ಮಂಗಳೂರು: ವಾಣಿಜ್ಯ ವಹಿವಾಟು, ಅಂಗಡಿ ಮಳಿಗೆಗಳು, ಬಂದರು ಪೊಲೀಸ್ ಠಾಣೆ, ನಗರದ ಪ್ರಮುಖ ಬಂದರು ಪ್ರದೇಶ ಒಳಗೊಂಡಿರುವ ಬಂದರು ವಾರ್ಡ್ನಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವುದೇ ದೊಡ್ಡ ಸಮಸ್ಯೆ.

ಬಂದರಿಗೆ ಬರುವ ಹೊರ ಜಿಲ್ಲೆ, ಹೊರ ರಾಜ್ಯಗಳ ದೊಡ್ಡ ಲಾರಿಗಳು, ವಾಣಿಜ್ಯ ವಹಿವಾಟು ಕೇಂದ್ರಗಳಿಗೆ ಸಾಮಗ್ರಿ ಇಳಿಸಲು ಹಾಗೂ ಲೋಡ್ ಮಾಡಿಕೊಂಡು ಹೋಗಲು ಬರುವ ವಾಹನಗಳಿಂದ ಬಂದರು ರಸ್ತೆ ದಿನವಿಡೀ ವಾಹನ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಕಿರಿದಾದ ರಸ್ತೆಯಲ್ಲಿ ಕೆಲವೆಡೆ ಚರಂಡಿ ಸಹಿತ ಪಾದಚಾರಿ ಮಾರ್ಗಗಳು ಇದ್ದರೆ, ಬಹುತೇಕ ಕಡೆಗಳಲ್ಲಿ ಪಾದಚಾರಿ ಮಾರ್ಗವೇ ಇಲ್ಲ. ಮುಖ್ಯ ರಸ್ತೆಗಳು ಉತ್ತಮವಾಗಿದ್ದರೂ, ಒಳ ರಸ್ತೆಗಳು ಅಲ್ಲಲ್ಲಿ ಹಾಳಾಗಿವೆ.

ಬಂದರಿನ ಒಂದು ಭಾಗ ಪೋರ್ಟ್ ವಾರ್ಡ್ಗೆ ಸೇರಿದ್ದರೆ, ಇನ್ನೊಂದು ಭಾಗ ಬಂದರು ವಾರ್ಡ್ ವ್ಯಾಪ್ತಿಯಲ್ಲಿದೆ. ಬಂದರಿನಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ಅನುಕೂಲಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೊಂದಿಕೊಂಡು ಇಂದಿರಾ ಕ್ಯಾಂಟೀನ್ ನಡೆಸಲು ಕಟ್ಟಡವೊಂದನ್ನು ನಿರ್ಮಿಸಲಾಗಿದೆ. ಈ ಕಟ್ಟಡವು ಬೀಗ ಹಾಕಿಕೊಂಡಿದ್ದು, ಉದ್ಘಾಟನೆಗಾಗಿ ಕಾಯುತ್ತಿದೆ.

‘ನಮ್ಮ ಭಾಗದಲ್ಲಿ ಎರಡು ದಿನಗಳಿಗೊಮ್ಮೆ ಮಹಾನಗರ ಪಾಲಿಕೆಯ ನೀರು ಸರಬರಾಜು ಆಗುತ್ತದೆ. ಒಮ್ಮೊಮ್ಮೆ ನೀರು ಬರುವುದೇ ಇಲ್ಲ. ಪಾಲಿಕೆಯವರನ್ನು ಕೇಳಿದರೆ ಪಂಪ್ ಹಾಳಾಗಿದೆ, ಜಲಸಿರಿ ಕಾಮಗಾರಿ ನಡೆಯುತ್ತಿದೆ, ಪೈಪ್ ಒಡೆದಿದೆ ಇಂತಹ ಸಬೂಬು ಹೇಳುತ್ತಾರೆ’ ಎಂದು ಸ್ಥಳೀಯರು ಪಾನ್ ಅಂಗಡಿಯವರೊಬ್ಬರು ಹೇಳಿದರು.

‘ಬಂದರು ಆವರಣ, ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಇಲ್ಲ. ಎಲ್ಲೆಂದರಲ್ಲಿ ಕಸ ರಾಶಿ ಬಿದ್ದಿರುತ್ತದೆ. ಪಾಲಿಕೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಬಂದರು ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಪಾಲಿಕೆ ನಿಗಾ ವಹಿಸಬೇಕು ಜೊತೆಗೆ ಜನರಲ್ಲೂ ಅರಿವು ಮೂಡಿಸಬೇಕು’ ಎಂದು ಬಾಡಿಗೆ ಟ್ಯಾಕ್ಸಿ ಚಾಲಕರೊಬ್ಬರು ಹೇಳಿದರು.

ಬಂದರು ವಾರ್ಡ್ನ ಪ್ರಮುಖ ರಸ್ತೆಗಳಲ್ಲಿ ಯುಜಿಡಿ ಪೈಪ್ಲೈನ್ ಕಾಮಗಾರಿಗಳು ನಡೆದಿವೆ. ಆದರೆ, ಇಡೀ ವಾರ್ಡ್ನಲ್ಲಿ ಕೆಲಸ ಆಗಿಲ್ಲ. ಮುಖ್ಯ ಪೈಪ್ಗಳನ್ನು ವೆಟ್ವೆಲ್ಗೆ (ದ್ರವತ್ಯಾಜ್ಯ ಸಂಸ್ಕರಣಾ ಘಟಕ) ಸಂಪರ್ಕಿಸಿಲ್ಲ. ಹೀಗಾಗಿ, ಕೊಳಚೆ ನೀರು ತೋಡಿನಲ್ಲೇ ಹರಿಯುತ್ತದೆ. ಅರೆಬರೆ ಆಗಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂದು ಅಜೀಜುದ್ದೀನ್ ರಸ್ತೆಯ ನಿವಾಸಿಯೊಬ್ಬರು ಆಗ್ರಹಿಸಿದರು.

‘ಕಂಡತ್ತಪಳ್ಳಿ ವೆಟ್ವೆಲ್ ಕಾಮಗಾರಿ ಪ್ರಗತಿಯಲ್ಲಿ’

ಬಂದರು ವಾರ್ಡ್ನ ಅಜೀಜುದ್ದೀನ್ ರಸ್ತೆ, ಅನ್ಸಾರ್ ರಸ್ತೆ, ಜುಮ್ಮಾ ಮಸೀದಿ ರಸ್ತೆ, ಎನ್ಪಿಟಿ ರಸ್ತೆ ಸೇರಿದಂತೆ ಪ್ರಮುಖ ಐದು ರಸ್ತೆಗಳು ಅಭಿವೃದ್ಧಿ ಹೊಂದಿವೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಶೇ 60ರಷ್ಟು ಕಾಮಗಾರಿಗಳು ನಡೆದಿವೆ. ಪಾಲಿಕೆ ಅನುದಾನದಲ್ಲಿ ಮಳೆ ನೀರು ಚರಂಡಿ, ಒಳ ರಸ್ತೆ ನಿರ್ಮಿಸಲಾಗಿದೆ. ಮಹಾತ್ಮಗಾಂಧಿ ಯೋಜನೆಯಡಿ ಕಾರ್ಸ್ಟ್ರೀಟ್ ವೆಂಕಟರಮಣ ದೇವಸ್ಥಾನದಿಂದ ಬಂದರುವರೆಗೆ ಹೋಗುವ ರಸ್ತೆ ಅಭಿವೃದ್ಧಿ ಹೊಂದಿದೆ. ಕಂಡತ್ತಪಳ್ಳಿ ವೆಟ್ವೆಲ್ – 4 ಕಾಮಗಾರಿಯು ₹4 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ವೆಟ್ವೆಲ್ ಸಾಮರ್ಥ್ಯ ಹೆಚ್ಚಿಸಬೇಕು ಎಂಬುದು ಸ್ಥಳೀಯರ ಬಹುಕಾಲದ ಬೇಡಿಕೆಯಾಗಿತ್ತು ಎಂದು ವಾರ್ಡ್ನ ನಿಕಟಪೂರ್ವ ಸದಸ್ಯೆ ಝೀನತ್ ಸಂಶುದ್ದೀನ್ ಹೇಳಿದರು.

ಅಧಿಕಾರಾವಧಿಯಲ್ಲಿ ಇರುವಾಗಲೇ, ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಅಜೀಜುದ್ದೀನ್ ರಸ್ತೆ, ಜುಮ್ಮಾ ಮಸೀದಿ ರಸ್ತೆ ವಿಸ್ತರಣೆ ಹಾಗೂ ಮಳೆನೀರು ಚರಂಡಿ ನಿರ್ಮಾಣಕ್ಕೆ ₹3.5 ಕೋಟಿ ಅನುದಾನ ಮೀಸಲಿಟ್ಟಿದ್ದು, ಶೀಘ್ರ ಕಾಮಗಾರಿ ಪ್ರಾರಂಭವಾಗಬಹುದು. ಕೆಲವು ಒಳ ರಸ್ತೆಗಳ ಕಾಂಕ್ರೀಟಿಕರಣ ಬಾಕಿ ಉಳಿದಿದೆ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.