ಮಂಗಳೂರು: ಕುರ್ನಾಡು ಸುಬ್ಬುಗುಳಿ ಎಂಬಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ಕೊಣಾಜೆ ಠಾಣೆಯ ಪೊಲೀಸರು ಬುಧವಾರ ರಾತ್ರಿ ಜಪ್ತಿ ಮಾಡಿದ್ದಾರೆ. ಮರಳು ಅಕ್ರಮ ಸಾಗಾಟಕ್ಕೆ ಬಳಸಿದ್ದ ಪಿಕಪ್ ವಾಹನವನ್ನೂ ವಶಪಡಿಸಿಕೊಂಡಿದ್ದಾರೆ.

ಕುರ್ನಾಡು ಸುಬ್ಬುಗುಳಿ ಎಂಬಲ್ಲಿ ಮರಳನ್ನು ಅಕ್ರಮವಾಗಿ ವಾಹನಕ್ಕೆ ತುಂಬಿಸುತ್ತಿರುವ ಬಗ್ಗೆ ಠಾಣೆಯ ಪಿಎಸ್ಐ ಪುನೀತ್ ಎಂ. ಗಾಂವಕರ್ ಅವರಿಗೆ ಮಾಹಿತಿ ಬಂದಿತ್ತು. ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅಲ್ಲಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಮರಳನ್ನು ತುಂಬುತ್ತಿರುವುದು ಕಂಡುಬಂದಿತ್ತು. ಸುಬ್ಬುಗುಳಿಯ ಅಬ್ದುಲ್ ರಶೀದ್ ಮತ್ತು ಕಬೀರ್ (ವಾಹನದ ಚಾಲಕ) ಸ್ಥಳದಲ್ಲಿದ್ದರು. ಮರಳು ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿಯನ್ನು ಅವರು ಹಾಜರುಪಡಿಸಿಲ್ಲ. ಮರಳನ್ನು ಹಾಗೂ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಹನದಲ್ಲಿ ತುಂಬಿಸಿದ್ದ ಮರಳಿನ ಅಂದಾಜು ಮೌಲ್ಯ ₹ 5,500 ಹಾಗೂ ಮರಳು ಸಾಗಾಟ ಮಾಡಲು ಉಪಯೋಗಿಸಿದ ವಾಹನದ ಅಂದಾಜು ಮೌಲ್ಯ ₹ 4 ಲಕ್ಷ ಎಂದು ಅವರು ಮಾಹಿತಿ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-29-239098511

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.