ಮಂಗಳೂರು: ವಿಶ್ವ ಆರೋಗ್ಯ ದಿನಾಚಣೆ ಅಂಗವಾಗಿ ನಗರದ ಇಂಡಿಯಾನ ಆಸ್ಪತ್ರೆ ಆರೋಗ್ಯ ಕಾರ್ಡ್ ಗಳನ್ನು ನೀಡುತ್ತಿದ್ದು ಆರೋಗ್ಯ ದಿನಾಚಣೆಯಂದು (ಏ.7) ಎಲ್ಲ ಹೊರರೋಗಿಗಳು ಮತ್ತು ಒಳರೋಗಿ ಗಳಿಗೆ ಉಚಿತವಾಗಿ ಕಾರ್ಡ್ ನೀಡಲಾಗು ವುದು ಎಂದು ಆಸ್ಪತ್ರೆಯ ನಿರ್ದೇಶಕ ಡಾ.ನಿಹಾಲ್ ಅಲಿ ಕುಂಬ್ಳೆ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಏ.8ರಿಂದ 14ರ ವರೆಗೆ ₹ 399ಕ್ಕೆ ಗೋಲ್ಡ್ ಕಾರ್ಡ್, ₹ 99ಕ್ಕೆ ಪ್ರಿವಿಲೆಜ್ ಕಾರ್ಡ್ ನೀಡಲಾಗುವುದು. ಇದರಲ್ಲಿ ವೈದ್ಯರ ಜೊತೆ ಇನ್ಹೌಸ್ ಸಮಾಲೋಚನೆ ಮತ್ತು ಹೊರರೋಗಿಗಳಿಗೆ ಶೇಕಡ 20, ಪ್ರಯೋಗಾಲಯ ಮತ್ತು ರೇಡಿಯಾಲಜಿ ಸೇವೆಯಲ್ಲಿ ಶೇ 15, ವೈದ್ಯರ ಶುಲ್ಕ ಮತ್ತು ಔಷಧಿಗಳಲ್ಲಿ ಶೇ 10 ಹಾಗೂ ಹೊರರೋಗಿಗಳ ಔಷಧಿ ಬೆಲೆಯಲ್ಲಿ ಶೇ 5ರಷ್ಟು ರಿಯಾಯಿತಿ ಸಿಗಲಿದೆ ಎಂದರು.

ಅಧ್ಯಕ್ಷ ಡಾ. ಅಲಿ ಕುಂಬ್ಳೆ ಮಾತನಾಡಿ, ‘ಆರೋಗ್ಯಕ್ಕಾಗಿ ಒಟ್ಟಾಗಿ ವಿಜ್ಞಾನದೊಂದಿಗೆ ನಿಲ್ಲು’ ಎಂಬುದು ಈ ಬಾರಿಯ ವಿಶ್ವ ಆರೋಗ್ಯ ದಿನದ ಧ್ಯೇಯವಾಕ್ಯ ಆಗಿದೆ. ಇದು ಮಾನವರ ಮಾತ್ರವಲ್ಲ, ಪ್ರಕೃತಿಯ ಬಗ್ಗೆಯೂ ಕಾಳಜಿ ತೋರಿಸುತ್ತದೆ. ಜನರು, ಪ್ರಾಣಿ–ಪಕ್ಷಿಗಳು, ಸಸ್ಯಗಳು ಮತ್ತು ಗ್ರಹಗಳ ಆರೋಗ್ಯ ಕಾಪಾಡಲು ವೈಜ್ಞಾನಿಕ ಸಹಯೋಗ ಅಗತ್ಯವಿದೆ’ ಎಂದರು.

ಡಾ.ಅಪೂರ್ವ ಜಯದೇವ, ಡಾ.ಆದಿತ್ಯ ಭಾರದ್ವಾಜ್, ಡಾ.ಕಾರ್ತಿಕ್ ವೇಲ್ಮುರುಗನ್, ಡಾ.ಕೃಪಾ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇ.ವಿಜಯಚಂದ್ರ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-29-2104042570

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.