ಮಂಗಳೂರು: ಮಾದಕ ದ್ರವ್ಯ ವ್ಯಸನ ವಿರೋಧಿ ಜಾಗೃತಿ ರ್ಯಾಲಿಯನ್ನು ನಗರದ ಕಂಕನಾಡಿಯ ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ಆಶ್ರಯದಲ್ಲಿ ಇದೇ 3 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಫಾ.ಮೈಕೆಲ್ ಸಂತುಮಾಯೋರ್ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ‘ಬೆಳಿಗ್ಗೆ 7ಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಹಾಗೂ ಉದ್ಯಮಿ ಮೈಕೆಲ್ ಡಿಸೋಜ ರ್ಯಾಲಿಯನ್ನು ಉದ್ಘಾಟಿಸುವರು. ಎಫ್ಎಂಸಿಐ ಚಾಪೆಲ್, ಫಾದರ್ ಮುಲ್ಲರ್ ವೃತ್, ಕರಾವಳಿ ವೃತ್ತ, ಮಹಾವೀರ ವೃತ್ತ (ಪಂಪ್ವೆಲ್) , ಫಾದರ್ ಮುಲ್ಲರ್ ಸಮಾವೇಶ ಕೇಂದ್ರ ಮೂಲಕ ಸಾಗುವ ರ್ಯಾಲಿ ಫಾದರ್ ಮುಲ್ಲರ್ ಮೈದಾನದವರೆಗೆ ರ್ಯಾಲಿ ನಡೆಯಲಿದೆ.

ಸಮಾರೋಪದಲ್ಲಿ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಡಿಸಿಪಿ ಮಿಥುನ್ ಎಚ್.ಎನ್., ಸಿಸಿಆರ್ಬಿ ಎಸಿಪಿ ಗೀತಾ ಕುಲಕರ್ಣಿ ಹಾಗೂ ಎಸಿಪಿ ರವೀಶ್ ನಾಯ್ಕ್ ಭಾಗವಹಿಸಲಿದ್ದಾರೆ. ಎಫ್ಎಂಸಿಐನ ಕಾಲೇಜುಗಳ ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಎಫ್ಎಂಸಿಒಪಿ ಪ್ರಾಂಶುಪಾಲ ಪ್ರೊ. ಛರಿಷ್ಮಾ ಡಿಸಿಲ್ವ, ಎಫ್ಎಂಸಿಒಎಎಚ್ಎಸ್ ಪ್ರಾಂಶುಪಾಲ ಡಾ.ಶಿವಶಂಕರ ಎ.ಆರ್, ಎಫ್ಎಂಸಿಯ ಸಂಪರ್ಕಾಧಿಕಾರಿ ಕೆಲ್ವಿನ್ ಪಾಯಸ್, ಎಫ್ಎಂಎಂಸಿಎಚ್ ರೋಗಪತ್ತೆ ವಿಜ್ಞಾನ ವಿಭಾಗದ ಡಾ.ಸುಯೆಲ್ಲನ್ ಡಿಸೋಜ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-29-895428497

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.