಾರ್ಮಿಕರಿಗೆ ಒಟ್ಟು ₹ 1.06 ಲಕ್ಷ, ಜೆಸಿಬಿಯಿಂದ ನಿರ್ವಹಿಸಿದ ಕೆಲಸ ಕಾರ್ಯಗಳಿಗೆ ₹ 71,500, ಸಾಮಗ್ರಿಗಳನ್ನು ಒದಗಿಸಿದ್ದಕ್ಕೆ ₹ 24 ಸಾವಿರ ಪಾವತಿ ಬಾಕಿ ಇದೆ. ಇದನ್ನು ಗ್ರಾಮ ಪಂಚಾಯಿತಿಯ ನಿಧಿಯಿಂದ ಪಾವತಿಸಲು ಅವಕಾಶ ಇಲ್ಲ ಎಂಬುದಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯಿಂದ ಧರ್ಮಸ್ಥಳ ಗ್ರಾಮ ಪಂಚಾಯಿತಿಗೆ ನಿರ್ದೇ ಶನ ನೀಡಲಾಗಿದೆ. ಗ್ರಾಮ ಪಂಚಾಯಿ ತಿಯವರು ಈ ಕುರಿತು ಬಿಲ್ಗಳನ್ನು ಎಸ್ಐಟಿಗೆ ತಲುಪಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಎಸ್ಐಟಿಯ ತನಿಖೆ ಸಲುವಾಗಿ ಜೆಸಿಬಿಯಿಂದ ನಡೆಸಿರುವ ಅಗೆತ ಕಾರ್ಯಕ್ಕೆ ಹಾಗೂ ಕೂಲಿ ಕಾರ್ಮಿಕರಿಗೆ ಇನ್ನೂ ಬಿಲ್ ಪಾವತಿ ಆಗದೇ ಇರುವುದು ಗಮನಕ್ಕೆ ಬಂದಿರಲಿಲ್ಲ. ಖಂಡಿತಾ ಈ ಮೊತ್ತವನ್ನು ಪಾವತಿಸಲೇ ಬೇಕು. ಈ ಬಗ್ಗೆ ಸರ್ಕಾರದ ಜೊತೆ ಚರ್ಚಿಸಿ ಹಣ ಪಾವತಿಗೆ ಕ್ರಮ ವಹಿಸುತ್ತೇವೆ’ ಎಂದು ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-126-354430916

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.