ಮಂಗಳೂರು: ‘ಕೋಕ್ ಸಲ್ಪರ್ ಘಟಕದಿಂದ ಜೋಕಟ್ಟೆ ಭಾಗದಲ್ಲಿ ಮಾಲಿನ್ಯದ ಅನಾಹುತಗಳಾಗಿರುವುದು ಸಾಬೀತಾಗಿದ್ದರೂ ಎಂಆರ್ಪಿಎಲ್ ಕಂಪನಿ ಸರಿಪಡಿಸಲು ಮುಂದಾಗುತ್ತಿಲ್ಲ. ಸಂತ್ರಸ್ತರಿಗೆ ಪುನ ರ್ವಸತಿ, ಹಸಿರು ವಲಯ ನಿರ್ಮಿ ಸುವ ಸರ್ಕಾರದ ಆದೇಶ ಜಾರಿ ಗೊಳಿಸಲು ಹಿಂದೇಟು ಹಾಕುತ್ತಿದೆ. ಜಿಲ್ಲಾಡಳಿತ ಕಾನೂನುಬದ್ದವಾಗಿ ನಡೆದುಕೊಂಡಿದ್ದರೆ ಕಂಪನಿಗೆ ಬೀಗ ಬೀಳುತ್ತಿತ್ತು’ ಎಂದು ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಆರೋಪಿಸಿದರು.

ಸರ್ಕಾರದ ಆದೇಶ ಪ್ರಕಾರ ಹಸಿರು ವಲಯಕ್ಕಾಗಿ ಗುರುತಿಸಿರುವ 27 ಎಕರೆ ಜಮೀನು ಸ್ವಾಧೀನ ಹಾಗೂ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಎಂಆರ್ಪಿಎಲ್ ಹಾಗೂ ಜಿಲ್ಲಾಡಳಿತ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ನಾಗರಿಕ ಹೋರಾಟ ಸಮಿತಿಯು ಕೋಕ್ ಸಲ್ಪರ್ ಘಟಕದ ಮುಂದೆ ಸೋಮವಾರ ಆರಂಭಿಸಿರುವ ಅನಿರ್ಧಿಷ್ಟಾವಧಿ ಧರಣಿ ಉದ್ಘಾಟಿಸಿ ಅವರು ಮಾತನಾಡಿದರು.

‘ಎಂಆರ್ಪಿಎಲ್ ಪರಿಸರ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಕಂಪನಿಯ ತ್ಯಾಜ್ಯದಿಂದ ಸಮುದ್ರ ಹಾಗೂ ಫಲ್ಗುಣಿ ನದಿ ಮಲಿನಗೊಂಡಿದೆ. ಜೋಕಟ್ಟೆ ಹಾಗೂ ಸಮೀಪದ ಗ್ರಾಮಗಳ ಜನರನ್ನು ಹಲವು ಸಮಸ್ಯೆಗಳು ಕಾಡುತ್ತಿವೆ. ಉದ್ಯೋಗ, ಗುತ್ತಿಗೆಯಂತಹ ಅವಕಾಶಗಳಲ್ಲಿ ಸ್ಥಳೀಯರನ್ನು ಕಂಪನಿ ಹತ್ತಿರಕ್ಕೂ ಸೇರಿಸುತ್ತಿಲ್ಲ’ ಎಂದು ಅವರು ದೂರಿದರು.

ಹೋರಾಟ ಸಮಿತಿಯ ಸದಸ್ಯರು ಮತ್ತು ಸಂತ್ರಸ್ತ ಗ್ರಾಮಸ್ಥರ ಪ್ರತಿನಿಧಿಗಳಾದ ಪುಷ್ಪಾ, ಸುಂದರಿ ಮತ್ತು ಸುಶೀಲಾ ಅವರು ಚೆಂಡೆ ಬಾರಿಸುವ ಮೂಲಕ ಧರಣಿಗೆ ಚಾಲನೆ ನೀಡಿದರು.

ನಾಗರಿಕ ಹೋರಾಟ ಸಮಿತಿಯ ಸಹ ಸಂಚಾಲಕ ಅಬೂಬಕ್ಕರ್ ಬಾವ, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್, ಹೋರಾಟ ಸಮಿತಿಯ ಪ್ರಮುಖರಾದ ಮನೋಜ್ ಜೋಕಟ್ಟೆ, ಸಂಸು ಇದಿನಬ್ಬ, ಇಕ್ಬಾಲ್ ಜೋಕಟ್ಟೆ, ಷರೀಫ್ ನಿರ್ಮುಂಜೆ, ಲಿಂಗಪ್ಪ, ಹನೀಫ್, ಸೀತಾರಾಮ ಆಚಾರ್ಯ, ವೆಂಕಟೇಶ್, ಜಾಬಿರ್ ಜೆ.ಎಂ, ಶೇಖರ ನಿರ್ಮುಂಜೆ, ಬಶೀರ್ ಬಿ.ಎಸ್, ಜಯಂತ, ಬಜ್ಪೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಲೋಕೇಶ್ ಪೂಜಾರಿ ಪಾಲ್ಗೊಂಡಿದ್ದರು. ಸಿಪಿಐಎಂ ಸುರತ್ಕಲ್ ವಿಭಾಗ ಕಾರ್ಯದರ್ಶಿ ಶ್ರೀನಾಥ್ ಕುಲಾಲ್ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-29-1577335848

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.