ಮಂಗಳೂರು: ಸ್ಪಾರ್ಕ್ ಟ್ರೀ ತಂಡವು ‘ಕಿಡ್ಸ್ಫೆಸ್ಟ್ 2026’ ಮಕ್ಕಳ ವಿಶೇಷ ಉತ್ಸ ವವನ್ನು ಇದೇ 16 ಮತ್ತು 17ರಂದು ನಗರದ ಮೇರಿಹಿಲ್ನ ‘ಪಾಲೆಮಾರ್ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದ ಸ್ಪಾರ್ಕ್ ಟ್ರೀಯ ಸೌಜನ್ಯಾ ಹೆಗ್ಡೆ, ಕಿಡ್ಸ್ ಫೆಸ್ಟ್ನಲ್ಲಿ ಮಕ್ಕಳಿಗೆ ಮನರಂಜನೆಯ ಜೊತೆಗೆ ಕಲಿಕೆ, ಆಟಗಳು, ಸೃಜನಾತ್ಮಕ ಚಟುವಟಿಕೆ, ಕಮ್ಮಟ ಮತ್ತಿತರ ಆಕರ್ಷಕ ಕಾರ್ಯಕ್ರಮಗಳು ಇರಲಿವೆ. ‘ಕಿಡ್ಸ್ ಮ್ಯಾರಥಾನ್’ನಲ್ಲಿ ಮಕ್ಕಳು 1.5 ಕಿ.ಮೀ ದೂರವನ್ನು ಓಡುತ್ತಾ ಕ್ರಮಿಸಲಿದ್ದಾರೆ ಎಂದರು.

ಈ ಉತ್ಸವಕ್ಕೆ ಪ್ರವೇಶ ಶುಲ್ಕವಿಲ್ಲ. ಸಣ್ಣ ಮಕ್ಕಳಿಗೆ ತೆವಳುವ ಸ್ಪರ್ಧೆ ಇರಲಿದೆ. ವಿವಿಧ ವಯೋಮಾನದ ಮಕ್ಕಳಿಗೆ ಕ್ವಿಜ್, ಟ್ರೈಸಿಕಲ್ ಸ್ಪರ್ಧೆ, ಪ್ರಿನ್ಸ್– ಪ್ರಿನ್ಸೆಸ್, ರೊಬೊಟಿಕ್, ಚಿತ್ರಕಲೆ ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಅವಳಿ ಮಕ್ಕಳಿಗಾಗಿಯೇ ವಿಶೇಷ ಸ್ಪರ್ಧೆಯನ್ನು ಇದೇ 16ರಂದು ಆಯೋಜಿಸಲಾಗಿದೆ‘ ಎಂದರು.

ಸ್ಪಾರ್ಕ್ ಟ್ರೀ ತಂಡದ ಪ್ರೀತಂ ಪೊನ್ನಪ್ಪ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-29-274718510

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.