ಮಂಗಳೂರು: ಮಹಾನಗರದ ಪೂರ್ವದ ಹೆಬ್ಬಾಗಿಲು ಕಣ್ಣೂರು ವಾರ್ಡ್. ಬಿ.ಸಿ.ರೋಡ್ ಕಡೆಯಿಂದ ನಗರಕ್ಕೆ ಬರುವವರನ್ನು ಈ ವಾರ್ಡ್ನಲ್ಲಿ ರಾಷ್ಟ್ರಿಯ ಹೆದ್ದಾರಿ 73ರ ಪಕ್ಕದಲ್ಲಿರುವ ದೊಡ್ಡ ಖಾಸಗಿ ಆಸ್ಪತ್ರೆಗಳು, ಐಷಾರಾಮಿ ಕಾರು ಕಂಪನಿಗಳ ವಿಶಾಲ ಕಚೇರಿಗಳು ಬರಮಾಡಿಕೊಳ್ಳುತ್ತವೆ. ಹೆದ್ದಾರಿ ಪಕ್ಕದಲ್ಲಿ ಥಳುಕು ಬಳುಕಿನ ಕಟ್ಟಡಗಳನ್ನು ಕಂಡು ಈ ವಾರ್ಡ್ ಅಭಿವೃದ್ಧಿ ಹೊಂದಿದ ಪ್ರದೇಶ ಎಂದುಕೊಂಡರೆ ತಪ್ಪಾದೀತು. ಸಮಸ್ಯೆಗಳನ್ನೇ ಹೊದ್ದು ಮಲಗಿರುವ ಪ್ರದೇಶಗಳು ಈ ಕಟ್ಟಡಗಳಾಚೆ ಇವೆ.

‘ಸ್ಮಾರ್ಟ್ ಸಿಟಿ’ಯ ಭಾಗವಾಗಿದ್ದರೂ, ಈ ವಾರ್ಡ್ನ ಬಹುತೇಕ ಪ್ರದೇಶಗಳಿಗೆ ಒಳಚರಂಡಿ ಸಂಪರ್ಕವೇ ಇಲ್ಲ! ಹೆಚ್ಚಿನ ಮನೆಗಳು ಅವಲಂಬಿಸಿರುವುದು ಶೌಚಗುಂಡಿಗಳನ್ನು. ಸ್ನಾನ, ಪಾತ್ರೆ ತೊಳೆದ ಕೊಳಚೆ ನೀರುಗಳೆಲ್ಲ ಇಲ್ಲಿನ ಕಿರಿದಾದ ರಸ್ತೆ ಪಕ್ಕದ ಚರಂಡಿಗಳಲ್ಲಿ ವರ್ಷ ಪೂರ್ತಿ ಹರಿಯುತ್ತದೆ. ಇವುಗಳೆಲ್ಲ ತಲುಪುವುದು ವಾರ್ಡ್ನ ದಕ್ಷಿಣ ದಿಕ್ಕಿನಲ್ಲಿ ಹರಿಯುವ ‘ನೇತ್ರಾವತಿ’ಯ ಒಡಲನ್ನು.

‘ನಾವು ಸಣ್ಣವರಿದ್ದಾಗ ಇಲ್ಲಿ ದೊಡ್ಡ ತೋಡು ಹರಿಯುತ್ತಿತ್ತು. ಈಗ ಅದೆಲ್ಲ ಒತ್ತುವರಿಯಾಗಿದ್ದು, ಒಂದು ಮೀಟರ್ ಆಳವೂ ಇಲ್ಲದ ಚರಂಡಿಯಾಗಿ ಮಾರ್ಪಾಟಾಗಿದೆ. ಅದರಲ್ಲಿ ಹರಿಯುವುದೆಲ್ಲ ಕೊಳಚೆ ನೀರು. ಈ ಚರಂಡಿಗಳನ್ನೂ ಪಾಲಿಕೆಯವರು ವರ್ಷಕ್ಕೊಮ್ಮೆಯೂ ಸ್ವಚ್ಚಗೊಳಿಸುವುದಿಲ್ಲ. ಹಾಗಾಗಿ ಮಳೆಗಾಲದಲ್ಲಿ ಕಣ್ಣೂರಿನ ಕೆಲ ಪ್ರದೇಶದಲ್ಲಿ ಪ್ರವಾಹ ಕಾಣಿಸಿಕೊಳ್ಳುತ್ತದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ಥಳೀಯ ನಿವಾಸಿ ಸಾದಿಕ್.

ಕಣ್ಣೂರು ಪ್ರಾಥಮಿಕ ಮತ್ತು ಪ್ರೌಢಶಾಲೆ ಇರುವುದು ಕಣ್ಣೂರು ವಾರ್ಡ್ನಲ್ಲಿ. ಅದರ ದಕ್ಷಿಣದ ಪ್ರದೇಶ ಅಡ್ಯಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಇಲ್ಲಿ ನೀರು ಹರಿಯುವ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಕೊಳಚೆ ನೀರೆಲ್ಲ ಶಾಲೆಯ ಬಳಿ ಗುಂಡಿಯೊಂದರಲ್ಲಿ ಬಂದು ನಿಲ್ಲುತ್ತದೆ. ಮಕ್ಕಳು ಇದರ ದುರ್ನಾತದ ನಡುವೆಯೇ ಪಾಠ ಕೇಳಬೇಕಾದ ಸ್ಥಿತಿ ಇದೆ ಎಂದು ಸ್ಥಳೀಯರು ದೂರುತ್ತಾರೆ.

ಕಣ್ಣೂರಿನ ತೋಡನ್ನು ಮುಚ್ಚಿ, ಕಾಂಕ್ರೀಟ್ ಕೊಳವೆ ಅಳವಡಿಸುವ ಪ್ರಯತ್ನ ನಡೆದಿತ್ತು. ಇಲ್ಲಿ ಮಳೆಗಾಲದಲ್ಲಿ ಹರಿಯುವ ನೀರಿನ ಒತ್ತಡವನ್ನು ಈ ಕೊಳವೆ ತಾಳಿಕೊಳ್ಳದು ಎಂದು ಆಕ್ಷೇಪ ಎತ್ತಿದ್ದರಿಂದ ಅದರ ಕೆಲಸ ಸ್ಥಗಿತಗೊಂಡಿದೆ ಎಂದು ಸ್ಥಳೀಯರು ತಿಳಿಸಿದರು.

ಯೂಸೂಫ್ ನಗರದಲ್ಲಿ ರಸ್ತೆಗಳನ್ನು ಕಾಂಕ್ರೀಟೀಕರಣಗೊಂಡಿವೆ. ಆದರೆ ಅದರ ಪಕ್ಕ ಚರಂಡಿಯನ್ನು ವೈಜ್ಞಾನಿಕವಾಗಿ ನಿರ್ಮಿಸಿಲ್ಲ. ಇದರಿಂದಾಗಿ ಕೆಲವೊಮ್ಮೆ ನೀರು ಹಿಮ್ಮುಖವಾಗಿ ಹರಿದು ತಗ್ಗು ಪ್ರದೇಶದ ಮನೆಗಳ ಆವರಣದೊಳಗೆ ನೀರು ತುಂಬಿಕೊಳ್ಳುತ್ತದೆ ಎಂದು ಇಸಾಕ್ ದೂರಿದರು.

ಈ ವಾರ್ಡ್ನ ರಸ್ತೆಗಳು ತೀರಾ ಕಿರಿದಾಗಿವೆ. ಇಲ್ಲಿನ ಕಣ್ಣೂರು, ಬೋರುಗುಡ್ಡೆ ಪ್ರದೇಶಗಳಲ್ಲಿ ಕಟ್ಟಡಗಳ ನಡುವೆ ಓಣಿಯ ರೀತಿ ರಸ್ತೆ ಇದೆ. ಗುಂಡಿಗಳಿಂದ ತುಂಬಿರುವ ಈ ರಸ್ತೆಗಳು, ಎರಡು ಕಾರುಗಳು ಏಕಕಾಲಕ್ಕೆ ಹಾದುಹೋಗಲಾಗದಷ್ಟು ಕಿರಿದಾಗಿವೆ.

‘ನಮ್ಮ ಅಂಗಡಿಗೆ ಸಾಮಗ್ರಿಗಳನ್ನು ತರುವ ಮಿನಿ ಟೆಂಪೊಗಳು ಕೆಲವೊಮ್ಮೆ ತಾಸುಗಟ್ಟಲೆ ಇಲ್ಲಿನ ಕಿರಿದಾದ ರಸ್ತೆಯಲ್ಲಿ ಸಿಲುಕುತ್ತವೆ’ ಎಂದು ವರ್ತಕ ಅಬ್ದುಲ್ ಜಬ್ಬಾರ್ ದೂರಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-29-394846677

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.