ಮಂಗಳೂರು: ನಗರದ ಹಳೆ ಬಂದರು ದಕ್ಕೆಯಲ್ಲಿ ದಾರಿದೀಪಕ್ಕಾಗಿ ಅಳವಡಿಸಿದ್ದ ಕಂಬ ಬಿದ್ದು ಈಚೆಗೆ ಮೃತಪಟ್ಟ ಮೀನುಗಾರ ಮುರುಗನ್ ಪಿ. ಅವರ ಕುಟುಂಬಕ್ಕೆ ಸಂಘ ಸಂಸ್ಥೆಗಳು, ಕಾರ್ಮಿಕರು, ಅಧಿಕಾರಿ ಸೇರಿ ಸಂಗ್ರಹಿಸಿದ ₹ 5.40 ಲಕ್ಷ ರೂಪಾಯಿ ಆರ್ಥಿಕ ನೆರವನ್ನು ಮೃತರ ಪತ್ನಿ ಹಂಸವಲ್ಲಿ ಅವರಿಗೆ ಬುಧವಾರ ಹಸ್ತಾಂತರಿಸಲಾಯಿತು.

ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘವು ₹ 1.50ಲಕ್ಷ, ಹಸಿಮೀನು ವ್ಯಾಪಾರಸ್ಥರ ಸಂಘವು ₹ 1.50ಲಕ್ಷ, ಮೀನುಗಾರಿಕಾ ಕಾರ್ಮಿಕರು ₹ 1.20 ಲಕ್ಷ, ಕಾರ್ಮಿಕರಾದ ಸಿಯಾಬ್, ಬಾಬು ಮತ್ತು ಮೀರನ್ ಸೇರಿ ₹ 1ಲಕ್ಷ ಹಾಗೂ ಮೀನುಗಾರಿಕಾ ಉಪನಿರ್ದೇಶಕಿ ರೇವತಿ ಅವರು ₹ 20 ಸಾವಿರವನ್ನು ಸಂತ್ರಸ್ತ ಕುಟುಂಬಕ್ಕೆ ನೀಡಿದ್ದಾರೆ.

ಇಲ್ಲಿ ಬುಧವಾರ ಏರ್ಪಡಿಸಿದ್ದ ಸಹಾಯಧನ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ರೇವತಿ, ಸರ್ಕಾರದ ವತಿಯಿಂದಲೂ ನೆರವು ಒದಗಿಸಲು ಪ್ರಯತ್ನಿಸುತ್ತೇವೆ ಎಂದರು.

ಹಜ್ ಯಾತ್ರಾರ್ಥಿಗಳಾದ ಯು.ಟಿ.ಅಹ್ಮದ್ ಶರೀಫ್, ಅಬ್ದುಲ್ ಅಝೀಝ್ ಬಸ್ತಿಪಡ್ಪು, ಎಚ್.ಆರ್.ಇಕ್ಬಾಲ್, ಮಹಮ್ಮದ್ ಸಿರಾಜ್ ಮಾಸ್ತಿಕಟ್ಟೆ, ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜೆ.ಹನೀಫ್ ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಸಂಘದ ಅಧ್ಯಕ್ಷ ಜೆ.ಮಹಮ್ಮದ್ ಇಸ್ಹಾಕ್ ಅಧ್ಯಕ್ಷತೆ ವಹಿಸಿದ್ದರು. ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಕೆ.ಎಲ್.ಇಸ್ಮಾಯಿಲ್, ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಉಪಾಧ್ಯಕ್ಷ ಅಹ್ಮದ್ ಬಾವ ಬಜಾಲ್, ನಿರ್ದೇಶಕರಾದ ಬಿ.ಇಬ್ರಾಹಿಂ ಖಲೀಲ್, ಎಸ್.ಎಂ.ಇಬ್ರಾಹಿಂ, ಮುಹಮ್ಮದ್ ಅಶ್ರಫ್, ಟಿ.ಎಚ್.ಹಮೀದ್, ಎಂ.ಎ.ಗಫೂರ್, ಎ.ಎಂ.ಕೆ.ಮಹಮ್ಮದ್ ಇಬ್ರಾಹಿಂ, ಯು.ಟಿ.ಅಹ್ಮದ್ ಶರೀಫ್, ಬಿ.ಮಹಮ್ಮದ್ ಶಾಲಿ, ಎಸ್.ಕೆ.ಇಸ್ಮಾಯಿಲ್, ಅನ್ವರ್ ಎ.ಎನ್.ಆರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಅಬ್ದುಲ್ ಲತೀಫ್ ಮತ್ತಿತರರು ಭಾಗವಹಿಸಿದ್ದರು. ಮುಸ್ತಫಾ ಹರೇಕಳ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-29-441093981

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.