ಮಂಗಳೂರು: ಕಾಂಕ್ರಿಟೀಕರಣಗೊಳ್ಳು ತ್ತಿರುವ ಕಂಕನಾಡಿ– ಪಂಪ್ವೆಲ್ ರಸ್ತೆಯ ಒಂದು ಭಾಗದ ಕಾಮಗಾರಿ ಪೂರ್ಣಗೊಂಡಿದ್ದು, ಜೂನ್ 10ಕ್ಕೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.

ಎಂಜಿನಿಯರ್ಗಳ ಜೊತೆಗೆ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು. ರಸ್ತೆಯ ಕಾಂಕ್ರಿಟೀಕರಣ ಮುಗಿದಿದ್ದು, ಬಾಕಿ ಇರುವ ಸಣ್ಣ ಕೆಲಸ, ಚರಂಡಿ ಸುಗಮಗೊಳಿಸಿ, ಸಂಚಾರಕ್ಕೆ ಬಿಟ್ಟು ಕೊಡು ವುದಾಗಿ ಗುತ್ತಿಗೆದಾರರು ತಿಳಿಸಿದ್ದು, ಇನ್ನೊಂದು ಭಾಗದ ಕಾಮಗಾರಿಯನ್ನು 3 ತಿಂಗಳ ಒಳಗೆ ಮುಗಿಸುವುದಾಗಿ ಹೇಳಿದ್ದಾರೆ. ಚರಂಡಿ, ಪಾದಚಾರಿ ಮಾರ್ಗ ಆಗಬೇಕಾಗಿದ್ದು, ಟೆಂಡರ್ ಕರೆಯಲಾಗಿದೆ ಎಂದರು.

ಯಾವುದೇ ಸಂದರ್ಭದಲ್ಲಿ ನೀರು ಅಂಗಡಿಗಳಿಗೆ ನುಗ್ಗುವುದು ಇಂತಹ ತೊಂದರೆಗಳು ಅಗಬಾರದೆಂದು ಎಂಜಿನಿಯರ್ಗಳಿಗೆ ನಿರ್ದೇಶನ ನೀಡಿದರು. ಒಳಚರಂಡಿ ಜೋಡಣೆ ಕೆಲಸ ಮಾಡ ಲಾಗಿದ್ದು, ತೊಂದರೆ ಆಗಲಾರದು ಎಂದು ಮಹಾನಗರ ಪಾಲಿಕೆಯ ಮುಖ್ಯ ಎಂಜಿನಿಯರ್ ನಾಗರಾಜ್ ಹೇಳಿದರು.

ಎಂಜಿನಿಯರ್ಗಳಾದ ಪ್ರೀತಮ್ , ಹೇಮಂತ್, ಪ್ರಮುಖರಾದ ಶಶಿಧರ್ ಹೆಗ್ಡೆ, ನವೀನ್ ಡಿಸೋಜ, ನಾಗೇಂದ್ರ ಕುಮಾರ್, ಭಾಸ್ಕರ್ ರಾವ್, ಅಪ್ಪಿ ಎಸ್, ಸತೀಶ್ ಪೆಂಗಲ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-29-2130971782

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.