ಮಂಗಳೂರು: ವಿಶ್ವ ಆಸ್ತಮ ತಡೆ ದಿನದ (ಮೇ.5) ಅಂಗವಾಗಿ ನಗರದ ಇಂಡಿಯಾನ ಆಸ್ಪತ್ರೆಯಲ್ಲಿ ಉಚಿತವಾಗಿ ಆಸ್ತಮ ತಪಾಸಣೆ ಮೇ 4ರಿಂದ 9ರ ವರೆಗೆ ನಡೆಯಲಿದೆ ಎಂದು ಡಾ.ಕೀರ್ತನ್ ಗಣಪತಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಉಚಿತ ತಪಾಸಣೆಯ ಸಂದರ್ಭದಲ್ಲಿ ಕನ್ಸಲ್ಟೆಂಟ್ ಪಲ್ಮನಾಲಜಿಸ್ಟ್ ಜೊತೆ ಸಮಾಲೋಚನೆಗೆ ಅವಕಾಶವಿದೆ. ಶ್ವಾಸಕೋಶದ ಕ್ಷಮತೆಯನ್ನು ಅಳೆಯಲು ನೆರವಾಗುವ ಸ್ಪೈರೊಮೆಟ್ರಿ ಪರೀಕ್ಷೆಯನ್ನು ಅಗತ್ಯವಿದ್ದರೆ ಮಾಡಲಾಗುವುದು. ಇದಕ್ಕೆ ಶೇಕಡ 50ರಷ್ಟು ರಿಯಾಯಿತಿ ಇದೆ. ನೋಂದಣಿಗೆ 6361687385ಕ್ಕೆ ಕರೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.

ವಿಶ್ವದಲ್ಲಿ ಪತ್ತೆಯಾಗುವ ಆಸ್ತಮದಲ್ಲಿ ಶೇಕಡ 10ರಷ್ಟು ಭಾರತವೊಂದರಲ್ಲೇ ಇದೆ. ಆಸ್ತಮದಿಂದ ಪ್ರಪಂಚದಲ್ಲಿ ಸಂಭವಿಸುವ ಸಾವಿನ ಶೇಕಡ 40ರಷ್ಟು ಭಾರತದಲ್ಲಿ ಆಗುತ್ತದೆ. ಇದನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ ನಿರ್ವಹಣೆ ಮಾಡಿಕೊಂಡು ಹೆಚ್ಚು ಸಮಸ್ಯೆ ಆಗದಂತೆ ನೋಡಿಕೊಳ್ಳಬಹುದಾಗಿದೆ ಎಂದ ಅವರು ಆಸ್ತಮಕ್ಕೆ ಇನ್ಹೇಲರ್ ಪರಿಣಾಮಕಾರಿಯಾಗಿದೆ. ಅರಲ್ಲಿ ಪಾರ್ಶ್ವಫಲ ಇರುವುದಿಲ್ಲ. ಅದು ವ್ಯಸನದ ರೂಪ ಪಡೆಯುವುದೂ ಇಲ್ಲ ಎಂದು ಅವರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-29-672791045

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.