ಮಂಗಳೂರು: ಉಳ್ಳಾಲ ಮತ್ತು ಮಂಗಳೂರು ತಾಲ್ಲೂಕು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆ ಶುಕ್ರವಾರ ಎರಡೂ ತಾಲ್ಲೂಕುಗಳ ತಹಶೀಲ್ದಾರ್ ಜಂಟಿ ಅಧ್ಯಕ್ಷತೆಯಲ್ಲಿ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲೆಗೆ ಹೊರ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಬರುತ್ತಿರುವುದರಿಂದ ವಿದ್ಯಾರ್ಥಿನಿಲಯಗಳಿಗೆ ಹೆಚ್ಚು ಬೇಡಿಕೆ ಇದೆ. ವಿದ್ಯಾರ್ಥಿನಿಲಯಗಳ ಸಂಖ್ಯೆ ಕಡಿಮೆ ಇರುವುದರಿಂದ ಎಸ್ಸಿ–ಎಸ್ಟಿ ವಿದ್ಯಾರ್ಥಿಗಳಿಗೆ ಸೀಟು ಸಿಗುತ್ತಿಲ್ಲ. ಆದ್ದರಿಂದ ವಿದ್ಯಾರ್ಥಿನಿಲಯಗಳ ಸಂಖ್ಯೆ ಹೆಚ್ಚಿಸ ಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಅಡಿಗ ಪ್ರತಿಕ್ರಿಯಿಸಿ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಒದಗಿಸಲು ಬಾಡಿಗೆ ಕಟ್ಟಡ ಗುರುತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಒಳ ಮೀಸಲಾತಿ ಮತ್ತು ಜಾತಿ ಸಮೀಕ್ಷೆ ಸಂದರ್ಭದಲ್ಲಿ ಉಂಟಾಗುವ ಆದಿ ದ್ರಾವಿಡರ ಉಪಜಾತಿ ಗೊಂದಲ ಪರಿಹರಿಸಿ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಮುಖಂಡರು ಆಗ್ರಹಿಸಿದರು. ಕುದ್ಮುಲ್ ರಂಗರಾವ್ ಸಮಾಧಿ ಸ್ಥಳದ ಅಭಿವೃದ್ಧಿ ಕಾಮಗಾರಿ ಅರಣ್ಯ ಇಲಾಖೆ ಆಕ್ಷೇಪಣೆಯಿಂದಾಗಿ ಸ್ಥಗಿತಗೊಂಡಿದೆ ಎಂದು ಮುಖಂಡರು ಮತ್ತು ಸಂಘಟನೆಗಳ ಪ್ರಮುಖರು ದೂರಿದರು.

ಉಳ್ಳಾಲ ತಾಲ್ಲೂಕು ನಡುಪದವು ಸರ್ಕಾರಿ ಶಾಲೆಗೆ ಹೋಗಲು ರಸ್ತೆ ಇಲ್ಲ. ಹುಲ್ಲು ತುಂಬಿರುವುದರಿಂದ ಹಾವುಗಳು ಶಾಲೆಗಳ ಒಳಗೆ ಬರುತ್ತವೆ. ಅಸೈಗೋಳಿ ಗ್ರೇಸಿ ಶಾಲೆಯ ಮುಂಭಾಗದಲ್ಲಿ ಮದ್ಯದ ಬಾಟ್ಲಿ ಎಸೆಯುತ್ತಾರೆ. ದೂರು ನೀಡಿದರೂ ಕ್ರಮ ಆಗಿಲ್ಲ. ಕುಂಟನಗುರಿ ಶಾಲೆ ಆವರಣದ ಕಾಲು ದಾರಿಯಲ್ಲಿ ಸಾರ್ವಜನಿಕರು ಬಳಸುತ್ತಿದ್ದಾರೆ. ಕಾಲು ದಾರಿ ಮುಚ್ಚಿ ತಂತಿಬೇಲಿ ಅಳವಡಿಸಲು ಉಳ್ಳಾಲ ತಹಶೀಲ್ದಾರ್ ಪ್ರಶಾಂತ್ ಪಾಟೀಲ ಸೂಚಿಸಿದರು.

ಕುಲಶೇಖರದ ಶಿಥಿಲ ಕಟ್ಟಡದಲ್ಲಿ ಕೊರಗ ಕುಟುಂಬವೊಂದು ವಾಸವಾಗಿದ್ದು ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಲಾಯಿತು. ಗಂಜಿಮಠ ಗ್ರಾಮ ಪಂಚಾಯಿತಿಯ ಕೆಲವು ಕಾಮಗಾರಿಗಳು ಮುಕ್ತಾಯಗೊಂಡಿವೆ. ಆದರೆ ₹ 5 ಲಕ್ಷದ ಬಿಲ್ ಪಾವತಿ ಆಗಲಿಲ್ಲ ಎಂದು ದೂರಲಾಯಿತು. ಪಂಚಾಯಿತಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಸಲಾಗುವುದು ಎಂದು ಮಂಗಳೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಹೊಳ್ಳ ತಿಳಿಸಿದರು. ಸುರತ್ಕಲ್ ಅಂಬೇಡ್ಕರ್ ಭವನ ಪಾಳುಬಿದ್ದಿದೆ ಎಂದು ದೂರಲಾಯಿತು. ಅಂಬೇಡ್ಕರ್ ಭವನಕ್ಕೆ ನಾಮಫಲಕ ಹಾಕಲಾಗುವುದು ಎಂದು ಮಂಗಳೂರು ತಹಶೀಲ್ದಾರ್ ರಮೇಶ್ ಟಿ ಬಾಬು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-29-924519691

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.