ಮಂಗಳೂರು: ನಗರದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ನಗರದ ಅತ್ತಾವರ, ಕೊಡಿಯಾಲ್ ಬೈಲ್, ಅಂಬೇಡ್ಕರ್ ವೃತ್ತ ಹಾಗೂ ಪಂಪ್ವೆಲ್ ಜಂಕ್ಷನ್ನ ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು. ಕೇವಲ ಒಂದು ಗಂಟೆಯ ಮಳೆಯು ಮುಂಗಾರಿನಲ್ಲಿ ಪ್ರಕೃತಿ ವಿಕೋಪ ತಡೆಯಲು ಮಹಾನಗರ ಪಾಲಿಕೆ ಮಾಡಿಕೊಂಡಿರುವ ‘ಪೂರ್ವಸಿದ್ಧತೆ’ಯನ್ನು ಬಟಾಬಯಲುಗೊಳಿಸಿದೆ ಎಂದು ಜನ ಆಡಿಕೊಂಡರು.

ಪದೇ ಪದೇ ಪ್ರವಾಹ ಕಾಣಿಸಿಕೊಳ್ಳುವ ಪ್ರದೇಶಗಳಲ್ಲಿ ಈ ಸಲವೂ ಮೊದಲ ಮಳೆಗೇ ಪ್ರವಾಹ ಕಾಣಿಸಿಕೊಂಡಿದೆ. ಪಂಪ್ವೆಲ್, ಅತ್ತಾವರ ಕೆಎಂಸಿ ಆಸ್ಪತ್ರೆ ಬಳಿ ಮಂಗಳವಾರ ರಾತ್ರಿ ವೇಳೆ ಮಳೆ ನೀರು ಹರಿಯುವ ತೋಡುಗಳು ಉಕ್ಕಿ ಹರಿದು ರಸ್ತೆ ಮೇಲೆ ಸುಮಾರು 2–3 ಅಡಿಗಳಷ್ಟು ನೀರು ಇತ್ತು. ಈ ಪರಿಸರದಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರ್ಗಳು ಪ್ರವಾಹದ ನೀರಿನಲ್ಲಿ ಮುಳುಗಿದ್ದವು.

‘ನಮ್ಮ ಸಂಬಂಧಿಯೊಬ್ಬರು ಅತ್ತಾವರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಸ್ಕೂಟರ್ ಅನ್ನು ನಿಲ್ಲಿಸಿ ಆಸ್ಪತ್ರೆಗೆ ತೆರಳಿದ್ದೆ. ಇಲ್ಲಿ ಕಾಣಿಸಿಕೊಂಡ ಪ್ರವಾಹಕ್ಕೆ ಸ್ಕೂಟರ್ ನೀರಿನಲ್ಲಿ ಕೆಲ ದೂರ ಕೊಚ್ಚಿ ಹೋಗಿತ್ತು. ಎಂಜಿನ್ ಒಳಗೆಲ್ಲ ನೀರು ನುಗ್ಗಿದ್ದು ಅದನ್ನು ದುರಸ್ತಿ ಮಾಡಲು ಸಾವಿರಾರು ರೂಪಾಯಿ ವೆಚ್ಚ ಮಾಡಬೇಕಿದೆ’ ಎಂದು ಗುರು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಅತ್ತಾವರ ವಾರ್ಡ್ನ ಕೊಪ್ಪರಿಗೆ ಪ್ರದೇಶಗಳಲ್ಲಿ ಮನೆಗಳ ಅಂಗಳಕ್ಕೆ ನೀರು ತುಂಬಿತ್ತು. ಮಳೆನೀರಿನ ಜೊತೆ ಹಾವುಗಳೂ ಅಂಗಳವನ್ನು ಸೇರಿಕೊಂಡಿವೆ. ಈ ಪ್ರದೇಶದಲ್ಲಿ ಮಳೆ ನೀರು ಹರಿಯುವ ತೋಡಿನಲ್ಲಿ ಶೌಚಾಲಯಗಳ ನೀರೂ ಸೇರುತ್ತದೆ. ಹಾಗಾಗಿ ಪ್ರವಾಹ ಇಳಿದರೂ ಆ ಶೌಚನೀರಿನ ದುರ್ವಾಸನೆ ಹೋಗಿಲ್ಲ ಎಂದು ಸ್ಥಳೀಯರು ತಿಳಿಸಿದರು.

ಉರುಳಿದ ಮರಗಳು: ಭಾರಿ ಮಳೆಗೆ ಬಿಜೈ, ನಂದಿಗುಡ್ಡೆ, ಫಳ್ನೀರ್, ಲೇಡಿಹಿಲ್ ಹಾಗೂ ಕೆಪಿಟಿ ಬಳಿ ಮರಗಳು ರಸ್ತೆಗೆ ಉರುಳಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕೆಲವೆಡೆ ಕೊಂಬೆಗಳು ರಸ್ತೆಗೆ ಉರುಳಿ ಬಿದ್ದಿವೆ. ರಸ್ತೆಯಲ್ಲಿದ್ದ ಮರ ಹಾಗೂ ಕೊಂಬೆಗಳನ್ನು ಬುಧವಾರ ತೆರವುಗೊಳಿಸಲಾಗಿದೆ.

ಫಳ್ನೀರ್ನ ಯುನಿಟಿ ಆಸ್ಪತ್ರೆಯ ಬಳಿ ಭಾರಿ ಗಾತ್ರದ ಮರವೊಂದು ತುಂಡಾಗಿ ಬಿದ್ದು, ವಾಸ್ ಲೇನ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಕ್ರೇನ್ ಸಹಾಯದಿಂದ ಮರವನ್ನು ತೆರವುಗೊಳಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-29-1542078833

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.