ಮಂಗಳೂರು: ಮಧ್ಯಪ್ರಾಚ್ಯದ ಸಂಘರ್ಷ ಅಂತ್ಯವಾಗಿ ವಿಶ್ವಶಾಂತಿ ನೆಲೆಸಲಿ ಎಂಬ ಆಶಯದಿಂದ ನಿರಂತರ 40 ಗಂಟೆಗಳ ದಿವ್ಯ ಪ್ರಸಾದ ಆರಾಧನೆಯು ನಗರದ ಬಿಕರ್ನಕಟ್ಟೆಯ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಮಂಗಳವಾರ ಮುಂಜಾನೆ ಆರಂಭವಾಯಿತು.

ಸೇಂಟ್ ಜೋಸೆಫ್ ಆಶ್ರಮದ ಸುಪೀರಿಯರ್ ಫಾ.ಮೆಲ್ವಿನ್ ಡಿಕುನ್ಹಾ ನೇತೃತ್ವದಲ್ಲಿ ನಡೆದ ಪವಿತ್ರ ಬಲಿಪೂಜೆಯೊಂದಿಗೆ ಈ ಆರಾಧನೆಗೆ ಚಾಲನೆ ದೊರೆಯಿತು. ಆಶೀರ್ವಚನ ನೀಡಿದ ಫಾ.ಜಾನ್ ಪಿಂಟೊ, ‘ಬೈಬಲ್ನಲ್ಲಿ 40 ಸಂಖ್ಯೆಗೆ ಮಹತ್ವವಿದೆ. ಇದು ಇಸ್ರೇಲಿಯನ್ನರು ಮರುಭೂಮಿಯಲ್ಲಿ ಕಳೆದ 40 ವರ್ಷ ಗಳು ಮತ್ತು ಯೇಸು ಕ್ರಿಸ್ತರು ಸಾರ್ವಜನಿಕ ಸೇವೆಗೂ ಮುನ್ನ ಕೈಗೊಂಡ 40 ದಿನಗಳ ಉಪವಾಸವನ್ನು ಸಂಕೇತಿಸುತ್ತದೆ’ ಎಂದರು.

ಪುಣ್ಯಕ್ಷೇತ್ರದ ನಿರ್ದೇಶಕ ಫಾ. ಸ್ಟೀಫನ್ ಪಿರೇರಾ ಭಕ್ತರನ್ನು ಸ್ವಾಗತಿಸಿದರು.

ವಿವಿಧ ತಂಡಗಳು ಪ್ರಾರ್ಥನಾ ವಿಧಿ ಗಳನ್ನು ಮುನ್ನಡೆಸಿದವು. ಬಜ್ಜೋಡಿಯ ಇನ್ಫೆಂಟ್ ಮೇರಿ ಚರ್ಚ್ನ ಭಕ್ತರು, ಸೆಕ್ಯುಲರ್ ಕಾರ್ಮೆಲೈಟ್ಸ್ ಮತ್ತು ಬೆಥನಿ ಭಗಿನಿಯರು ಪಾಲ್ಗೊಂಡರು. ಧರ್ಮಪ್ರಾಂತ್ಯದ ಮಕ್ಕಳ ವರ್ಷದ ಅಂಗವಾಗಿ ಮಕ್ಕಳಿಗಾಗಿ ಮೀಸಲಾದ 1 ಗಂಟೆಯ ವಿಶೇಷ ಆರಾಧನೆ ಗಮನ ಸೆಳೆಯಿತು.

ಕೊಂಕಣಿ ಸಮುದಾಯದ ಸಾಂಪ್ರದಾಯಿಕ ಗುಮ್ಟಾ ಸಂಗೀತ, ಕನ್ನಡ ಭಜನೆಗಳು ಮತ್ತು ವಾದ್ಯಸಂಗೀತ ಈ ಸಲದ ಆರಾಧನೆಗೆ ವಿಶೇಷ ಮೆರುಗು ತುಂಬಿದವು. ಏ. 1ರಂದು ರಾತ್ರಿ ತೈಜೆ ಪ್ರಾರ್ಥನೆ ಮತ್ತು ಕೃತಜ್ಞತಾ ಬಲಿಪೂಜೆಯೊಂದಿಗೆ ಈ 40 ಗಂಟೆಗಳ ನಿರಂತರ ಆರಾಧನಾ ಕಾರ್ಯಕ್ರಮವು ಮುಕ್ತಾಯಗೊಳ್ಳಲಿದೆ.

16 ವರ್ಷಗಳಿಂದ ಈ ಆಧ್ಯಾತ್ಮಿಕ ಸಂಪ್ರದಾಯವನ್ನು ಆಚರಿಸಲಾಗುತ್ತಿದ್ದು, ಸಾವಿರಾರು ಭಕ್ತರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಭಕ್ತರ ಆಧ್ಯಾತ್ಮಿಕ ಪುನರುತ್ಥಾನ, ಪಾಪ ಕ್ಷಮೆ ಹಾಗೂ ಸಂಸ್ಕಾರ ವೃದ್ಧಿಗಾಗಿ ಈ ಆರಾಧನೆ ನೆರವೇರಿಸಲಾಗುತ್ತದೆ ಎಂದು ಚರ್ಚ್ನ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-29-1526942167

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.