ಮಂಗಳೂರು: ನಿಷೇದಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಮಂಗಳೂರು ಕಮಿಷನರೇಟ್ನ ಪೊಲೀಸರು ಒಟ್ಟು ಆರು ಮಂದಿ ಆರೋಪಿಗಳನ್ನು ಬುಧವಾರ ಬಂಧಿಸಿದ್ದು, ಅವರಿಂದ ಒಟ್ಟು 53.87 ಗ್ರಾಂ ಎಂಡಿಎಂಎ, 163.20 ಗ್ರಾಂ ಹೈಡ್ರೊ ವೀಡ್ ಗಾಂಜಾ ಹಾಗೂ 1 ಕೆ.ಜಿ 155 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ನಿಷೇಧಿತ ಎಂಡಿಎಂಎ ಹಾಗೂ ಹೈಡ್ರೊ ವೀಡ್ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪಾಂಡೇಶ್ವರದ ನಗರ ದಕ್ಷಿಣ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಪ್ರಸ್ತುತ ಪಾಂಡೇಶ್ವರದಲ್ಲಿ ವಾಸವಾಗಿದ್ದ ಉಡುಪಿ ಜಿಲ್ಲೆಯ ಕೊಟೇಶ್ವರದ ಮೊಹಮ್ಮದ್ ಸಯ್ಯದ್ ಆಫ್ರೀದಿ (26), ಅಹಮ್ಮದ್ ಅಲಿ ಅರ್ಷಾನ್ (22), ಬಲ್ಮಠದ ಮಕ್ಸೂದ್ ಸಾಗ್ (23), ಕೇರಳ ರಾಜ್ಯದ ಕೊಟ್ಟಾಯಂನ ಫೆಲಿಕ್ಸ್.ಪಿ.ಜೊಸೆಫ್ (20) ಬಂಧಿತ ಆರೋಪಿಗಳು. ಅವರಿಂದ ಒಟ್ಟು 53.87 ಗ್ರಾಂ ಎಂಡಿಎಂಎ, 103.20 ಗ್ರಾಂ ಹೈಡ್ರೊ ವೀಡ್ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಎಂ.ಜಿ.ಹೆಕ್ಟರ್ ಕಾರನ್ನು ವಶಕ್ಕೆ ಪಡೆಯಲಾಗಿದೆ. ಎನ್ಡಿಪಿಎಸ್ ಕಾಯ್ದೆಯಡಿ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

‘ಇನ್ನೊಂದು ಪ್ರಕರಣದಲ್ಲಿ ಮಾದಕ ಪದಾರ್ಥ ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಬಂದರಿನ ನಗರ ಉತ್ತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 60 ಗ್ರಾಂ ಹೈಡ್ರೋವಿಡ್ ಗಾಂಜಾ, 1 ಕೆ.ಜಿ 155 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರುತಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ನಗರದ ಕಂಕನಾಡಿಯ ಎಡಲ್ ರೋಚ್ (33) ಹಾಗೂ ಕದ್ರಿ ಮಲ್ಲಿಕಟ್ಟೆಯ ಆರೋನ್ ವಿಶಾಲ್ ಲಾಸ್ರಾದೊ (18) ಬಂಧಿತರು. ಅವರ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಕಮಿಷನರ್ ತಿಳಿಸಿದ್ದಾರೆ.

‘ಮುಂಬೈ ನಿವಾಸಿಯಾದ ಸಂದೀಪ್ ಶೆಟ್ಟಿ ದುಬೈನ ಹೋಟೆಲ್ ಒಂದರಲ್ಲಿ ವ್ಯವಸ್ಥಾಪಕನಾಗಿದ್ದು, ನಿಷೇಧಿತ ಮಾದಕ ವಸ್ತುವಾದ ಹೈಡ್ರೊ ವೀಡ್ ಗಾಂಜಾವನ್ನು ಬೆಂಗಳೂರಿಗೆ ವಿಮಾನದ ಮುಖಾಂತರ ಸಾಗಾಟ ಮಾಡುತ್ತಿದ್ದ ಮಾಹಿತಿ ಇದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಅದನ್ನು ಸಾಗಾಟ ಮಾಡಲು ಆರೋಪಿ ಎಡಲ್ ರೋಚ್ ಎಂಬಾತನನ್ನು ನೇಮಿಸಿಕೊಂಡಿದ್ದ. ಆರೋಪಿ ಎಡಲ್ ರೋಚ್ ವಿಮಾನ ನಿಲ್ದಾಣದಿಂದ ಹೈಡ್ರೊ ವೀಡ್ ಗಾಂಜಾವನ್ನು ಸಂದೀಪ್ ಶೆಟ್ಟಿ ಸೂಚಿಸಿದ ಸ್ಥಳಕ್ಕೆ ಸಾಗಿಸುವುದಕ್ಕೆ ವ್ಯವಸ್ಥೆ ಮಾಡುತ್ತಿದ್ದ’ ಎಂದು ಅವರು ಮಾಹಿತಿ ನೀಡಿದರು.

‘ಆರೋಪಿಗಳಾದ ಎಡಲ್ ರೋಚ್ ಮತ್ತು ಆರೋನ್ ವಿಶಾಲ್ ಲಾಸ್ರಾದೊ ಮಕ್ಸೂದ್ ಸಾಗ್ ಮೂಲಕ ಮೊಹಮ್ಮದ್ ಸಯ್ಯದ್ ಆಫ್ರೀದಿ ಮತ್ತು ಅಹಮ್ಮದ್ ಅಲಿ ಅರ್ಷಾನ್ಗೆ ಬೆಂಗಳೂರಿನಲ್ಲಿ ಮಾದಕ ವಸ್ತುಗಳನ್ನು ಪೂರೈಸಿದ್ದರು. ಮೊಹಮ್ಮದ್ ಸಯ್ಯದ್ ಆಫ್ರೀದಿ ಮತ್ತು ಅಹಮ್ಮದ್ ಅಲಿ ಅರ್ಷಾನ್ ಬೆಂಗಳೂರಿನಿಂದ ಎಂಡಿಎಂಎ, ಗಾಂಜಾ, ಹೈಡ್ರೋವಿಡ್ ಗಾಂಜಾವನ್ನು ತಮ್ಮ ಎಂ.ಜಿ ಹೆಕ್ಟರ್ ಕಾರಿನಲ್ಲಿ ನಗರಕ್ಕೆ ತಂದಿದ್ದರು. ಆರೋಪಿಗಳಾದ ಮೊಹಮ್ಮದ್ ಸಯ್ಯದ್ ಆಫ್ರೀದಿ, ಮಕ್ಸೂದ್ ಸಾಗ್, ಅಹಮ್ಮದ್ ಅಲಿ ಅರ್ಷಾನ್ ಹಾಗೂ ಫೆಲಿಕ್ಸ್.ಪಿ.ಜೊಸೆಫ್ ಸೇರಿಕೊಂಡು ನಗರದ ಕ್ಲಾಸಿಕ್ ಕಂಫರ್ಟ್ ಲಾಡ್ಜ್ನಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದುಕೊಂಡು ಯುವಕ ಯುವತಿಯರಿಗೆ ಮಾರಾಟ ಮಾಡುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ. ಆರೋಪಿಗಳಾದ ಎಡಲ್ ರೋಚ್ ಮತ್ತು ಆರೋನ್ ವಿಶಾಲ್ ಲಾಸ್ರಾದೊ ಅವರು ಬಂದರಿನ ಗ್ರೀನ್ ಪಾರ್ಕ್ ಮೈದಾನ ಬಳಿಯಲ್ಲಿ ಸ್ವಿಫ್ಟ್ ಕಾರಿನಲ್ಲಿ ಕುಳಿತು ಮಾದಕ ವಸ್ತುವನ್ನು ಯುವಕ, ಯುವತಿಯರಿಗೆ ಮಾರಾಟ ಮಾಡುತ್ತಿದ್ದರು. ಆಗ ಅವರಿಬ್ಬರನ್ನು ಬಂಧಿಸಲಾಗಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.