ಮಂಗಳೂರು: ಸುಲ್ತಾನ್ ಬತ್ತೇರಿ ಮತ್ತು ತಣ್ಣೀರುಬಾವಿ ನಡುವೆ ಕಮಾನು ಸೇತುವೆ ನಿರ್ಮಾಣಕ್ಕಾಗಿ ಫಲ್ಗುಣಿ ನದಿಗೆ ಮಣ್ಣು ಸುರಿದು ತಾತ್ಕಾಲಿಕವಾಗಿ ಒಡ್ಡು ನಿರ್ಮಿಸಿರುವುದರಿಂದ ನೀರಿನ ಹರಿವಿಗೆ ಅಡ್ಡಿಯಾಗಿದೆ. ಇದರಿಂದಾಗಿ, ಮಳೆಗಾಲದಲ್ಲಿ ಕೊಟ್ಟಾರಚೌಕಿ, ಮಾಲೇಮಾರ್, ಕಾವೂರು, ಕುಂಟಿಕಾನ, ಅಬ್ಬಕ್ಕ ನಗರ ಮೊದಲಾದ ಪ್ರದೇಶಗಳು ಪ್ರವಾಹದಿಂದ ತೊಂದರೆಗೊಳಗಾಗಲಿವೆ. ಜಿಲ್ಲಾಡಳಿತ ತಕ್ಷಣ ಎಚ್ಚೆತ್ತು, ಸಂಭವನೀಯ ಅನಾಹುತ ತಪ್ಪಿಸಬೇಕು ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್ಇಸಿಎಫ್) ಒತ್ತಾಯಿಸಿದೆ.

ಸೇತುವೆ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ ಎನ್ಇಸಿಎಫ್ ಸದಸ್ಯರು, ನದಿ ನಡುವೆ ಕಟ್ಟಿರುವ ಒಡ್ಡಿನಿಂದ ಮಳೆಗಾಲದಲ್ಲಿ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

‘ಸ್ಮಾರ್ಟ್ ಸಿಟಿ ಯೋಜನೆಯಡಿ ಸೇತುವೆ ನಿರ್ಮಾಣವಾಗುತ್ತಿದೆ. ಕಾಮಗಾರಿ ಸ್ಥಳದಲ್ಲಿ ತುಂಬಿಸಿರುವ ಮಣ್ಣಿನ ನಡುವೆ ಎರಡು ಕಡೆಗಳಲ್ಲಿ ಮಾತ್ರ ಚೇಂಬರ್ ಮಾಡಲಾಗಿದೆ. ಈ ಎರಡು ಸ್ಥಳಗಳಲ್ಲಿ ಹಾಕಿರುವ ನಾಲ್ಕು ಚಿಕ್ಕ ಪೈಪ್ಗಳು (ಮೋರಿ) ಮಳೆ ನೀರು ಹರಿಯಲು ಸಾಕೇ? ನದಿಯಲ್ಲಿ ನೀರು ಸರಾಗವಾಗಿ ಹರಿದು ಮುಂದಕ್ಕೆ ಹೋಗಲು ಸಾಧ್ಯವಾಗದೆ, ಹಿಮ್ಮುಖವಾಗಿ ಚಲಿಸುತ್ತದೆ. ಇದರಿಂದ ಕೊಟ್ಟಾರಚೌಕಿ ಸುತ್ತಮುತ್ತಲಿನ ಪ್ರದೇಶಗಳ 1 ಲಕ್ಷಕ್ಕೂ ಹೆಚ್ಚು ಜನರಿಗೆ ಸಮಸ್ಯೆಯಾಗುತ್ತದೆ. ಮನೆಗಳ ಒಳಗೆ, ಚರಂಡಿ ನೀರು, ಶೌಚಾಲಯದ ನೀರು ನುಗ್ಗುವ ಮುನ್ನ ಜನರು ಎಚ್ಚೆತ್ತುಕೊಂಡು ಜಿಲ್ಲಾಡಳಿತವನ್ನು ಪ್ರಶ್ನಿಸಬೇಕು’ ಎಂದು ಎನ್ಇಸಿಎಫ್ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಹೇಳಿದರು.

ನದಿ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಕಸ–ಕಡ್ಡಿಗಳು ತುಂಬಿ ನೀರು ಕಲುಷಿತಗೊಂಡಿದೆ. ನದಿಯ ಒಡಲಿಗೆ ಸೇರಿರುವ ತ್ಯಾಜ್ಯ, ಘನ ವಸ್ತುಗಳು, ಚೇಂಬರ್ನ ಪೈಪ್ನಲ್ಲಿ ಸಿಲುಕಿಕೊಂಡಿದ್ದು, ನೀರು ಸರಾಗವಾಗಿ ಹರಿಯುತ್ತಿಲ್ಲ. ಇನ್ನು ಮಳೆಗಾಲದಲ್ಲಿ ಪರಿಸ್ಥಿತಿ ಏನಾಗಬಹುದು. ಈ ರೀತಿ ನದಿಗೆ ಮಣ್ಣು ತುಂಬಿಸುವ ಮುನ್ನ ಅನುಮತಿ ಪಡೆಯಲಾಗಿದೆಯೇ ಎಂದು ಅವರು ಪ್ರಶ್ನಿಸಿದರು.

‘ಬೆಳ್ತಂಗಡಿ ನಾರಾವಿಯಿಂದ ಹರಿದು ಬರುವ ನೀರು ಗುರುಪುರ ನದಿ (ಫಲ್ಗುಣಿ) ಸೇರುತ್ತದೆ. ಅಲ್ಲಿಂದ ಮುಂದುವರಿದು ಸುಮಾರು 53 ಕಿ.ಮೀ ದೂರದಿಂದ ಹರಿದು ಬಂದು, ಸಮುದ್ರ ಸೇರುತ್ತದೆ. ಮಂಗಳೂರು ನಗರದ ಮಾಲಾಡಿ ಕೋರ್ಟ್, ಯೆಯ್ಯಾಡಿ, ಲ್ಯಾಂಡ್ಲಿಂಕ್ಸ್, ಸುತ್ತಲಿನ ಎತ್ತರದ ಪ್ರದೇಶಗಳಿಂದ ಹರಿದು ಬರುವ ನೀರು ಪಡ್ಡೋಡಿ ಕಿಂಡಿ ಅಣೆಕಟ್ಟೆ ಮಾರ್ಗವಾಗಿ ಮುಂದುವರಿದು ಸಮುದ್ರ ಸೇರುತ್ತದೆ. ಆದರೆ, ಈಗ ಸುಲ್ತಾನ್ ಬತ್ತೇರಿಯಲ್ಲಿ ಕಟ್ಟಿರುವ ಒಡ್ಡು, ನದಿ ನೀರಿನ ಹರಿವಿಗೆ ಅಡ್ಡಿಯುಂಟು ಮಾಡುತ್ತದೆ’ ಎನ್ನುತ್ತಾರೆ ಮಾಲೇಮಾರ್ ನಿವಾಸಿ ಸುರೇಶ್ ಉಡುಪ.

ಎನ್ಇಸಿಎಫ್ ಅಧ್ಯಕ್ಷ ಜೋನಸ್ ಡಿಸೋಜ, ಸರಿತಾ, ಇಯಾನ್, ಜಯಕೃಷ್ಣನ್, ವಿಷ್ಣು ಭಟ್ ಮೊದಲಾದವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-29-56014049

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.