ಮಂಗಳೂರು: ಸರ್ಕಾರದಿಂದ ಬಿಪಿಎಲ್ ಕುಟುಂಬಗಳಿಗೆ ಪೂರೈಕೆ ಆಗಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪಿಕಪ್ ವಾಹನವನ್ನು ಆಹಾರ ನಿರೀಕ್ಷಕರು ಹಾಗೂ ಪೊಲೀಸ್ ಅಧಿಕಾರಿಗಳು ಬಜಪೆ ಬಳಿ ಮಂಗಳವಾರ ಸಂಜೆ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ವಾಹನದಲ್ಲಿದ್ದ 80 ಚೀಲ ಅಕ್ಕಿಯನ್ನು (ಸುಮಾರು 4 ಟನ್) ಹಾಗೂ ಆರೋಪಿಗಳಾದ ಜೈನುದ್ದೀನ್, ಅಬ್ಬಾಸ್ ಮತ್ತು ಅಬ್ದುಲ್ ರಝಾಕ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಸಂಜೆ ಪಡಿತರ ಅಕ್ಕಿಯನ್ನು ಬಜಪೆಯಲ್ಲಿ ಪಿಕಪ್ ವಾಹನಕ್ಕೆ ಲೋಡ್ ಮಾಡುತ್ತಿರುವ ಬಗ್ಗೆ ಆಹಾರ ನಿರೀಕ್ಷಕ ಪ್ರಸನ್ನ ಕುಮಾರ್ ಪಕ್ಕಳ ಮಾಹಿತಿ ಬಂದಿತ್ತು. ಅವರು ಸ್ಥಳಕ್ಕೆ ತಲುಪಿದಾಗ ಅಕ್ಕಿ ಮೂಟೆಗಳನ್ನು ತುಂಬಲಾಗಿದ್ದ ಪಿಕಪ್ ವಾಹನವೊಂದು ಬಜಪೆಯ ಚರ್ಚ್ ಜಂಕ್ಷನ್ ಕಡೆಗೆ ಸಾಗಿತ್ತು. ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ ಅವರು ಆ ವಾಹನವನ್ನು ಹಿಂಬಾಲಿಸಿದ್ದರು. ಮುರ ಜಂಕ್ಷನ್ನಿಂದ ಹಳೆ ವಿಮಾನ ನಿಲ್ದಾಣ ಕಡೆಗೆ ಸಾಗುವ ರಸ್ತೆಯಲ್ಲಿ ವಾಹನವನ್ನು ಪೊಲೀಸರ ಸಹಾಯದಿಂದ ತಡೆದು ನಿಲ್ಲಿಸಿದ್ದರು.

‘ವಾಹನದಲ್ಲಿ ಚಾಲಕ ಸೇರಿ ಮೂವರು ಇದ್ದರು. ವಾಹನದಲ್ಲಿ ತುಂಬಿಸಲಾಗಿದ್ದ ಅಕ್ಕಿ ಮೂಟೆಗಳ ಬಗ್ಗೆ ಚಾಲಕನಲ್ಲಿ ವಿಚಾರಿಸಿದಾಗ ‘₹28 ಸಾವಿರ ನೀಡಿ ಕರಂಬಾರ ಬಾವ ಅವರ ಗೋಲ್ಡನ್ ಸ್ಟೋರ್ ದಿನಸಿ ಅಂಗಡಿಯಿಂದ 50 ಕೆ.ಜಿ ತೂಕದ 35 ಚೀಲ ಅಕ್ಕಿ, ₹14 ಸಾವಿರ ನೀಡಿ ಬಜಪೆ ಲತೀಫ್ ಅವರ ದಿನಸಿ ಅಂಗಡಿಯಿಂದ ತಲಾ 50 ಕೆ.ಜಿ ತೂಕದ 15 ಚೀಲ ಅಕ್ಕಿ ಮತ್ತು 24 ಸಾವಿರ ನೀಡಿ ಬಜಪೆಯ ಆರೀಫ್ ಅವರ ದಿನಸಿ ಅಂಗಡಿಯಿಂದ ತಲಾ 50 ಕೆ.ಜಿ ತೂಕದ 30 ಚೀಲ ಅಕ್ಕಿ ಖರೀದಿ ಮಾಡಲಾಗಿದೆ. ಅಕ್ಕಿ ಚೀಲಗಳನ್ನು ಉಳ್ಳಾಲ ತಾಲ್ಲೂಕಿನ ಕೆ.ಸಿ. ರೋಡ್ಗೆ ಸಾಗಿಸಲಾಗುತ್ತಿದೆ. ಹುಡಿ ಮಾಡಿ ಮಾರಲು ಅಕ್ಕಿಯನ್ನು ಕೊಂಡೊಯ್ಯುತ್ತಿದ್ದೇವೆ. ಇದು ಪಡಿತರ ಅಕ್ಕಿ. ಇದನ್ನು ಖರೀದಿಸಿದ ಬಿಲ್ ಇಲ್ಲ’ ಎಂದು ತಿಳಿಸಿದ್ದ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-29-14129376

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.