ಮಂಗಳೂರು: ನಿಷೇಧಿತ ಪದಾರ್ಥ ಗಾಂಜಾ ಮಾರಾಟ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ತ್ವರಿತಗತಿ ವಿಶೇಷ ನ್ಯಾಯಾಲಯ– 1 ಮೂರು ತಿಂಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ ₹ 10ಸಾವಿರ ದಂಡ ವಿಧಿಸಿದೆ.

ಕಾವೂರು ಪಂಜಿಮೊಗರುವಿನ ಉರುದಗಿ ಗುಡ್ಡೆ ಯ ಮನೋಜ್ ಪೂಜಾರಿ ಅಲಿಯಾಸ್ ಮಂಜು (36), ಮಂಜೇಶ್ವರ ಉದ್ಯಾವರದ ಮೊಹಮ್ಮದ್ ಕಲಂದರ್ (42) ಶಿಕ್ಷೆಗೆ ಒಳಗಾದವರು.

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿ ಗಳನ್ನು ಸುರತ್ಕಲ್ ಪೊಲೀಸರು 2016ರ ಜ.21ರಂದು ಬಂಧಿಸಿದ್ದರು. ಮನೋಜ್ನಿಂದ 400 ಗ್ರಾಂ ಗಾಂಜಾ, ಮೊಹಮ್ಮದ್ ಕಲಂದರ್ನಿಂದ 500 ಗ್ರಾಂ ಗಾಂಜಾ ವಶಕ್ಕೆಪಡೆದಿದ್ದರು. ನಗರದ 2ನೇ ಜೆಎಂಎಫ್ಸಿ ನ್ಯಾಯಾಲಯ ಆರೋಪಿಗಳನ್ನು ಬಿಡುಗಡೆಗೊಳಿಸಿತ್ತು. ಆ ಆದೇಶದ ವಿರುದ್ಧ ಪ್ರಾಸಿಕ್ಯೂಷನ್ ಮೇಲ್ಮನವಿ ಸಲ್ಲಿಸಿತ್ತು.

ಆರೋಪಿಗಳಾದ ಮನೋಜ್ ಹಾಗೂ ಮಹಮ್ಮದ್ ಕಲಂದರ್ ಎನ್ಡಿಪಿಎಸ್ ಕಾಯ್ದೆಯ ಸೆಕ್ಷನ್ 8(ಸಿ) ಮತ್ತು 20(ಬಿ)(II)(A) ಅಡಿ ತಪ್ಪೆಸಗಿರುವುದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ತ್ವರಿತಗತಿ ವಿಶೇಷ ನ್ಯಾಯಾಲಯ– 1ರಲ್ಲಿ ನಡೆದ ವಿಚಾರಣೆಯಲ್ಲಿ ಸಾಬೀತಾಗಿತ್ತು. ನ್ಯಾಯಾಧೀಶರಾದ ಮೋಹನ ಜೆ.ಎಸ್. ಅವರು ಇಬ್ಬರು ಅಪರಾಧಿಗಳಿಗೂ 3 ತಿಂಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ ₹10 ಸಾವಿರ ದಂಡ ವಿಧಿಸಿ ಸೋಮವಾರ ಆದೇಶ ಮಾಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರಿ ವಕೀಲರಾದ ಕೆ ಬದರಿನಾಥ ನಾಯರಿ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-29-853171276

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.