ಮಂಗಳೂರು: ನಗರದ ಕೋಡಿಕಲ್ನ ಸರಯೂ ಬಾಲ ಯಕ್ಷವೃಂದದ ವತಿಯಿಂದ ಕದ್ರಿ ದೇವಸ್ಥಾನದ ಸಹಕಾರದೊಂದಿಗೆ 26ನೇ ವರ್ಷದ ಸರಯೂ ಸಪ್ತಾಹ, ಸಾಧಕ ಸನ್ಮಾನ, ಬಯಲಾಟ, ಮಹಿಳಾ ತಾಳಮದ್ದಳೆ ಕಾರ್ಯಕ್ರಮ ಇದೇ 25ರಿಂದ ಜೂನ್ 1ರವರೆಗೆ ಕದ್ರಿ ಮಂಜುನಾಥ ದೇವಸ್ಥಾನದ ರಾಜಾಂಗಣದಲ್ಲಿ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಸಂಸ್ಥೆಯ ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ, ‘ಇದೇ 25ರಂದು ಮಧ್ಯಾಹ್ನ 3 ರಿಂದ ದಕ್ಷಾಧ್ವರ ತಾಳಮದ್ದಳೆ, ಸಂಜೆ 5ರಿಂದ ಶ್ರೀ ಏಕಾದಶಿ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ, ಇದೇ 26ರಂದು ಮೀನಾಕ್ಷಿ ಕಲ್ಯಾಣ, 27ರಂದು ಕಚ-ದೇವಯಾನಿ, 28ರಂದು ಕೃಷ್ಣಾರ್ಜುನ, 29ರಂದು ಬಬ್ರುವಾಹನ, 30ರಂದು ಮಧ್ಯಾಹ್ನ 2.30 ರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಏರ್ಪಡಿಸಲಾಗಿದೆ ಎಂದರು.

‘ಇದೇ 31ರಂದು ಮಹಿಳಾ ತಾಳಮದ್ದಳೆ ಸಂಭ್ರಮ ನಡೆಯಲಿದ್ದು, ಬೆಳಗ್ಗೆ 9ರಿಂದ ನಾಸಾಚ್ಛೇದನ, ಬೆಳಿಗ್ಗೆ 11ರಿಂದ ಗಿರಿಜಾ ಕಲ್ಯಾಣ, ಮಧ್ಯಾಹ್ನ 1ರಿಂದ ರಾವಣ ವಧೆ, ಮಧ್ಯಾಹ್ನ 3ರಿಂದ ಮಂಡೋದರಿ ಪರಿಣಯ, ಸಂಜೆ 5.30ರಿಂದ ಶ್ರೀಕೃಷ್ಣ ಲೀಲೆ, ಚಂದ್ರಾವಳಿ ವಿಲಾಸ ಬಯಲಾಟಗಳು ನಡೆಯಲಿದೆ. ಜೂನ್ 1ರಂದು ಸಂಜೆ 5.30 ರಿಂದ ಜಾಬಾಲಿ ನಂದಿನಿ ಸಂವಾದ ನಡೆಯಲಿದೆ’ ಎಂದು ತಿಳಿಸಿದರು.ಮಹೇಶ್ ಮಣಿಯಾಣಿ ದೊಡ್ಡತೋಟ, ಯೋಗೀಶ್ ದೇವಾಡಿಗ ಕೊಂಚಾಡಿ, ರವಿ ಮುಂಡಾಜೆ, ವಿನಯ ಆಚಾರ್ಯ ಹೊಸಬೆಟ್ಟು, ಮುರಳೀಧರ ಭಟ್ ಕಟೀಲು, ದೇವದಾಸ್ ಕೂಳೂರು, ವಿಕ್ಟರ್ ಅಂದ್ರಾದೆ, ಕಲಾವತಿ ಟೀಚರ್ ಅವರನ್ನು ಸನ್ಮಾನಿಸಲಾಗುವುದು ಎಂದರು.ಸಂಸ್ಥೆಯ ಗೌರವ ಸಂಚಾಲಕ ಹರಿಕೃಷ್ಣ ಪುನರೂರು, ಪ್ರಮುಖರಾದ ಸುಧಾಕರ ರಾವ್ ಪೇಜಾವರ, ವರ್ಕಾಡಿ ಮಾಧವ ನಾವಡ, ಸರಯೂ ಮಹಿಳಾ ತಂಡದ ಅಧ್ಯಕ್ಷೆ ವಿಜಯಲಕ್ಷ್ಮಿ ಎಲ್.ಎನ್., ಗೌತಮ್ ಭಂಡಾರಿ, ಸಾಯಿಷಾ ಭಂಡಾರಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-29-1354869780

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.