ಮಂಗಳೂರು: ತೆಂಗಿನ ಗರಿಗಳ ಪಂಜು ‘ತೂಟೆ’ಯನ್ನು ಒಬ್ಬರ ಮೇಲೊಬ್ಬರು ಸ್ಪರ್ಧಾತ್ಮಕ ರೀತಿಯಲ್ಲಿ ಎಸೆಯುತ್ತಿದ್ದ ಭಕ್ತರು. ಬೆಂಕಿಯ ಕಿಡಿಗಳಿಂದಲೇ ಅವರು ಸ್ನಾನ ಮಾಡುತ್ತಿದ್ದಾರೆ ಏನೋ ಎಂಬಂತೆ ಕಾಣುತ್ತಿದ್ದ ಎದೆ ನಡುಗಿಸುವಂಥ ದೃಶ್ಯ. ನಸುಕಿನ ಗಾಢಕತ್ತಲಿನಲ್ಲಿ ಪಂಜುಗಳಿಂದ ಸಿಡಿದ ಕಿಡಿಗಳಿಂದಾಗಿ ನಿರ್ಮಾಣವಾದ ಸನ್ನಿವೇಶ ಕಂಡು ಮೂಕವಿಸ್ಮಿತರಾದ ನೋಡುಗರು... ಇಂತಹ ರೋಮಾಂಚನಕಾರಿ ದೃಶ್ಯ ಕಂಡುಬಂದಿದ್ದು ಕಟೀಲಿನ ಜಾತ್ರಾ ಮಹೋತ್ಸವದಲ್ಲಿ.

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಬ್ರಹ್ಮರಥೋತ್ಸವ ಮಂಗಳವಾರ ರಾತ್ರಿ ಅದ್ದೂರಿಯಿಂದ ನಡೆಯಿತು. ಈ ರೀತಿ ತೆಂಗಿನ ಗರಿಗಳ ಪಂಜನ್ನು ಪರಸ್ಪರ ಎಸೆಯುವ ಪದ್ಧತಿಯ ‘ತೂಟೆದಾರ ಸೇವೆ’ಯು ಜಾತ್ರೆಯ ವಿಶೇಷತೆಗಳಲ್ಲಿ ಒಂದು. ಹಾಗಾಗಿಯೇ ಭಕ್ತರ ಪಾಲಿಗೆ ಕಟೀಲು ಜಾತ್ರೆಯೆಂದರೆ ಎಲ್ಲಿಲ್ಲದ ಸಂಭ್ರಮ.

ದೇವಳದ ಒಳಾಂಗಣದಲ್ಲಿ ವಿವಿಧ ವಾದ್ಯಗಳು, ಯಕ್ಷಗಾನ ನಾಟ್ಯದ ಜೊತೆಗೆ ದೇವರ ಸುತ್ತು ಬಲಿ ನಡೆದ ಬಳಿಕ ದೇವರನ್ನು ಹೊರ ಕರೆತರಲಾಯಿತು. ಕಟೀಲಿನಿಂದ ಸುಮಾರು 4 ಕಿ.ಮೀ. ದೂರದ ಎಕ್ಕಾರು ಎಂಬಲ್ಲಿಗೆ ದೇವರು ತೆರಳಿದರು. ಅಲ್ಲಿ ಕಟ್ಟೆ ಪೂಜೆಗಳು ನಡೆದವು. ಈ ನಡುವೆ ಸರಿಗಮಪ ಖ್ಯಾತಿಯ ಕೀರ್ತನ್ ಹೊಳ್ಳ ಅವರಿಂದ ನಡೆದ ರಸಮಂಜರಿ ಭಕ್ತಿಯ ರಸದೌತಣ ಉಣಬಡಿಸಿತು.

ದೇವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಕಟೀಲಿನವರೆಗೆ ವೈಭವಯುತ ಶೋಭಾಯಾತ್ರೆಯ ಮೂಲಕ ಮತ್ತೆ ಕರೆತರಲಾಯಿತು. ಚೆಂಡೆ, ವಿವಿಧ ವಾದ್ಯಗಳು, ಗಾರುಡಿ ಗೊಂಬೆಗಳು ಮೆರವಣಿಗೆಗೆ ವಿಶೇಷ ಮೆರುಗು ತುಂಬಿದವು. ಬಳಿಕ ದರ್ಶನ ಬಲಿ ನಡೆದು ರಾತ್ರಿ 2.20ಕ್ಕೆ ದೇವರು ರಥಾರೂಢರಾದರು. ವಿರಾಜಮಾನ ರಾಗಿದ್ದ ದೇವರಿಗೆ ರಥಪೂಜೆ ನಡೆದ ಬಳಿಕ ತೇರನ್ನೆಳೆದು ಭಕ್ತರು ಸಂಭ್ರಮಿಸಿ ದರು. ರಥದಿಂದ ಎಸೆದ ಹಣ್ಣು, ಪ್ರಸಾದ ಹಿಡಿಯಲು ಪೈಪೋಟಿ ನಡೆಯಿತು.

ಆ ಬಳಿಕ ನಂದಿನಿ ನದಿಯಲ್ಲಿರುವ ಜಳಕದ ಕಟ್ಟೆಯಲ್ಲಿ ಅವಭೃತೋತ್ಸವ ನಡೆಯಿತು. ವಿಶೇಷ ರಥದಲ್ಲಿ ಶ್ರೀದೇವಿ ಜಳಕಕ್ಕೆ ಸಾಗುವಾಗ ತೂಟೆದಾರ ವ್ರತಧಾರಿಗಳೂ ಜೊತೆಯಲ್ಲೇ ಸಾಗಿದರು. ಅಜಾರು ರಕ್ತೇಶ್ವರಿ ಸನ್ನಿಧಿ ಬಳಿ ದೇವಿಯ ಜೊತೆ ವ್ರತಧಾರಿಗಳೂ ಜಳಕ ಮಾಡಿದರು. ನಂದಿನಿ ದಡದಲ್ಲಿ ದೇವರಿಗೆ ವಿಶೇಷ ಪೂಜೆ ನಡೆದ ಬಳಿಕ ಸ್ವಲ್ಪ ಹೊತ್ತು ಸಾಂಕೇತಿಕವಾಗಿ ತೂಟೆದಾರ ಸೇವೆ ನಡೆಯಿತು.

ಆ ಬಳಿಕ ದೇವರನ್ನು ದೇವಳಕ್ಕೆ ಕರೆತರಲಾಯಿತು. ಬ್ರಹ್ಮರಥದ ಎದುರು ಅತ್ತೂರು ಮತ್ತು ಕೊಡೆತ್ತೂರು ಮಾಗಣೆಗಳ ಗ್ರಾಮಸ್ಥರು ಪಂಜುಗಳನ್ನು ಪರಸ್ಪರ ಎಸೆಯುತ್ತಾ ‘ತೂಟೆದಾರ ಸೇವೆ’ ನಡೆಸಿದರು. ನಸುಕಿನ ಗಾಢಕತ್ತಲಲ್ಲಿ ಪಂಜುಗಳಿಂದ ಸಿಡಿದ ಕಿಡಿಗಳಿಂದ ನಿರ್ಮಾಣವಾದ ಸನ್ನಿವೇಶ ಭಕ್ತರನ್ನು ಮೂಕವಿಸ್ಮಿತರನ್ನಾಗಿ ಮಾಡಿತು. ಕಿಡಿಗಳು ತಾಗಿದರೂ ವ್ರತಾಧಾರಿಗಳಿಗೆ ಏನೂ ಆಗಲಿಲ್ಲ. ಈ ರೋಮಾಂಚನಕಾರಿ ದೃಶ್ಯ ಕಣ್ತುಂಬಿಕೊಂಡು ಕೃತಾರ್ಥರಾಗ ಲೆಂದೇ ಸಾವಿರಾರು ಭಕ್ತರು ಸೇರಿ ದ್ದರು. ತೂಟೆದಾರದ ಬಳಿಕ ವ್ರತಾಧಾರಿ ಗಳು ದೇವಸ್ಥಾನದಲ್ಲಿ ತೀರ್ಥಪ್ರಸಾದ ಸೇವಿಸಿದರು.

ಬಳಿಕ ದುರ್ಗಾಪರಮೇಶ್ವರಿ ಮತ್ತು ಎಕ್ಕಾರಿನಿಂದ ಕಟೀಲಿಗೆ ಮೆರವಣಿಗೆಯಲ್ಲಿ ಬಂದ ಕೋಡಮಣಿತ್ತಾಯ ದೈವದ ಭೇಟಿ ನಡೆಯಿತು. ರಾತ್ರಿ ಇಡೀ ನಿದ್ದೆಗೆಟ್ಟ ಭಕ್ತರು ಬೆಳಗಿನ ಜಾವದ ನಡೆದ ಈ ದೃಶ್ಯವನ್ನು ವೀಕ್ಷಿಸಿದರು. ಬಳಿಕ ನಡೆದ ಕೊಡಮಣಿತ್ತಾಯ ನೇಮದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.

ದೇವಿಗೆ ಬೆಂಕಿಯ ಆಟ ಬಲು ಇಷ್ಟ!

ದುರ್ಗಾಪರಮೇಶ್ವರಿಗೆ ಈ ಬೆಂಕಿಯ ಆಟ ಬಲು ಇಷ್ಟ ಎಂಬ ನಂಬಿಕೆ ಭಕ್ತರದು. ಅರುಣಾಸುರನನ್ನು ಸಂಹರಿಸಿದ ಶ್ರೀದೇವಿ ವಿಜಯಶಾಲಿನಿ ಯಾಗಿ ಮರಳಿದಾಗ ಬೆಂಕಿಯ ಸ್ವಾಗತ ಕೋರಿದ ಸ್ಮರಣಾರ್ಥ ತೋಟೆದಾರ ಸೇವೆ ನಡೆಯುತ್ತದೆ ಎಂಬುದು ಪ್ರತೀತಿ. ಹರಕೆ ಹೊತ್ತವರು ಧ್ವಜಾರೋಹಣದ ಬಳಿಕ ಮದ್ಯ–ಮಾಂಸ ತ್ಯಜಿಸಿ ವ್ರತ ಆಚರಿಸುತ್ತಾರೆ. ತೂಟೆದಾರದ ಸೇವೆ ಸಂದರ್ಭದಲ್ಲಿ ಅನಾಹುತ ನಡೆದ ಉದಾಹರಣೆಗಳೇ ಇಲ್ಲ. ಈ ಬೆಂಕಿ ಆಟ ಸಂದರ್ಭದಲ್ಲಿ ಎರಡು ಊರಿನ ಜನರಿಗೆ ಕುಂಕುಮ ಹಾಗೂ ಹೂವು ನೀಡಲಾಗುತ್ತದೆ. ವ್ರತಾದಾರಿಗಳು ದೇಹಕ್ಕೆ ಕುಂಕುಮ ಲೇಪಿಸಿಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.