ಮಂಗಳೂರು: ಮೀನುಗಾರಿಕೆಗೆ ತೆರಳಿದ ಸಂದರ್ಭ ಕಾರ್ಮಿಕರೊಬ್ಬರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅದೇ ದೊಣಿಯಲ್ಲಿದ್ದ ಅವರ ಸಂಬಂಧಿಕರೊಬ್ಬರು ದೂರು ನೀಡಿದ್ದು ನಗರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮುತ್ತುಕುಮಾರ್ (41) ನಾಪತ್ತೆಯಾದ ಮೀನುಗಾರ. ದಯಾನಂದ ಪುತ್ರನ್ ಅವರ ‘ಶಾಂಭವಿ’ ಮೀನುಗಾರಿಕಾ ದೋಣಿಯಲ್ಲಿ ಅವರು ಕೆಲಸಕ್ಕಿದ್ದರು. ಮೇ 16ರಂದು ಮುಂಜಾನೆ 4ಕ್ಕೆ ಆ ದೋಣಿ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿತ್ತು. ಎಂಜಿನ್ ಬೆಲ್ಟ್ ತುಂಡಾಗಿದ್ದರಿಂದ ಧಕ್ಕೆಗೆ ಮರಳಿದ್ದ ದೋಣಿ ಅದೇ ದಿನ ಮಧ್ಯಾಹ್ನ 11ಕ್ಕೆ ಮತ್ತೆ ಸಮುದ್ರಕ್ಕೆ ತೆರಳಿತ್ತು’

‘ದೊಣಿಯ ಚಾಲಕ ತಿರುಸೆಲ್ವಮ್, ಅವರ ಸಂಬಂಧಿ ಮುತ್ತು ಕುಮಾರ್, ಮುತ್ತುಮುನಿಯಂಡಿ, ಕರುಪ್ಪಯ್ಯ, ಬಾಕಿಯಮ್, ವರಡಿ ನರೇಂದ್ರ, ಮಹರೀಶ್ ಟಿ., ಸೆಲ್ವಮ್, ಸೇತು ಮಾಣಿಕ್ಯಮ್, ಸುರೇಶ್ ಸೇರಿ ಒಟ್ಟು 10 ಜನ ದೋಣಿಯಲ್ಲಿದ್ದರು. ಮಧ್ಯಾಹ್ನ ಊಟ ಮಾಡುವಾಗ ಮುತ್ತುಕುಮಾರ್ ಇರಲಿಲ್ಲ. ಅವರಿಗಾಗಿ ಹುಡುಕಿದಾಗ ದೋಣಿಯಲ್ಲಿ ಅವರು ಕಾಣಿಸಲಿಲ್ಲ. ತಕ್ಷಣವೇ ದೋಣಿ ಬಂದರಿನ ದಕ್ಕೆಗೆ ಮರಳಿತ್ತು. ಬಂದರಿನಲ್ಲಿ ಹುಡುಕಿದರೂ ಅವರ ಸುಳಿವು ಸಿಕ್ಕಿರಲಿಲ್ಲ ಎಂಬುದಾಗಿ ತಿರುಸೆಲ್ವಮ್ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-29-835302969

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.