ಮಂಗಳೂರು: ‘ವಿಶ್ವ ಥಲಸ್ಸೇಮಿಯಾ ದಿನಾಚರಣೆ 2026’ರ ಅಂಗವಾಗಿ, ಮಂಗಳೂರಿನ ಕೆಎಂಸಿ ಆಸ್ಪತ್ರೆ ಅತ್ತಾವರವು ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ಪೀಡಿಯಾಟ್ರಿಕ್ ಹೆಮಟಾಲಜಿ-ಆಂಕೊಲಾಜಿ ವಿಭಾಗದ ಸಹಯೋಗದೊಂದಿಗೆ ಥಲಸೀಮಿಯಾ ಮತ್ತು ಇತರ ರಕ್ತದ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಅಂಗಾಂಶ ಮತ್ತು ದಾನಿಗಳ ಅಂಗಾಂಶದ ಹೊಂದಾಣಿಕೆ (ಎಚ್ಎಲ್ಎ ಟೈಪಿಂಗ್) ಪರೀಕ್ಷಿಸುವ ಉಚಿತ ಶಿಬಿರವನ್ನು ಶುಕ್ರವಾರ ನಡೆಸಿತು.

ವಿವಿಧ ಜಿಲ್ಲೆಗಳಿಂದ ಬಂದಿದ್ದ ಥಲಸ್ಸೇಮಿಯಾ, ಇತರ ರಕ್ತದ ಕಾಯಿಲೆ ಗಳಿಂದ ಬಳಲುತ್ತಿರುವ ಮಕ್ಕಳಿಗೆ ಸೂಕ್ತವಾದ ಮೂಳೆ ಮಜ್ಜೆ ದಾನಿ ಗಳನ್ನು ಗುರುತಿಸಲು ಅವರ ಒಡಹುಟ್ಟಿದವರು ಮತ್ತು ಪೋಷಕರು ಎಚ್ಎಲ್ಎ ಟೈಪಿಂಗ್ ಪರೀಕ್ಷೆಗೆ ಒಳಗಾದರು. ದುಬಾರಿ ವೆಚ್ಚದ ಪರೀಕ್ಷೆ ಇದಾಗಿದ್ದು, 'ಒನ್ ಗುಡ್ ಸ್ಟೆಪ್ ಫೌಂಡೇಷನ್' ಸಹಯೋಗದೊಂದಿಗೆ ಉಚಿತವಾಗಿ ಇದನ್ನು ನಡೆಸಲಾಯಿತು. ದಾನಿಗಳ ಹೊಂದಾಣಿಕೆಯಾದ ರೋಗಿಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಹೆಚ್ಚಿನ ಮೌಲ್ಯಮಾಪನ ಮತ್ತು ಮೂಳೆ ಮಜ್ಜೆ ಕಸಿ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ.

ಆಸ್ಪತ್ರೆಯ ಪೀಡಿಯಾಟ್ರಿಕ್ ಹೆಮಟಾಲಜಿ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ.ವಾಸುದೇವ ಭಟ್ ಕೆ., ‘ಎಚ್ಎಲ್ಎ ಟೈಪಿಂಗ್ ಪರೀಕ್ಷೆಯ ವೆಚ್ಚ ಭರಿಸುವುದು ಸಂತ್ರಸ್ತ ಕುಟುಂಬಗಳಿಗೆ ದೊಡ್ಡ ಸವಾಲು. ಶಿಬಿರದಲ್ಲಿ ಈ ಪರೀಕ್ಷೆ ನಡೆಸಿ ಅಗತ್ಯವಿರುವ ಮಕ್ಕಳಿಗೆ ನೆರವಾಗಿದ್ದೇವೆ’ ಎಂದು ತಿಳಿಸಿದರು.

ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಸುಧಾಕರ್ ಕಂಟಿಪುಡಿ, ‘ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೇರವಾದ ಈ ಶಿಬಿರ ಅರ್ಥಪೂರ್ಣ’ ಎಂದರು.

ಕೆಎಂಸಿ ಆಸ್ಪತ್ರೆ ಅತ್ತಾವರದ ವೈದ್ಯಕೀಯ ಅಧೀಕ್ಷಕ ಡಾ.ಚಕ್ರಪಾಣಿ, ‘ಹೊಂದಾಣಿಕೆಯಾಗುವ ಪ್ರತಿಯೊಬ್ಬ ದಾನಿಯು ಚಿಕಿತ್ಸೆಗಾಗಿ ಕಾಯುತ್ತಿರುವ ಮಗು ಮತ್ತು ಕುಟುಂಬಕ್ಕೆ ಹೊಸ ಭರವಸೆ ತುಂಬಿದ್ದಾರೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-29-222448514

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.