ಮಂಗಳೂರು: ನಗರದ ಕಾವೂರು ಠಾಣೆಯ ವ್ಯಾಪ್ತಿಯಲ್ಲಿ ಫಲ್ಗುಣಿ ನದಿಯಲ್ಲಿ ಮೀನು ಹಿಡಿಯುವಾಗ ದೋಣಿ ಮುಳುಗಿದ್ದು, ಅದರಲ್ಲಿ ಮೂವರು ಯುವಕರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಒಬ್ಬ ಯುವಕನನ್ನು ರಕ್ಷಿಸಲಾಗಿದೆ.

ಕುಂಜತ್ತಬೈಲ್ ನಿವಾಸಿಗಳಾದ ಗಣೇಶ್ (28), ರಾಯಲ್ (24) ಮೃತರು. ನಿತೀಶ್ (28) ಎಂಬಾತನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಈ ಮೂವರು ಯುವಕರು ಸೇರಿ ಮೀನು ಹಿಡಿಯಲು ದೋಣಿಯಲ್ಲಿ ಮಂಗಳವಾರ ರಾತ್ರಿ ತೆರಳಿದ್ದರು. ಬುಧವಾರ ಮುಂಜಾನೆ ವೇಳೆ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಗರ ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ಹಾಗೂ ಕಾವೂರು ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.