ಮಂಗಳೂರು: ಕಲಾಭಿ ವತಿಯಿಂದ ರಂಗ ಅಧ್ಯಯನ ಕೇಂದ್ರ, ಸೇಂಟ್ ಅಲೋಶಿಯಸ್ ಸಹಯೋಗದಲ್ಲಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ರಂಗೋತ್ಸವ ‘ಕಿಶೋರ ರಂಗಪಯಣ 2026’ ಸಮಾರೋಪಗೊಂಡಿತು.

‘ಮಂಥನ – ಶಿಕ್ಷಣ, ಕಲೆ ಮತ್ತು ಮಗು’ ವಿಷಯದ ಕುರಿತು ಸಂವಾದದಲ್ಲಿ ಇಂದಿನ ಪೀಳಿಗೆ, ಪೋಷಕರ ಪಾತ್ರ ಹಾಗೂ ಶಿಕ್ಷಣ ವ್ಯವಸ್ಥೆಯ ಬದಲಾವಣೆಗಳ ಕುರಿತು ಚರ್ಚೆ ನಡೆಯಿತು.

ಸಂವಾದದಲ್ಲಿ ರಂಗಕರ್ಮಿ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್, ಮೂಡುಬಿದಿರೆಯ ‘ಮೈಟ್’ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ದೀಪ್ತಿ ಶೆಟ್ಟಿ, ತರಬೇತುದಾರ ಮಹೇಶ್ ಕಾಮತ್, ಶಿಕ್ಷಣ ತಜ್ಞೆ ಸಚಿತಾ ನಂದಗೋಪಾಲ್ ಅನುಭವಗಳನ್ನು ಹಂಚಿಕೊಂಡರು. ಯೂಟ್ಯೂಬರ್ ಶರಣ್ ಚಿಲಿಂಬಿ ಸಂವಾದವನ್ನು ಸಂಯೋಜಿಸಿದರು.

ಪಠ್ಯೇತರ ಚಟುವಟಿಕೆಯ ಮಹತ್ವ, ರಂಗಕಲೆಯು ಮಕ್ಕಳ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ಭಾವನಾತ್ಮಕ ಬೆಳವಣಿಗೆಗೆ ಹೇಗೆ ಪೂರಕವಾಗುತ್ತದೆ ಎಂಬುದನ್ನು ತಿಳಿಸಲಾಯಿತು.

ಕಾರ್ಯಕ್ರಮದ ಸಮಾರೋಪವಾಗಿ ‘ಐ ಶಭಾಶ್’ ನಾಟಕವನ್ನು ಚರಿತ್ ಸುವರ್ಣ ಅವರ ನಿರ್ದೇಶನದಲ್ಲಿ ಮಕ್ಕಳಿಂದ ಪ್ರದರ್ಶಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-29-1986794940

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.