ಮಂಗಳೂರು: ರಾಮನಗರ ಜಿಲ್ಲಾ ಮಾವು ತೋಟದ ಬೆಳೆಗಾರರ ಮಾರಾಟ ಸಂಘದ ನೇತೃತ್ವದಲ್ಲಿ ‘ರೈತರಿಂದ ಗ್ರಾಹಕರಿಗೆ ನೇರ ಮಾರಾಟ’ ಪರಿಕಲ್ಪನೆಯಲ್ಲಿ ಮಾವು ಮೇಳವು ಮೇ 28ರಿಂದ ಮೇ 31ರವರೆಗೆ ನಗರದ ಕದ್ರಿ ಉದ್ಯಾನದಲ್ಲಿ ನಡೆಯಲಿದೆ.

ರಾಮನಗರದ 25ಕ್ಕೂ ಹೆಚ್ಚು ಬೆಳೆಗಾರರು ಮೇಳದಲ್ಲಿ ಆಲ್ಫಾನ್ಸೊ, ಬಾದಾಮಿ, ಮಲ್ಲಿಕಾ, ಮಲಗೋವಾ, ಸಿಂಧೂರ, ಕಾಲಪಾಡಿ, ಶುಗರ್ ಬೇಬಿ, ಇಮಾಮ್ಪಸಂದ್, ರಸಪೂರಿ ಸೇರಿದಂತೆ 18ಕ್ಕೂ ಅಧಿಕ ವಿಧದ ಮಾವು ಮಾರಾಟ ಮಾಡಲಿದ್ದಾರೆ. ಕೆ.ಜಿ.ಗೆ ಕನಿಷ್ಠ ₹60ರಿಂದ ಗರಿಷ್ಠ ₹250ರವರೆಗಿನ ದರದಲ್ಲಿ ಹಣ್ಣು ಲಭ್ಯವಾಗಲಿದೆ. ಬೆಳಿಗ್ಗೆ 9ರಿಂದ ರಾತ್ರಿ 8.30ರವರೆಗೆ ಮಾವು ಮಾರಾಟ ನಡೆಯುತ್ತದೆ ಎಂದು ರಾಮನಗರ ಮಾವು ಬೆಳೆಗಾರರ ಮಾರಾಟ ಸಂಘದ ಅಧ್ಯಕ್ಷ ರಮೇಶ್ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೇ 28ರಂದು ಬೆಳಿಗ್ಗೆ 11 ಗಂಟೆಗೆ ಮೇಳದ ಉದ್ಘಾಟನೆ ನಡೆಯಲಿದೆ. ಕಳೆದ ವರ್ಷದ ಮೇಳದಲ್ಲಿ 80 ಟನ್ನಷ್ಟು ಮಾವು ವ್ಯಾಪಾರ ನಡೆದಿತ್ತು. ಈ ಬಾರಿ ಈಗಾಗಲೇ ಕದ್ರಿ ಉದ್ಯಾನದಲ್ಲಿ ಎರಡು ಮೇಳಗಳು ನಡೆದಿರುವುದರಿಂದ 25 ಟನ್ನಷ್ಟು ಮಾವಿನಹಣ್ಣು ತರಲು ನಿರ್ಧರಿಸಿದ್ದೇವೆ. ಹವಾಮಾನ ವೈಪರೀತ್ಯದಿಂದ ರಾಮನಗರದಲ್ಲಿ ಈ ಬಾರಿ ಶೇ 20ರಷ್ಟು ಮಾತ್ರ ಮಾವು ಬೆಳೆ ಇದೆ ಎಂದರು.

ಪ್ರಗತಿಪರ ರೈತ ವಾಸು, ಮಾವು ಬೆಳೆಗಾರರ ಸಂಘದ ನಿರ್ದೇಶಕ ಸಿದ್ದರಾಜು, ತೋಟಗಾರಿಕಾ ಇಲಾಖೆ ಅಧಿಕಾರಿ ಪ್ರವೀಣ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-29-1643954938

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.